newsfirstkannada.com

ಸ್ವಯಂಕೃತ ಅಪರಾಧಗಳಿಗೆ ಬೆಲೆ ತೆತ್ತ ಆರ್​ಸಿಬಿ, LSG ವಿರುದ್ಧ ಸೋಲಿಗೆ ಇದೆ 8 ಕಾರಣ..!

Share :

Published April 3, 2024 at 11:35am

  ಚಿನ್ನಸ್ವಾಮಿ ಮೈದಾನದಲ್ಲಿ ಮತ್ತೆ ಮುಗ್ಗರಿಸಿದ ಆರ್​​ಸಿಬಿ

  ಫಾಫ್​ ಡುಪ್ಲೆಸಿ ಪಡೆಯ ಸೋಲಿಗೆ ಕಾರಣ ಏನು.?

  ಲಕ್ನೋ ಸೂಪರ್​ ಜೈಂಟ್ಸ್​ ‘ಲಕ್’ ಬದಲಾಗಿದ್ದು ಎಲ್ಲಿ.?

ಹೋಮ್​ಗ್ರೌಂಡ್​​ ಚಿನ್ನಸ್ವಾಮಿ ಮೈದಾನದಲ್ಲಿ ಆರ್​​​ಸಿಬಿ ಮತ್ತೊಮ್ಮೆ ಮುಗ್ಗರಿಸಿದೆ. ನಿಜ ಹೇಳಬೇಕಂದ್ರೆ ಲಕ್ನೋ ಎದುರು ಗೆಲ್ಲೋ ಅವಕಾಶ ಆರ್​​ಸಿಬಿಗೆ ಇತ್ತು. ಆನ್​ಫೀಲ್ಡ್​ನಲ್ಲಾದ ಯಡವಟ್ಟುಗಳು ತಂಡವನ್ನ ಸೋಲಿಗೆ ಗುರಿ ಮಾಡಿದ್ವು.

ಕಾರಣ ನಂ.1: ಕ್ವಿಂಟನ್​ ಡಿ ಕಾಕ್​ ಕ್ಯಾಚ್​ ಡ್ರಾಪ್​
ಆರ್​​ಸಿಬಿ ಮೊದಲ ತಪ್ಪು ಮಾಡಿದ್ದೇ ಇಲ್ಲೇ.. ಪಂದ್ಯದ 7ನೇ ಓವರ್​ನಲ್ಲೇ ಡಿಕಾಕ್​ ಆಟಕ್ಕೆ ಬ್ರೇಕ್​ ಹಾಕೋ ಅವಕಾಶವಿತ್ತು. ಕ್ಯಾಚ್​ ಡ್ರಾಪ್​ ಮಾಡಿದ ಮ್ಯಾಕ್ಸ್​ವೆಲ್​ ಜೀವದಾನ ನೀಡಿದ್ರು. ಸಿಕ್ಕ ಲೈಫ್​ ಲೈನ್​ ಬಳಸಿಕೊಂಡ ಡಿಕಾಕ್​ 81 ರನ್​ ಚಚ್ಚಿದ್ರು.

ಕಾರಣ ನಂ.2: ಕೈಕೊಟ್ಟ ಮೊಹಮ್ಮದ್ ಸಿರಾಜ್​​
ಆರ್​​ಸಿಬಿ ನಂಬಿಗಸ್ಥ ವೇಗಿ ಮೊಹಮ್ಮದ್​ ಸಿರಾಜ್​ ಫ್ಲಾಪ್​ ಶೋ ಮುಂದುವರೆಸಿದ್ರು. ಡಿ ಕಾಕ್​ ಒಬ್ಬರಿಗೆ 12 ಬಾಲ್​ ಬೌಲಿಂಗ್​ ಮಾಡಿ 28 ರನ್​ ಬಿಟ್ಟು ಕೊಟ್ರು. ಒಟ್ಟಾರೆ 4 ಓವರ್​​​ ಹಾಕಿ 47 ರನ್​ ಲೀಕ್​ ಮಾಡಿದ್ರು.

ಕಾರಣ ನಂ.3: ನಿಕೊಲಸ್​ ಪೂರನ್​ ಕ್ಯಾಚ್​ ಡ್ರಾಪ್​​
ನಿಕೊಲಸ್​​ ಪೂರನ್​​ 3 ರನ್​ಗಳಿಸಿದ್ದಾಗ ಜೀವದಾನ ಪಡೆದುಕೊಂಡ್ರು. ಅನುಜ್​ ರಾವತ್ ಕ್ಯಾಚ್​ ಡ್ರಾಪ್​ ಮಾಡಿದ್ರು. ಬಳಿಕ ಅಬ್ಬರಿಸಿದ ಪೂರನ್​ 5 ಸಿಕ್ಸರ್​​, 1 ಬೌಂಡರಿ ಸಹಿತ 40 ರನ್​ ಸಿಡಿಸಿದ್ರು. ಪರಿಣಾಮ ಲಕ್ನೋ 181 ರನ್​ಗಳ ಬಿಗ್​ ಸ್ಕೋರ್​ ಕಲೆ ಹಾಕ್ತು.

