/newsfirstlive-kannada/media/post_attachments/wp-content/uploads/2024/08/SIDDARAMAIAH-3.jpg)
ಬರೋಬ್ಬರಿ 10 ವರ್ಷಗಳಿಂದ ಮೂಲೆ ಸೇರಿದ್ದ ಜಾತಿ ಗಣತಿ ವರದಿ ಮತ್ತೆ ಮುನ್ನೆಲೆಗೆ ಬಂದಿದೆ. ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಸಿಎಂ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಜಾರಿಗೂ ಮುನ್ನವೇ 2 ಪ್ರಬಲ ಸಮುದಾಯಗಳಾದ ಲಿಂಗಾಯತ, ಒಕ್ಕಲಿಗ ನಾಯಕರಿಂದ ವಿರೋಧ ವ್ಯಕ್ತವಾಗಿದೆ. ಇವರನ್ನ ವಿಶ್ವಾಸಕ್ಕೆ ಪಡೆಯಲು ಸಿಎಂ ಸಭೆ ಸೂತ್ರ ಅನುಸರಿಸ್ತಿದ್ದಾರೆ.
ಕಳೆದ ಫೆಬ್ರುವರಿಯಲ್ಲಿ ಜಾತಿಗಣತಿಯ ಅಂತಿಮ ವರದಿಯನ್ನ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಸಲ್ಲಿಸಿದೆ. ಲೋಕಸಭಾ ಎಲೆಕ್ಷನ್​​ ಕಾರಣಕ್ಕೆ ವರದಿ ನೆನೆಗುದಿಗೆ ಬಿದ್ದಿತ್ತು. ಇದೀಗ ಮತ್ತೆ ವರದಿ ವಿಶ್ವರೂಪ ಪಡೆದುಕೊಂಡಿದೆ. ಜಾರಿ ಮಾಡೇ ಬಿಡೋಣ ಅಂತಾ ಸಿಎಂ ಸಿದ್ದರಾಮಯ್ಯ ಕೂಡ ಸಜ್ಜಾಗಿದ್ದಾರೆ. ಸ್ವಪಕ್ಷದಲ್ಲೂ, ವಿಪಕ್ಷದಲ್ಲೂ ವಿರೋಧದ ಅಲೆ ಅಬ್ಬರಿಸೋಕೆ ಶುರುವಾಗಿದೆ.
ಒಕ್ಕಲಿಗ, ಲಿಂಗಾಯತ ಸಮುದಾಯದಿಂದ ಅಪಸ್ವರ
ಕಾಂತರಾಜ್ ವರದಿಗೆ ಲಿಂಗಾಯತ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಚರ್ಚೆ ನಡೆಸಲು ಇದೇ ಅಕ್ಟೋಬರ್​ನ 22ರಂದು ಸಭೆ ನಡೆಸಲು ಮುಂದಾಗಿದ್ದು, ಜಾತಿಗಣತಿ ವರದಿಯ ಸಾಧಕಬಾಧಕಗಳ ಚರ್ಚೆ ನಡೆಸಲಾಗ್ತಿದೆ. ಈ ಸಂಬಂಧ ಮಾಜಿ ಸಿಎಂಗಳಾದ ಯಡಿಯೂರಪ್ಪ ಹಾಗೂ ಬೊಮ್ಮಾಯಿಗೆ ಮೀಟಿಂಗ್​ಗೆ ಬರುವಂತೆ ಆಹ್ವಾನ ತಲುಪಿದೆ.
ಇದನ್ನೂ ಓದಿ:ಬೈ-ಎಲೆಕ್ಷನ್ ಅಭ್ಯರ್ಥಿಗಳ ಆಯ್ಕೆಗೆ ಜ್ಯೋತಿಷಿಗಳ ಮೊರೆ ಹೋದ ಡಿಕೆ ಶಿವಕುಮಾರ್..?
