/newsfirstlive-kannada/media/post_attachments/wp-content/uploads/2025/04/SIDDARAMAIAH-2.jpg)
ರಾಜ್ಯದಲ್ಲಿ ಚರ್ಚೆ ಆಗುತ್ತಿರುವ ಜಾತಿ ಗಣತಿ ವರದಿ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರುವಲ್ಲಿ ವಿಶೇಷ ಸಂಪುಟ ಸಭೆ ವಿಫಲವಾಗಿದೆ. ಪ್ರಬಲ ಸಮುದಾಯಗಳ ನಾಯಕರ ತೀವ್ರ ವಿರೋಧ ಹಿನ್ನೆಲೆ ಸಂಪುಟ ಸಭೆ ಅಪೂರ್ಣ ಆಗಿದೆ. ಮೇ 2ಕ್ಕೆ ಜಾತಿ ಗಣತಿ ಏಕೈಕ ಅಜೆಂಡಾ ಸಭೆ ಮುಂದೂಡಿಕೆ ಮಾಡಲಾಗಿದೆ.
ಲಿಂಗಾಯತ-ಒಕ್ಕಲಿಗ ಸಚಿವರ ಆಕ್ಷೇಪ!
ಸಚಿವ ಸಂಪುಟ ಸಭೆಗೂ ಮುನ್ನ ಸಿಎಂ ಅಭಿಪ್ರಾಯ ಆಲಿಸಿದ್ರು. ಒಕ್ಕಲಿಗ, ಲಿಂಗಾಯತ ಸಮುದಾಯದ ಅಭಿಪ್ರಾಯ ಕೇಳಿದ್ರು. ಸಂಪುಟ ಸಭೆಯ ಆರಂಭದಲ್ಲಿ ಏರುಧ್ವನಿಯಲ್ಲಿ ಮಾತುಕತೆ ಆಗಿದೆ. ಪ್ರಬಲ ಸಮುದಾಯ ಹಾಗೂ ಅಹಿಂದ ಸಚಿವರ ನಡುವೆ ಚರ್ಚೆ ಆಗಿದೆ.. ಯಾವ ಕಾರಣಕ್ಕೂ ಸಮೀಕ್ಷೆ ಒಪ್ಪಲ್ಲ ಎಂದ ಸಚಿವ ಮಲ್ಲಿಕಾರ್ಜುನ್ ಮಾತಿಗೆ ಡಿಸಿಎಂ ಡಿಕೆ ಶಿವಕುಮಾರ್, ಧ್ವನಿಗೂಡಿಸಿದ್ರು. ಈ ವೇಳೆ, ಏರುಧ್ವನಿಯಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ಆಡಿದ ಮಾತಿಗೆ ಏನು ಲೋಪವಾಗಿದೆಯೋ ಸರಿಪಡಿಸೋಣ ಅಂತ ಸಚಿವ ಲಾಡ್ ಸಮಜಾಯಿಷಿ ಕೊಟ್ರು.
ಇದನ್ನೂ ಓದಿ: ಬಲಿಷ್ಠ ಹೈದ್ರಾಬಾದ್ ಟೀಮ್ಗೆ ಮುಂಬೈ ಶಾಕ್.. ಬಿಗ್ ಬ್ಯಾಟರ್ಗಳಿದ್ರೂ ಸೋತ SRH
ಮಾತಿನ ಜಟಾಪಟಿಯಿಂದ ಯಾವ್ದೇ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗ್ಲಿಲ್ಲ. ಲಿಖಿತ ರೂಪದಲ್ಲಿ ಆಕ್ಷೇಪಗಳನ್ನ ನೀಡಲು ಸಿಎಂ ಸಿದ್ದು ಸಲಹೆ ನೀಡಿದ್ರು.. ಅಷ್ಟಕ್ಕೂ ಸಂಫುಟದಲ್ಲಿ ಸಚಿವರ ಎತ್ತಿದ ಪ್ರಶ್ನೆಗಳೇನು ಅನ್ನೋದನ್ನ ನೋಡೋದಾದ್ರೆ,
ಸಂಪುಟದಲ್ಲಿ ಸಚಿವರ ಪ್ರಶ್ನೆಗಳೇನು?
1. ಪರಿಶಿಷ್ಟ ಒಳಮೀಸಲು ಕೂಗಿಲ್ಲದ, ಪ್ರತ್ಯೇಕ ಧರ್ಮದ ಕಾವು ಇದ್ದಾಗ ಸಮೀಕ್ಷೆ
2. ಆ ವಾತಾವರಣದಲ್ಲಿ ದಾಖಲಿಕರಣ ಪ್ರಭಾವಕ್ಕೆ ಒಳಗಾಗಿರಬಹುದಲ್ಲವೇ?
3. ನಿರ್ದಿಷ್ಟ ಪ್ರಕರಣಗಳಲ್ಲಿ ಜಾತಿಯ ಒಟ್ಟು ಸಂಖ್ಯೆ ಬಹಳಷ್ಟು ವ್ಯತ್ಯಾಸವಿದೆ
4. ಯಾದಗಿರಿಯಲ್ಲಿ ರೆಡ್ಡಿ, ಲಿಂಗಾಯತರ ಸಂಖ್ಯೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ
5. ಸಾದರ ಲಿಂಗಾಯತರ ವಿಚಾರಕ್ಕೆ ಬಂದ್ರೂ ವ್ಯತ್ಯಾಸ, ಇದನ್ನು ಹೇಗೆ ಒಪ್ಪಲು ಸಾಧ್ಯ?
6. ಶೇ.7ರಷ್ಟಿದ್ದ ಸಮುದಾಯವನ್ನು ಪ್ರವರ್ಗ 1ಕ್ಕೆ ಸೇರಿಸಿದ್ದರ ಔಚಿತ್ಯವೇನು?
7. ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಆರ್ಥಿಕ ಅಂಶಗಳು ಪ್ರಧಾನವಾಗಿ ನುಸುಳಿವೆ
8. ವರದಿ ಅಂಗೀಕರಿಸಿ ಚರ್ಚಿಸೋಣ, ಲೋಪದೋಷ ಇದ್ರೆ ಸರಿಪಡಿಸಲು ಅವಕಾಶ
ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಳ್ಳಲಾಗದೇ ಜಾತಿ ಜ್ವಾಲೆ, ಫ್ರೀಜ್ ಆಗಿದೆ.. ಏಪ್ರಿಲ್ 24ರಂದು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲೂ ಸಂಪುಟ ಸಭೆ ನಡೆಯಲಿದೆ. ಮೇ 2ಕ್ಕೆ ಜಾತಿ ಗಣತಿಯನ್ನ ಏಕೈಕ ಅಜೆಂಡಾದೊಂದಿಗೆ ಮತ್ತೆ ಕ್ಲೈಮ್ಯಾಕ್ಸ್ ಇಡಲಾಗಿದೆ. ಹೀಗಾಗಿ ಇನ್ನು, 13 ದಿನ ಕ್ಯಾಲೆಂಡರ್ ಹಾಳೆಗಳು ಎಣಿಕೆ ಆಗಲಿದೆ.
ಇದನ್ನೂ ಓದಿ: ಅಭಿಷೇಕ್ ಶರ್ಮಾ ಪ್ಯಾಂಟ್ ಚೆಕ್ ಮಾಡಿದ ಸೂರ್ಯಕುಮಾರ್.. ಪಂದ್ಯದ ಮಧ್ಯೆ ಏನಾಯಿತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