ಕಾರಣ ನಂ.4: ದುಬಾರಿಯಾದ ಕ್ಯಾಮರೂನ್​ ಗ್ರೀನ್​, ರೀಸಿ ಟಾಪ್ಲಿ
ಬೌಲರ್​​ಗಳಾದ ಕ್ಯಾಮರೂನ್​ ಗ್ರೀನ್​, ರಿಸೀ ಟಾಪ್ಲಿ ಕೂಡ ದುಬಾರಿಯಾದ್ರು. ಇವ್ರ ಕಳಪೆ ಬೌಲಿಂಗ್​ ಆರ್​​ಸಿಬಿಗೆ ಹೊರೆಯಾಯ್ತು.

ಕಾರಣ ನಂ.5: ಅತಿರಥ ಮಹಾರಥರ ಫ್ಲಾಪ್​ ಶೋ​.!
183 ರನ್​ಗಳ ಟಾರ್ಗೆಟ್​​ ಆರ್​​ಸಿಬಿಗೆ ದೊಡ್ಡ ಸವಾಲೇನಾಗಿರಲಿಲ್ಲ. ಆದ್ರೆ ಟಾಪ್​ ಆರ್ಡರ್​ ಬ್ಯಾಟರ್ಸ್​​ ತರಗೆಲೆಯಂತೆ ಉದುರಿದ್ರು. ವಿರಾಟ್​ ಕೊಹ್ಲಿ, ಫಾಫ್​​ ಡುಪ್ಲೆಸಿ, ಮ್ಯಾಕ್ಸ್​ವೆಲ್​, ಕ್ಯಾಮರೂನ್​ ಗ್ರೀನ್​​.. ಪೆವಿಲಿಯನ್​ ಪರೇಡ್​ ನಡೆಸಿದ್ರು.

ಕಾರಣ ನಂ.6: ಕ್ರಿಸ್​​ ಕಚ್ಚಿ ನಿಲ್ಲದ ಬ್ಯಾಟ್ಸ್​ಮನ್​ಗಳು
ಟಾಪ್​ ಆರ್ಡರ್​​ ಬ್ಯಾಟ್ಸ್​ಮನ್​ಗಳು ಮಾತ್ರವಲ್ಲ.. ಮಹಿಪಾಲ್​ ಲೋಮ್ರೊರ್​ ಹೊರತುಪಡಿಸಿದ್ರೆ, ಆರ್​​ಸಿಬಿಯ ಯಾವೊಬ್ಬ ಆಟಗಾರ ಕೂಡ ಕ್ರಿಸ್​ ಕಚ್ಚಿ ನಿಲ್ಲೋ ಯತ್ನವನ್ನೆ ಮಾಡಲಿಲ್ಲ. ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಪತನ ತಂಡವನ್ನ ಸಂಕಷ್ಟಕ್ಕೆ ದೂಡಿತು.

ಕಾರಣ ನಂ.7: ಮಯಾಂಕ್​ ಯಾದವ್​ ಎದುರು ತಿಣುಕಾಟ
ಲಕ್ನೋನ ಸ್ಪೀಡ್ ಸೆನ್ಸೇಷನ್​ ಮಯಾಂಕ್​ ಯಾದವ್​ ಎದುರು ಆರ್​​ಸಿಬಿ ಬ್ಯಾಟರ್ಸ್​ ತಿಣುಕಾಡಿದ್ರು. 4 ಓವರ್​​ ಟೈಟ್​ ಸ್ಪೆಲ್​ ಹಾಕಿದ ಮಯಾಂಕ್​ 3 ವಿಕೆಟ್​ ಉರುಳಿಸಿ, ಜಸ್ಟ್​​ 14 ರನ್​​ ಬಿಟ್ಟು ಕೊಟ್ರು.

ಕಾರಣ ನಂ.8: ಬದಲಾಗದ ಬ್ಯಾಟ್ಸ್​ಮನ್​​ಗಳ ಆ್ಯಟಿಟ್ಯೂಡ್​​
ಕೆಕೆಆರ್​​ ಎದುರಿನ ಸೋಲಿನಿಂದ ಆರ್​​ಸಿಬಿ ಬ್ಯಾಟ್ಸ್​​ಮನ್​ಗಳು ಎಚ್ಚೆತ್ತುಕೊಂಡಂತೆ ಕಾಣಲಿಲ್ಲ. ಲಕ್ನೋ ಎದುರೂ ಭಯದಿಂದಲೇ ಬ್ಯಾಟ್​ ಬೀಸಿದ್ರು. ಕೊಹ್ಲಿ – ಡುಪ್ಲೆಸಿ ಸ್ಪಿನ್​ ಎದುರು ತಿಣುಕಾಡಿದ್ರೆ, ಉಳಿದವರು ಸ್ಪೀಡ್​ ಬೌಲಿಂಗ್​ ಮುಂದೆ ಮಂಡಿಯೂರಿದರು.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸ್ವಯಂಕೃತ ಅಪರಾಧಗಳಿಗೆ ಬೆಲೆ ತೆತ್ತ ಆರ್​ಸಿಬಿ, LSG ವಿರುದ್ಧ ಸೋಲಿಗೆ ಇದೆ 8 ಕಾರಣ..!

https://newsfirstlive.com/wp-content/uploads/2024/04/RCB-20.jpg

Load More