ಗಂಗಾರತಿ ಮಾದರಿಯಲ್ಲೇ ಇಂದು ‘ಕಾವೇರಿ ಆರತಿ’; ಇಂದು ಬೆಂಗಳೂರಲ್ಲಿ ಏನೆಲ್ಲ ನಡೆಯುತ್ತೆ..?

author-image
Veena Gangani
Updated On
ಗಂಗಾರತಿ ಮಾದರಿಯಲ್ಲೇ ಇಂದು ‘ಕಾವೇರಿ ಆರತಿ’; ಇಂದು ಬೆಂಗಳೂರಲ್ಲಿ ಏನೆಲ್ಲ ನಡೆಯುತ್ತೆ..?
Advertisment
  • ಸಂಜೆ 5.30ಕ್ಕೆ ಗಾಯಕ ರಘು ದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮ
  • ಸಂಜೆ 7 ಗಂಟೆಗೆ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಪೂಜೆ ಆರಂಭ
  • ಸದಾಶಿವನಗರದಲ್ಲಿರುವ ಸ್ಯಾಂಕಿ ಕೆರೆಯಲ್ಲಿ ಕಾರ್ಯಕ್ರಮ ಆಯೋಜನೆ

ಬೆಂಗಳೂರು: ವಿಶ್ವ ಜಲ ದಿನದ ನಿಮಿತ್ತ ಜಲಮಂಡಳಿಯು ಸದಾಶಿವನಗರದಲ್ಲಿರುವ ಸ್ಯಾಂಕಿ ಕೆರೆಯಲ್ಲಿ ಇಂದು ಸಂಜೆ 5 ಗಂಟೆಯಿಂದ ಗಂಗಾರತಿ ಮಾದರಿಯಲ್ಲೇ ‘ಕಾವೇರಿ ಆರತಿ’ ನಡೆಯಲಿದೆ. ಕಾವೇರಿ ತಾಯಿಗೆ ಗೌರವ ಸೂಚಿಸುವ ಉದ್ದೇಶದಿಂದ ಕಾವೇರಿ ಆರತಿಯನ್ನು ಸರ್ಕಾರ ಆಯೋಜನೆ ಮಾಡಿದೆ.

ಇದನ್ನೂ ಓದಿ:65 ವರ್ಷದ ಹಳೇ ಸಿನಿಮಾ.. ಒಂದು ಹಾಡನ್ನು 105 ಬಾರಿ ಬರೆಯಲಾಯ್ತು; ಶೂಟಿಂಗ್ ಮಾಡಲು ತೆಗೆದುಕೊಂಡಿದ್ದು 2 ವರ್ಷ!

publive-image

ಕಾವೇರಿ ಆರತಿ ವಿಶೇಷತೆಗಳೇನು?

ಮಧ್ಯಾಹ್ನ 2 ಗಂಟೆಗೆ ಕಾಡು‌ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಗಂಗಾ ದೇವಿಗೆ ಹೋಮ ಹಾಕಿ ಪೂಜೆ ಮಾಡಲಾಗುವುದು. ಸಂಜೆ 4 ಗಂಟೆಗೆ ಕಾಡು ಮಲ್ಲೇಶ್ವರ ದೇವಾಲಯದಿಂದ ಮೆರವಣಿಗೆ ಮೂಲಕ ಸ್ಯಾಂಕಿ ಕೆರೆಗೆ ಆಗಮನವಾಗಲಿದೆ. ಭಾಗಮಂಡಲದಿಂದ ತರಲಾಗುವ ಕಾವೇರಿ ಜಲಕ್ಕೆ ಪೂಜೆ ಮಾಡಲಾಗುತ್ತದೆ. 108 ಕಳಶಗಳೊಂದಿಗೆ ಮೆರವಣಿಗೆ ಸಾಗಲಿದೆ. ಸಂಜೆ 7 ಗಂಟೆಯಿಂದ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಪೂಜೆ ಆರಂಭ ಆಗಲಿದೆ. ತೇಲುವ ವೇದಿಕೆಯಲ್ಲಿ ವಾರಾಣಸಿಯ ಪ್ರಸಿದ್ಧ ತಂಡದಿಂದ ಕಾವೇರಿ ಆರತಿ ಮೂಲಕ ಪ್ರತಿಜ್ಞಾವಿಧಿ ಸ್ವೀಕಾರ ಮಾಡಲಾಗುತ್ತದೆ. ಬಳಿಕ ಉತ್ತರ ಭಾರತದ ಪುರೋಹಿತರಿಂದ ಪೂಜೆ ಮಾಡಲಾಗುವುದು.

publive-image

ಮನರಂಜನಾ ಕಾರ್ಯಕ್ರಮಗಳು

ಸಂಜೆ 5.30ಕ್ಕೆ ಅನನ್ಯ ಭಟ್ ಹಾಗೂ ರಘು ದೀಕ್ಷಿತ್ ಅವರ ಸಂಗೀತ ಕಾರ್ಯಕ್ರಮ ಇರಲಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ತೇಲುವ ವೇದಿಕೆ ಸಿದ್ಧಪಡಿಸಲಾಗಿದೆ. ಇದನ್ನು ಮುಂಬೈನಿಂದ ತರಿಸಲಾಗಿದೆ. ಎರಡು ತಂಡಗಳು ಸುಮಾರು 50 ನಿಮಿಷಗಳು ವಿಜೃಂಭಣೆಯಿಂದ ಕಾವೇರಿ ಆರತಿ ನಡೆಸಲಿವೆ. ಇದರ ಜತೆಗೆ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ' ಎಂದು ಡಿ.ಕೆ. ಶಿವಕುಮಾ‌ರ್ ತಿಳಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment