/newsfirstlive-kannada/media/post_attachments/wp-content/uploads/2025/02/SIDDU-DK.jpg)
ಜಾತಿ ಗಣತಿ ಭವಿಷ್ಯ ನಿರ್ಣಾಯಕ ಹಂತ ತಲುಪಿದೆ. ಇಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ವಿಶೇಷ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬರಲಿದೆ.
ಕ್ಯಾಬಿನೆಟ್ ಕ್ಲೈಮ್ಯಾಕ್ಸ್!
ಸಭೆಯ ಆರಂಭದಲ್ಲಿ ಅಭಿಪ್ರಾಯ ಸಂಗ್ರಹಿಸುವ ಸಿಎಂ, ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಆಲಿಸಲಿದ್ದಾರೆ.. ಮೊದಲ ಹಂತದಲ್ಲಿ ಸಚಿವರಿಂದ ವೈಯಕ್ತಿಕ ಅಭಿಪ್ರಾಯ ಕೇಳ್ತಾರೆ.. ಪ್ರತಿ ಸಚಿವರಿಗೂ ಸಮಯಾವಕಾಶ ನೀಡುವ ಸಿಎಂ, ನಂತರ ಸಮುದಾಯವಾರು ಸಚಿವರ ಅಭಿಪ್ರಾಯ ಕೇಳಲಿದ್ದಾರೆ.. ಯಾವ್ಯಾವ ಸಮುದಾಯದಲ್ಲಿ ಏನೇನು ಅಭಿಪ್ರಾಯ ಇದೆ ಅನ್ನೋದನ್ನ ತಿಳಿಯಲಿದ್ದಾರೆ.. ಆ ನಂತ್ರ ಏನು ಮಾಡಬಹುದು ಎಂಬ ಸಲಹೆಯನ್ನ ಸಿಎಂ, ಮುಂದಿಡಲಿದ್ದಾರೆ. ಸಭೆಯಲ್ಲಿ ಏನೆಲ್ಲ ನಿರ್ಣಯ ತೆಗೆದುಕೊಳ್ಳಬಹುದು ಅನ್ನೋ ವಿವರ ಇಲ್ಲಿದೆ.
ಸಾಧ್ಯತೆ 1 : ಸಂಪುಟ ಉಪ ಸಮಿತಿ
ಗಣತಿ ಸಮೀಕ್ಷೆಯ ಅಧ್ಯಯನಕ್ಕಾಗಿ ಸಂಪುಟ ಉಪಸಮಿತಿ ರಚಿಸಬಹುದು
ವರದಿ ಸಲ್ಲಿಕೆಗೆ ಸಂಪುಟ ಉಪಸಮಿತಿಗೆ 3 ರಿಂದ 6 ತಿಂಗಳ ಕಾಲಾವಕಾಶ
ಸಾಧ್ಯತೆ 2 : ತಜ್ಞರ ಸಮಿತಿ ರಚನೆ
ಜಾತಿ ಜನಗಣತಿಯ ಅಧ್ಯಯನಕ್ಕಾಗಿ ತಜ್ಞರ ಸಮಿತಿ ರಚಿಸುವ ಸಾಧ್ಯತೆ
ತಜ್ಞರ ಸಮಿತಿಯಿಂದ ಸಾಧಕ ಬಾಧಕಗಳ ವರದಿ ಪಡೆಯುವ ಸರ್ಕಾರ
ಲೋಪಗಳನ್ನ ಗುರುತಿಸಲು ತಜ್ಞರ ಸಮಿತಿಗೆ ಸರ್ಕಾರದಿಂದ ಅವಕಾಶ
ಸಾಧ್ಯತೆ 3 : ವಿಶೇಷ ಅಧಿವೇಶನ
ಮೂರು ದಿನಗಳ ಕಾಲ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆ
ಸಾರ್ವಜನಿಕವಾಗಿ ಚರ್ಚೆಯಾಗಲಿ ಎಂಬ ಕಾರಣಕ್ಕೆ ಅಧಿವೇಶನ
ಸಾರ್ವಜನಿಕ ಚರ್ಚೆ ಬಳಿಕ ಸರ್ಕಾರದಿಂದ ಅಂತಿಮ ತೀರ್ಮಾನ
ಇದನ್ನೂ ಓದಿ: ಮೋದಿ, ಅಮಿತ್ ಶಾ ಸೇರಿ ಸರ್ಕಾರ ಬೀಳಿಸಲು ಪ್ಲಾನ್ -ಸಿದ್ದರಾಮಯ್ಯ, ಡಿಕೆಶಿಗೆ ಖರ್ಗೆ ಎಚ್ಚರಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