/newsfirstlive-kannada/media/post_attachments/wp-content/uploads/2025/05/House-Areest-AjazKhan.jpg)
ನವದೆಹಲಿ: ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದ ವಿವಾದದ ಬಳಿಕ ದೇಶದಲ್ಲಿ ಮತ್ತೊಂದು ರಿಯಾಲಿಟಿ ಶೋ ಕೆಂಗಣ್ಣಿಗೆ ಗುರಿಯಾಗಿದೆ. ಇಂಡಿಯಾಸ್ ಗಾಟ್ ಲ್ಯಾಟೆಂಟ್ ಆದರೂ ಗೇಲಿಗೆ ಸೀಮಿತವಾದ್ರೆ ಹೌಸ್ ಅರೆಸ್ಟ್ ಅನ್ನೋ ಈ ರಿಯಾಲಿಟಿ ಶೋ ಸಭ್ಯತೆಯ ಎಲ್ಲೆ ಮೀರಿ ಬ್ಯಾನ್ ಆಗುವ ಸುಳಿಯಲ್ಲಿ ಸಿಲುಕಿದೆ.
ಅಜಾಜ್ ಖಾನ್ ಅನ್ನೋ ಈ ಸ್ವಯಂಘೋಷಿತ ಹೀರೋ ಹೌಸ್ ಅರೆಸ್ಟ್ ಅನ್ನೋ ರಿಯಾಲಿಟಿ ಶೋ ನಿರ್ಮಾಪಕನಾಗಿದ್ದಾನೆ. ಈ ರಿಯಾಲಿಟಿ ಶೋನಲ್ಲಿ ಬರೀ ಅಶ್ಲೀಲ ಕಂಟೆಂಟ್‌ಗಳೇ ಇದೆ. ಉಲ್ಲು ಅನ್ನೋ ಆ್ಯಪ್‌ನಲ್ಲಿ ಈ ಹೌಸ್ ಅರೆಸ್ಟ್ ರಿಯಾಲಿಟಿ ಶೋ ಪ್ರಸಾರ ಮಾಡಲಾಗಿದೆ.
ಇತ್ತೀಚೆಗೆ ಹೌಸ್ ಅರೆಸ್ಟ್ ಶೋನ ಕೆಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಖಂಡನೆ ವ್ಯಕ್ತವಾಗಿದೆ. ನಿರ್ಮಾಪಕ ಅಜಾಜ್ ಖಾನ್, ರಿಯಾಲಿಟಿ ಶೋದಲ್ಲಿ ಭಾಗಿಯಾದ ಯುವತಿಯರಿಗೆ ಒಳ ಉಡುಪುಗಳನ್ನು ಬಿಚ್ಚುವಂತೆ ಹೇಳುತ್ತಾನೆ. ಅಷ್ಟೇ ಅಲ್ಲದೇ ಸೆಕ್ಸ್ ಆ್ಯಂಗಲ್ ಬಗ್ಗೆ ನಟಿಸುವಂತೆ ಹೇಳಿದ್ದಾನೆ.
ಮಹಿಳೆಯರು, ಮಕ್ಕಳ ಜೊತೆಗೆ ಇಂತಹ ಅಶ್ಲೀಲ, ಅಸಭ್ಯ ಕಂಟೆಂಟ್ ನೋಡಲು ಸಾಧ್ಯವಿಲ್ಲ. ಇಂಥಾ ರಿಯಾಲಿಟಿ ಶೋಗಳ ವಿರುದ್ಧ ಕೇಂದ್ರದ ವಾರ್ತಾ, ಪ್ರಸಾರ ಸಚಿವಾಲಯ ಕ್ರಮ ಕೈಗೊಳ್ಳಲು ಆಗ್ರಹ ಕೇಳಿ ಬಂದಿದೆ.
ಸಾರ್ವಜನಿಕರು, ಜನಪ್ರತಿನಿಧಿಗಳಿಂದ ಈ ರಿಯಾಲಿಟಿ ಶೋ ಬ್ಯಾನ್‌ಗೆ ಆಗ್ರಹ ಕೇಳಿ ಬಂದಿದೆ. ಅಶ್ಲೀಲ ಕಂಟೆಂಟ್ ಅನ್ನು ಪ್ರಸಾರ ಮಾಡಿದ ಆರೋಪದಲ್ಲಿ ಹೌಸ್ ಆರೆಸ್ಟ್ ರಿಯಾಲಿಟಿ ಶೋ ನಿರ್ಮಾಪಕ ಅಜಾಜ್ ಖಾನ್ ವಿರುದ್ಧ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಕೇಸ್‌ಗೆ ರೋಚಕ ಟ್ವಿಸ್ಟ್.. ಭಾಗಿಯಾದ 8 ಮಂದಿ ಯಾರು? ಸ್ಫೋಟಕ ಮಾಹಿತಿ ಬಯಲು
ಮುಂಬೈ ಪೊಲೀಸ್ ಠಾಣೆಯಲ್ಲಿ ಅಜಾಜ್ ಖಾನ್ ವಿರುದ್ಧ ದೂರು ದಾಖಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ (NCW) ಕೂಡ ಅಜಾಜ್ ಖಾನ್ ಹಾಗೂ ಉಲ್ಲು ಆ್ಯಪ್ ಸಿಇಒ ವಿಭು ಅಗರ್ವಾಲ್‌ಗೆ ಸಮನ್ಸ್ ಜಾರಿ ಮಾಡಿದೆ. ಹೌಸ್ ಆರೆಸ್ಟ್ ರಿಯಾಲಿಟಿ ಶೋ ನಡೆಸಿದ ತಪ್ಪಿಗೆ ಅಜಾಜ್ ಖಾನ್ ಅರೆಸ್ಟ್ ಆಗುವ ಭೀತಿ ಎದುರಿಸುತ್ತಿದ್ದಾರೆ. ಸಭ್ಯತೆ ಎಲ್ಲೆ ಮೀರಿದ ಈ ಶೋ ಕೂಡ ಬ್ಯಾನ್ ಆಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