Advertisment

Cauvery: ಉಕ್ಕಿ ಹರಿದ ಕಾವೇರಿ.. ಪಾವನವಾದ ಭಕ್ತರು.. ತಲಕಾವೇರಿ ತೀರ್ಥೋದ್ಭವದ ಸಂಭ್ರಮ

author-image
AS Harshith
Updated On
Cauvery: ಉಕ್ಕಿ ಹರಿದ ಕಾವೇರಿ.. ಪಾವನವಾದ ಭಕ್ತರು.. ತಲಕಾವೇರಿ ತೀರ್ಥೋದ್ಭವದ ಸಂಭ್ರಮ
Advertisment
  • ಕಾವೇರಿ ಹುಟ್ಟಿದ ನಾಡಿನಲ್ಲಿ ತುಲಾ ಸಂಕ್ರಮದ ಸಂಭ್ರಮ
  • 7 ಗಂಟೆ 40 ನಿಮಿಷಕ್ಕೆ ಕೊಡಗಿನಲ್ಲಿ ಉಕ್ಕಿದ ಹರಿದ ಕಾವೇರಿ
  • ವಿಜೃಂಭಣೆಯಿಂದ ನೆರವೇರಿದ ಕಾವೇರಿ ತೀರ್ಥೋದ್ಭವ

ತುಲಾ ಸಂಕ್ರಮಣದ ವಿಶೇಷ ದಿನವಾದ ಇಂದು ಕೊಡಗಿನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವವಾಗಿದೆ. ಸಾವಿರಾರು ಜನರು ಭಾಗಮಂಡಲದ ತಲಕಾವೇರಿಗೆ ಆಗಮಿಸಿ ಪುಣ್ಯ ಕಾರ್ಯವನ್ನು ಕಣ್ತುಂಬಿಸಿಕೊಂಡಿದ್ದಾರೆ.

Advertisment

ಮುಂಜಾನೆ 7 ಗಂಟೆ 40 ನಿಮಿಷಕ್ಕೆ ಪವಿತ್ರ ಕಾವೇರಿಯ ತೀರ್ಥೋದ್ಭವ ಜರುಗಲಿದೆ. ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ವಿಜೃಂಭಣೆಯಿಂದ ಕಾರ್ಯ ನಡೆದಿದೆ. ಭಕ್ತರಿಗಾಗಿ ಕಲ್ಯಾಣಿಯಲ್ಲಿ ಪುಣ್ಯ ಸ್ನಾನಕ್ಕೆ ಅವಕಾಶ ಕಲ್ಪಿಸಿದೆ.

publive-image

ಇದನ್ನೂ ಓದಿ: ಶತ್ರುಗಳ ಕಾಟ; ಕೌಟುಂಬಿಕ ಸಮಸ್ಯೆ; ಮನೆವರಿಗೆಲ್ಲಾ ಅವಮಾನ; ಇಲ್ಲಿದೆ ಇಂದಿನ ಭವಿಷ್ಯ

ಪ್ರತಿ ವರ್ಷದಂತೆ ಈ ವರ್ಷ ಕೂಡ ತಲಕಾವೇರಿಯಲ್ಲಿ ಸಹಸ್ರಾರು ಭಕ್ತರು ಕಾಣಿಸಿಕೊಂಡಿದ್ದಾರೆ. ಮಳೆ, ಚಳಿ ಎನ್ನದೆ ಪುಣ್ಯಕಾರ್ಯದಲ್ಲಿ ಭಾಗಿಗಳಾಗಿದ್ದಾರೆ. ಇನ್ನು ಒಂದು ತಿಂಗಳ ಕಾಲ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ನಡೆಯಲಿಕ್ಕಿದೆ.

Advertisment

ಇದನ್ನೂ ಓದಿ: ಗೆದ್ದ ಮಗಳ ತಬ್ಬಿ ಕಣ್ಣೀರು ಹಾಕಿದ ಅಬುಧಾಬಿ ರಾಜಕುಮಾರ; ತಂದೆ ಮಮತೆ ಕಂಡು ಭಾವುಕರಾದ ಜನ

publive-image

ಕಾವೇರಿ ಕೊಡಗಿನ ಕುಲದೇವತೆ. ಕನ್ನಡ ನಾಡಿನ ಜೀವನದಿ. ಕಾವೇರಿ ಹುಟ್ಟುವುದೇ ಇಲ್ಲಿಂದ. ದಕ್ಷಿಣ ಭಾರತದ ಗಂಗೆ ಎಂದೇ ಪೂಜಿಸಲ್ಪಡುವ ಕಾವೇರಿ ತೀರ್ಥದಲ್ಲಿ ಮಿಂದರೆ ಸಂಕಷ್ಟ ಪಾವನವಾಗುತ್ತದೆ ಎಂಬ ನಂಬಿಕೆ. ಹಾಗಾಗಿ ಭಕ್ತರು ಈ ಶುಭ ಸಂದರ್ಭದಲ್ಲಿ ತಲಕಾವೇರಿಗೆ ಆಗಮಿಸಿ ತೀರ್ಥೋಬ್ಬವದಲ್ಲಿ ಭಾಗಿಯಾಗುತ್ತಾರೆ. ಅದರಂತೆಯೇ ಇಂದು ನಡೆದ ತುಲಾ ಸಂಖ್ರಮಣದಲ್ಲಿ ಕಾವೇರಿ ಮಾತೆಯನ್ನು ಪೂಜಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment