/newsfirstlive-kannada/media/post_attachments/wp-content/uploads/2024/12/WAD-OF-CASH.jpg)
ರಾಜ್ಯಸಭೆಯಲ್ಲಿ ಸಂಸತ್​​ನ ಭದ್ರತಾ ಸಿಬ್ಬಂದಿಯಿಂದ ಕಾಂಗ್ರೆಸ್​ ಸಂಸದ ಅಭಿಷೇಕ್ ಮನು ಸಿಂಘ್ವಿ ಕುಳಿತಿರುತ್ತಿದ್ದ ಸೀಟ್​ನಲ್ಲಿ ನೋಟಿನ ಕಂತೆಯನ್ನು ಪತ್ತೆ ಮಾಡಿದ್ದಾರೆ ಎಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಆರೋಪಿಸಿದ್ದಾರೆ. ಜಗದೀಪ್ ದನ್ಕರ್ ಅವರ ಈ ಹೇಳಿಕೆಯಿಂದ ಸಿಟ್ಟಿಗೆದ್ದ ಕಾಂಗ್ರೆಸ್​ ಪ್ರತಿಭಟನೆ ಮುಂದಾಗಿದ್ದು. ಮಲ್ಲಿಕಾರ್ಜುನ್ ಖರ್ಗೆ ತನಿಖೆಗೂ ಮೊದಲು ರಾಜ್ಯಸಭಾ ಅಧ್ಯಕ್ಷರು ಹೆಸರನ್ನು ಬಹಿರಂಗ ಮಾಡಿದ್ದು ತಪ್ಪು ಎಂದು ಕಿಡಿಕಾರಿದ್ದಾರೆ.
/newsfirstlive-kannada/media/post_attachments/wp-content/uploads/2024/12/ABHISHEK-MANU-SINGHVI.jpg)
ಇನ್ನು ಆರೋಪವನ್ನು ತಳ್ಳಿ ಹಾಕಿರುವ ಕಾಂಗ್ರೆಸ್​ ಸಂಸದ ಅಭಿಷೇಕ್ ಮನು ಸಿಂಘ್ವಿ, ನಾನು ರಾಜ್ಯಸಭೆಗೆ ಬರುವ ಮುನ್ನ ಕೇವಲ ಐನೂರು ರೂಪಾಯಿ ಇಟ್ಟುಕೊಂಡು ಬಂದಿದ್ದೆ. ಇಂತಹ ವಿಷಯವನ್ನು ನಾನು ರಾಜ್ಯಸಭೆಯಲ್ಲಿ ಮೊದಲ ಬಾರಿ ಕೇಳುತ್ತಿದ್ದೇನೆ. ನಾನು ರಾಜ್ಯಸಭೆಗೆ 12.57 ಕ್ಕೆ ಬಂದಿದ್ದೆ. ರಾಜ್ಯಸಭಾ ಕ್ಯಾಂಟೀನ್​ನಲ್ಲಿ ಅಯೋಧ್ಯ ಸಂಸದ ಎಂಪಿ ಅವಧೇಶ್ ಪ್ರಸಾದ್​​ರೊಂದಿಗೆ 1.30ರವರೆಗೆ ಕುಳಿತುಕೊಂಡಿದ್ದೆ ಎಂದು ಸಿಂಘ್ವಿ ಹೇಳಿದ್ದಾರೆ.
ಇದರ ನಡುವೆ ಅಭಿಷೇಕ್ ಮನು ಸಿಂಘ್ವಿ ರಾಜ್ಯಸಭಾ ಅಧ್ಯಕ್ಷ ತನಿಖೆಗೆ ಆದೇಶ ನೀಡಿದ್ದನ್ನು ಸ್ವಾಗತಿಸಿದ್ದಾರೆ. ಇದರಾಚೆ ತನ್ನಿಂದ ತಾನೆ ಲಾಕ್ ಆಗುವ ಸೀಟ್​ಗಳನ್ನು ಎಲ್ಲ ಸಂಸದರಿಗೆ ಹಾಗೂ ರಾಜ್ಯಸಭಾ ಸದಸ್ಯರಿಗೆ ನೀಡಿಬಿಡಿ. ಮತ್ತು ಅದರ ಕೀಯನ್ನು ಎಂಪಿ ಮನೆಗೆ ತೆಗೆದುಕೊಂಡು ಹೋಗಲು ಅವಕಾಶ ಕೊಟ್ಟುಬಿಡಿ. ಇಲ್ಲದಿದ್ದರೆ ಯಾರ ಮೇಲಾದರೂ ಕೂಡ ಇಂತಹದೊಂದು ಆರೋಪ ಸರಳವಾಗಿ ಮಾಡಬಹುದು ಎಂದು ಸಂಸದ ಸಿಂಘ್ವಿ ಹೇಳಿದ್ದಾರೆ.
