Big Breaking: ಸರಣಿ ಸಭೆ ಬೆನ್ನಲ್ಲೇ ಬಿಗ್​ ಅನೌನ್ಸ್​.. ಜಾತಿ ಗಣತಿ, ಜನಗಣತಿಗೆ ಮೋದಿ ನಿರ್ಧಾರ

author-image
Ganesh
Updated On
Big Breaking: ಸರಣಿ ಸಭೆ ಬೆನ್ನಲ್ಲೇ ಬಿಗ್​ ಅನೌನ್ಸ್​.. ಜಾತಿ ಗಣತಿ, ಜನಗಣತಿಗೆ ಮೋದಿ ನಿರ್ಧಾರ
Advertisment
  • ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ ಪ್ರಕಟ
  • ಜಾತಿಗಣತಿ, ಜನಗಣತಿ ಮಾಡುವುದಾಗಿ ಘೋಷಣೆ
  • ಕ್ಯಾಬಿನೆಟ್ ಮೀಟಿಂಗ್ ಬೆನ್ನಲ್ಲೇ ಮಹತ್ವದ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸರಣಿ ಸಭೆಗಳನ್ನು ನಡೆಸಿದರು. ಇದೀಗ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು, ದೇಶಾದ್ಯಂತ ಜಾತಿ ಗಣತಿ ಮತ್ತು  ಜನಗಣತಿ ಮಾಡಲು ನಿರ್ಧಾರ ಮಾಡಿದೆ.

ರಾಜಕೀಯ ವ್ಯವಹಾರಗಳ ಸಚಿವ ಸಂಪುಟ (Cabinet Committee on Political Affairs) ಸಭೆ ಬಳಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಸುದ್ದಿಗೋಷ್ಟಿ ನಡೆಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರು. ಅಂತೆಯೇ ಕೇಂದ್ರ ಸರ್ಕಾರವೇ ದೇಶದಲ್ಲಿ ಸರ್ವೇ ನಡೆಸಿ ಜಾತಿಗಣತಿ ಮತ್ತು ಜನಗಣತಿಯನ್ನು ನಡೆಸಲಿದೆ.

ಜಾತಿಗಣತಿ ಘೋಷಣೆ ವೇಳೆ ಕೇಂದ್ರ ಸಚಿವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿ 1947 ರಿಂದ ಜಾತಿ ಗಣತಿ ನಡೆದಿಲ್ಲ. ಅದಕ್ಕೆ ಕಾರಣ ಹಿಂದಿನ ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಕೇವಲ ಜಾತಿ ಸಮೀಕ್ಷೆ ಮಾಡಿದೆ. ಅದು ಕೂಡ ರಾಜಕೀಯ ಉದ್ದೇಶದಿಂದ. ಅನೇಕ ರಾಜ್ಯದಲ್ಲಿ ಜಾತಿ ಸಮೀಕ್ಷೆಗಳು ರಾಜಕೀಯ ಉದ್ದೇಶಕ್ಕೆ ನಡೆದಿವೆ ಎಂದು ಆರೋಪಿಸಿದರು.

ಅಲ್ಲದೇ ಜಾತಿ ಗಣತಿಯ ಮೂಲವನ್ನು ಜನಗಣತಿಯಲ್ಲೇ ಸೇರಿಸಬೇಕು. ಈ ಬಗ್ಗೆ ನಮ್ಮ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ 

Advertisment