newsfirstkannada.com

ಯುವತಿಗೆ ಪಂಗನಾಮ.. ರಜನಿಕಾಂತ್ ಜೊತೆ ನಟಿಸಲು ಅವಕಾಶ ಕೊಡಿಸುವುದಾಗಿ ಲಕ್ಷ ಲಕ್ಷ ರೂಪಾಯಿ ವಂಚನೆ

Share :

Published March 15, 2024 at 8:30am

Update March 15, 2024 at 11:39am

    ಕಾಸ್ಟಿಂಗ್​ಗೆ ಹಣ ಖರ್ಚಾಗುತ್ತೆ ಎಂದು ದುಡ್ಡು ಇಸ್ಕೊಂಡ ಖದೀಮ

    ಇತ್ತ ಹಣವೂ ಇಲ್ಲದೇ, ಅವಕಾಶ ಇಲ್ಲದೇ ಮೋಸ ಹೋದ ಯುವತಿ

    ಹಂತ ಹಂತವಾಗಿ ಲಕ್ಷ ಲಕ್ಷ ಹಣ ಪಡೆದುಕೊಂಡ ಆರೋಪಿ ಎಸ್ಕೇಪ್

ಬೆಂಗಳೂರು: ಸೂಪರ್​ ಸ್ಟಾರ್ ರಜನಿಕಾಂತ್ ಜೊತೆ ಅಭಿನಯಿಸಲು ಅವಕಾಶ ಕೊಡಿಸುವುದಾಗಿ ಯುವತಿಯೊಬ್ಬರಿಗೆ ಬರೋಬ್ಬರಿ 3 ಲಕ್ಷದ 95 ಸಾವಿರ ರೂಪಾಯಿಗಳನ್ನ ಖದೀಮನೊಬ್ಬ ಪಂಗನಾಮ ಹಾಕಿದ್ದಾನೆ. ಈ ಸಂಬಂಧ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಕಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ವಂಚನೆ ಮಾಡಿದ ಆರೋಪಿ. ಈತನು ರಜನಿಕಾಂತ್ ಅವರ ಹೊಸ ಸಿನಿಮಾ ತಲೈವಾ-171 ಕೋಡ್​ ರೆಡ್​ ಸಿನಿಮಾ ಹೆಸರನ್ನು ಬಳಸಿ ಇನ್​​ಸ್ಟಾದಲ್ಲಿ ಜಾಹೀರಾತನ್ನು (ಆಡ್​) ಪ್ರಕಟಿಸಿದ್ದನು. ಇದನ್ನು ಗಮನಿಸಿದ್ದ ಯುವತಿ ಆರೋಪಿಯನ್ನು ಸಂಪರ್ಕ ಮಾಡಿದ್ದಳು. ಈ ವೇಳೆ ಕಾಸ್ಟಿಂಗ್​ಗೆ ಹಣ ಖರ್ಚು ಆಗುತ್ತದೆ ಎಂದು ಸಬೂಬು ಹೇಳಿ ಹಂತ ಹಂತವಾಗಿ 3 ಲಕ್ಷ 94 ಸಾವಿರ ಹಣ ಪಡೆದುಕೊಂಡಿದ್ದನು. ಇದೇ ರೀತಿ ಆನ್​​ಲೈನ್​ ಮೂಲಕವೇ ಅಡಿಷನ್ ಮಾಡಿ ಯುವತಿಯರಿಂದ ಹಣ ಪಡೆದು ವಂಚನೆ ಎಸಗುತ್ತಿದ್ದನು.

ಹಣ ಪಡೆದುಕೊಂಡ ಖದೀಮ ಯುವತಿಗೆ ಯಾವುದೇ ಮಾಹಿತಿ ನೀಡದೇ ಪರಾರಿಯಾಗಿದ್ದಾನೆ. ಈ ಕಡೆ ಯುವತಿ ಹಣವೂ ಇಲ್ಲದೇ, ಆ ಕಡೆ ನಟಿಸಲು ಅವಕಾಶ ಇಲ್ಲದೇ ಕಂಗಲಾಗಿ ಹೋಗಿದ್ದಾಳೆ. ಸದ್ಯ ಈ ಸಂಬಂಧ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಸುರೇಶ್ ಕುಮಾರ್ ವಿರುದ್ಧ ಐಟಿ ಆಕ್ಟ್​​ನಡಿ ದೂರು ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವತಿಗೆ ಪಂಗನಾಮ.. ರಜನಿಕಾಂತ್ ಜೊತೆ ನಟಿಸಲು ಅವಕಾಶ ಕೊಡಿಸುವುದಾಗಿ ಲಕ್ಷ ಲಕ್ಷ ರೂಪಾಯಿ ವಂಚನೆ

https://newsfirstlive.com/wp-content/uploads/2024/03/RAJANIKANTH.jpg

Load More