ಇದನ್ನೂ ಓದಿ: ಸೂರ್ಯ ಶಿಕಾರಿಯಲ್ಲಿ ಮತ್ತೊಂದು ಮೈಲಿಗಲ್ಲು.. ಹೆಮ್ಮೆಯ ಇಸ್ರೋದಿಂದ ಹೊಸ ಸಮಾಚಾರ..!
ಇನ್ನು ಈ ಬಗ್ಗೆ ಮಾತನಾಡಿದ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್​, ಭದ್ರತಾ ಪಡೆ ಎಂದಿನಂತೆ ಎಲ್ಲಾ ರಾಜ್ಯಸಭೆಯನ್ನು ಪರಿಶೀಲಿಸುವಾಗ ಈ ಒಂದು ನೋಟಿನ ಕಂತೆ ಸಿಕ್ಕಿದ್ದು ಈಗಾಗಲೇ ತನಿಖೆಗೆ ನಡೆಸುವಂತೆ ಸೂಚಿಸಲಾಗಿದೆ. ನಿನ್ನ ಸಭೆಯನ್ನು ಮುಂದೂಡಿದ ಬಳಿಕ ನಿತ್ಯದಂತೆ ಪರಿಶೀಲನೆ ನಡೆಸುವ ವೇಳೆ ಸಂಸತ್​ನ ಭದ್ರತಾ ಸಿಬ್ಬಂದಿಗೆ ಈ ಒಂದು ನೋಟಿನ ಕಂತೆ ಸಿಕ್ಕಿದೆ. 222ನೇ ನಂಬರ್ ಸೀಟ್​ನಲ್ಲಿ ನೋಟಿನ ಕಂತೆ ಪತ್ತಯಾಗಿದ್ದು ಆ ಒಂದು ಸೀಟು ಅಭಿಷೇಕ್ ಮನು ಸಿಂಘ್ವಿ ಅವರಿಗೆ ನೀಡಲಾಗಿತ್ತು. ಕಾನೂನಿನ ಪ್ರಕಾರ ತನಿಖೆ ನಡೆಸಬೇಕಾಗುತ್ತದೆ. ಹೀಗಾಗಿ ತನಿಖೆಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಅವರಿಬ್ಬರೇ ರಾಜಕಾರಣ ಮಾಡಿ, ಇಬ್ಬರೇ ನಡೆಸಿಬಿಡ್ಲಿ -ಡಿಕೆಶಿ ಒಪ್ಪಂದ ಕುರಿತ ಹೇಳಿಕೆಗೆ ಪರಂ ಆಕ್ರೋಶ
ಇನ್ನು ಈ ಬಗ್ಗೆ ಆಕ್ರೋಶ ಹೊರ ಹಾಕಿದ ರಾಜ್ಯಸಭಾ ವಿರೋಧ ಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ, ನೀವು ಈಗಾಗಲೇ ಹೇಳಿದ್ದೀರಿ ಪ್ರಕರಣ ತನಿಖೆಯ ಹಂತದಲ್ಲಿ ಇದೆ ಎಂದು. ಅದು ಸಂಪೂರ್ಣವಾಗಿ ಸಾಬೀತಾಗುವವರೆಗೂ ನೀವು ಸಂಸದರ ಹೆಸರನ್ನು ಬಹಿರಂಗಗೊಳಿಸುವಂತಿಲ್ಲ ಎಂದು ರಾಜ್ಯಸಭಾ ಅಧ್ಯಕ್ಷರ ವಿರುದ್ಧ ಎಂದು ಖರ್ಗೆ ಕಿಡಿ ಕಾರಿದ್ದಾರೆ.
ಇನ್ನು ಖರ್ಗೆ ಮಾತಿಗೆ ತಿರುಗೇಟು ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರೇನ್ ರಿಜಿಜು,ಸೀಟ್ ನಂಬರ್ ಹಾಗೂ ಸಂಸದರ ಹೆಸರನ್ನು ಹೇಳುವುದರಲ್ಲಿ ತಪ್ಪೇನಿದೆ. ಸಂಸದರ ಹೆಸರು ಹಾಗೂ ಸೀಟ್​ ನಂಬರ್ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ರಾಜ್ಯಸಭೆಗೆ ಬಂಡಲ್​ಗಟ್ಟಲೇ ನೋಟು ಇಟ್ಟುಕೊಂಡು ಬರುವುದು ಎಷ್ಟು ಸರಿ?ಎಂದು ಪ್ರಶ್ನಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us