/newsfirstlive-kannada/media/post_attachments/wp-content/uploads/2024/09/SIDDARAMAIAH-4.jpg)
ಖುದ್ದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಿರಿಯ ನಾಯಕರ ಮನೆಗೆ ಭೇಟಿ ಕೊಟ್ಟು ಆಹ್ವಾನಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಮನೆಗೆ ಭೇಟಿ ಕೊಟ್ಟು ಸಭೆಗೆ ಬನ್ನಿ ಅಂತಾ ಕರೆಯೋಲೆ ನೀಡಿದ್ದಾರೆ. ಈ ಮೂಲಕ ಒಗ್ಗಟ್ಟಿನಿಂದ ವಿರೋಧಿಸಲು ಲಿಂಗಾಯತ ಸಮುದಾಯ ಮುಂದಾಗಿದೆ.
ಜಾಣನಡೆಯೇ ಸಿಎಂ ತಂತ್ರ
ಲಿಂಗಾಯತ ಸಮುದಾಯ ಹಾಗೂ ಒಕ್ಕಲಿಗ ಸಮುದಾಯ. ಈ ಎರಡು ಪ್ರಬಲ ಸಮಾಜವನ್ನ ಎದುರು ಹಾಕ್ಕೊಂಡು ಜಾತಿಗಣತಿ ಜಾರಿ ಮಾಡೋದು ಸುಲಭವಲ್ಲ. ವಿಪಕ್ಷ ನಾಯಕರು ಮಾತ್ರವಲ್ಲ. ಈ ಎರಡು ಸಮಾಜದ ಸ್ವಪಕ್ಷೀಯ ನಾಯಕರಿಂದಲೂ ಈ ವರದಿಗೆ ವಿರೋಧದ ಬಾವುಟ ಇದ್ದೇ ಇದೆ. ಹೀಗಾಗಿ ಸಿಎಂಗೆ ಕಾಂತರಾಜ್ ವರದಿ ಜಾರಿ ಮಾಡೋದು ಸುಲಭದ ತುತ್ತೇನು ಅಲ್ಲ. ಹೀಗಾಗಿಯೇ ಮಾತನಾಡಿ ವಿಶ್ವಾಸಕ್ಕೆ ಪಡೆದು ಮುಂದಿನ ಹೆಜ್ಜೆ ಇಡೋದಕ್ಕೆ ಸಿದ್ದರಾಮಯ್ಯ ಸಜ್ಜಾಗಿದ್ದಾರೆ.
ಇದೇ ಭಾನುವಾರ ಎರಡೂ ಸಮುದಾಯದ ನಾಯಕರೊಂದಿಗೆ, ಶಾಸಕರೊಂದಿಗೆ ಸಭೆ ನಡೆಸಲು ಸಿಎಂ ಮುಂದಾಗಿದ್ದಾರೆ. ಚರ್ಚೆ ಮಾಡಿ ಎಲ್ಲರನ್ನೂ ವಿಶ್ವಾಸಕ್ಕೂ ಪಡೆದು ನಂತರ ವರದಿ ಜಾರಿಗೊಳಿಸೋ ಯೋಚನೆ ಮಾಡಿದ್ದಂತಿದೆ. ಇದಕ್ಕೆ ಎರಡು ಸಮುದಾಯದ ಮುಖಂಡರು ಒಪ್ತಾರಾ ಕಾದುನೋಡಬೇಕು. ಆದರೆ ಸಿಎಂ ಮಾತ್ರ ಜಾತಿಗಣತಿ ಜಾರಿ ಜಟಾಪಟಿ ನಡುವೆ ಇಕ್ಕಟ್ಟಿನಲ್ಲಿ ಸಿಲುಕಿರೋದು ಸತ್ಯ.
ಇದನ್ನೂ ಓದಿ:ಚನ್ನಪಟ್ಟಣ ಬೈಎಲೆಕ್ಷನ್‌ಗೆ ದೋಸ್ತಿ ಟಿಕೆಟ್ ಹಂಚಿಕೆ ಫೈನಲ್; ಸಿ.ಪಿ ಯೋಗೇಶ್ವರ್‌ಗೆ ನಿರಾಸೆ ಫಿಕ್ಸ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us