ಮಹಾತ್ಮ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ.. ಶಾಸಕ ಯತ್ನಾಳ ವಿರುದ್ಧ ಪ್ರಕರಣ ದಾಖಲು

author-image
Bheemappa
ಮಹಾತ್ಮ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ.. ಶಾಸಕ ಯತ್ನಾಳ ವಿರುದ್ಧ ಪ್ರಕರಣ ದಾಖಲು
Advertisment
  • ಮಹಾತ್ಮ ಗಾಂಧಿ ಕುರಿತು ಶಾಸಕ ಯತ್ನಾಳ ಮಾತಾಡಿದ್ದು ಏನು?
  • ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್
  • ಬಸನಗೌಡ ಯತ್ನಾಳ್ ವಿರುದ್ಧ ದೂರು ಕೊಟ್ಟವರು ಯಾರು..?

ವಿಜಯಪುರ: ಮಹಾತ್ಮ ಗಾಂಧೀಜಿ ಕುರಿತು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಸಂಬಂಧ ಯತ್ನಾಳ ವಿರುದ್ಧ ಆದರ್ಶನಗರ ಪೊಲೀಸ್​ ಠಾಣೆಯಲ್ಲಿ ಅಲ್ಲಾಭಕ್ಷ ಡೋಗರಿಸಾಬಾ ಬಢೇಘರ್ ಎನ್ನುವರು ಪ್ರಕರಣ ದಾಖಲು ಮಾಡಿದ್ದಾರೆ.

ಆದರ್ಶ ನಗರದಲ್ಲಿ ಮೇ 12 ರಂದು ನಡೆದ ಬಸವೇಶ್ವರ ದೇವಾಸ್ಥಾನದ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುವಾಗ ಮಹಾತ್ಮ ಗಾಂಧೀಜಿಗೆ ಅವಮಾನ ಮಾಡಿರುವ ಆರೋಪ ಮಾಡಲಾಗಿದೆ.

ಇದನ್ನೂ ಓದಿ:ಕೊಕೇನ್​ ಸೇವನೆಗಾಗಿ 1 ಕೋಟಿ ಮೌಲ್ಯದ ಆಸ್ತಿ ಮಾರಿದ ಪ್ರತಿಷ್ಠಿತ ಆಸ್ಪತ್ರೆಯ ಮಾಜಿ CEO

publive-image

ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನದ ಪಿತಾಮಹ‌. ನಮ್ಮ ದೇಶವನ್ನು ಹೊಡೆದು ಬೇರೆಯವರಿಗೆ ಪಾಕಿಸ್ತಾನ ಮಾಡಿಕೊಟ್ಟರು. ಆದರೂ ನಾವು ರಾಷ್ಟ್ರಪಿತ ಎಂದು ಬೀದಿ ಬೀದಿಗಳಲ್ಲೂ ಅವರ ಮೂರ್ತಿಗಳುನ್ನು ಸ್ಥಾಪನೆ ಮಾಡಿದ್ದೇವೆ ಎಂದು ಯತ್ನಾಳ ಹೇಳಿದ್ದರು.

ಸದ್ಯ ಈ ಸಂಬಂಧ ಯತ್ನಾಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ದೂರು ನೀಡಿರುವ ಅಲ್ಲಾಭಕ್ಷ ಡೋಗರಿಸಾಬಾ ಬಢೇಘರ್ ಅವರಿಗೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ. ಸಿಆರ್​​ಪಿಸಿ ಕಲಂ 157, 176 ಭಾರತೀಯ ನಾಗರಿಕ ಸುರಕ್ಷತೆ ಸಂಹಿತೆಯಡಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment