newsfirstkannada.com

ಟೈಮ್ ಆಯ್ತು ಗುರು ಬಾರ್ ಕ್ಲೋಸ್ ಮಾಡ್ತಿವಿ ಅಂದಿದ್ದಕ್ಕೆ ಗಲಾಟೆ; ಚುಚ್ಚಿ, ಚುಚ್ಚಿ ಕ್ಯಾಷಿಯರ್ ಹತ್ಯೆ!

Share :

Published April 22, 2024 at 11:36am

Update April 22, 2024 at 11:44am

  ಬಾರ್​ನಲ್ಲಿ ತಡರಾತ್ರಿ ನಡೆದ ಗಲಾಟೆ, ಕ್ಯಾಷಿಯರ್​​ ಭೀಕರ ಮರ್ಡರ್​

  ಬಿಯರ್ ಬಾಟಲ್‌ ಒಡೆದು ಕುತ್ತಿಗೆ, ಹೊಟ್ಟೆಗೆ ತಿವಿದ ಆರೋಪಿ

  ಕೊಲೆ ಮಾಡಿದ ಆರೋಪಿಯನ್ನ ಅರೆಸ್ಟ್ ಮಾಡಿದ ಪೊಲೀಸರು

ಕೊಡಗು: ಬಾರ್ ಟೈಮ್ ಆಯಿತು, ಕ್ಲೋಸ್ ಮಾಡುತ್ತೇವೆ ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಬಿಯರ್ ಬಾಟಲ್​ನಿಂದ ಕ್ಯಾಷಿಯರ್​ನ​ ಕುತ್ತಿಗೆ, ಹೊಟ್ಟೆಗೆ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆಯು ಜಿಲ್ಲೆಯ ಕುಶಾಲನಗರ ಕನ್ನಿಕಾ ಇಂಟರ್​ನ್ಯಾಷನಲ್​ ಬಾರ್​ನಲ್ಲಿ ತಡರಾತ್ರಿ ನಡೆದಿದೆ.

ಸೋಮವಾರಪೇಟೆಯ ಬೆಟ್ಟದಳ್ಳಿ ನಿವಾಸಿ ಬಾರ್ ಕ್ಯಾಷಿಯರ್​ ಸಂತೋಷ್ (40) ಕೊಲೆಯಾದವರು. ಕುಶಾಲನಗರದ ನಿವಾಸಿ ಹರ್ಷ ಕುಮಾರ್ ಕೃತ್ಯ ಎಸಗಿದ್ದು​ ಸದ್ಯ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ಮದ್ಯಪಾನ ಮಾಡಲೆಂದು ಬಾರ್​​ಗೆ ಬಂದಿದ್ದಾನೆ. ಈ ವೇಳೆ ತಡರಾತ್ರಿ 12 ಗಂಟೆ ಆಗಿದ್ದರಿಂದ ಟೈಮ್ ಆಯ್ತು ಇನ್ನು ಮುಚ್ಚುತ್ತೇವೆ ಎಂದು ಹೇಳಿ ಬಾರ್ ಮುಚ್ಚಲು ಕ್ಯಾಷಿಯರ್​ ಮುಂದಾಗಿದ್ದಾರೆ. ಇಷ್ಟಕ್ಕೆ ಜಗಳ ತೆಗೆದು ಬಿಯರ್ ಬಾಟಲ್​ ಅನ್ನು ಒಡೆದು ಕ್ಯಾಷಿಯರ್​​ ಕುತ್ತಿಗೆಗೆ ಹಾಗೂ ಹೊಟ್ಟೆಗೆ ಭೀಕರವಾಗಿ ಹಂತಕ ಚುಚ್ಚಿದ್ದಾನೆ. ಪರಿಣಾಮ ಕ್ಯಾಷಿಯರ್​ ಸಾವನ್ನಪ್ಪಿದ್ದಾನೆ.

ಕುಶಾಲನಗರದ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಆರೋಪಿಯನ್ನ ಕುಶಾಲನಗರ ಟೌನ್ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಕೊಲೆ ಮಾಡುವಾಗ ಆರೋಪಿ ಮದ್ಯಪಾನ ಮಾಡಿರುವುದು ಗೊತ್ತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೈಮ್ ಆಯ್ತು ಗುರು ಬಾರ್ ಕ್ಲೋಸ್ ಮಾಡ್ತಿವಿ ಅಂದಿದ್ದಕ್ಕೆ ಗಲಾಟೆ; ಚುಚ್ಚಿ, ಚುಚ್ಚಿ ಕ್ಯಾಷಿಯರ್ ಹತ್ಯೆ!

https://newsfirstlive.com/wp-content/uploads/2024/04/MDK_BAR_MURDER.jpg

Load More