/newsfirstlive-kannada/media/post_attachments/wp-content/uploads/2024/01/SIDDU-DKS-1.jpg)
ಮುಂಗಾರು ಮಳೆ ಆರಂಭದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡುವ ಸಂಕಷ್ಟ ಎದುರಾಗಿದೆ. ಪ್ರತಿನಿತ್ಯವೂ 1 ಟಿಎಂಸಿ ನೀರು ಬಿಡಬೇಕು ಎಂಬ ಆದೇಶವನ್ನ ಸರ್ಕಾರ ಪ್ರಶ್ನೆ ಮಾಡಿದೆ.. ಅಷ್ಟೇ ಅಲ್ಲ ಜುಲೈ ಅಂತ್ಯದವರೆಗೂ ನೀರು ಬಿಡೋಕೆ ಆಗಲ್ಲ ಅಂತಿರುವ ಸರ್ಕಾರ, ಮುಂದಿನ ಹೋರಾಟದ ಬಗ್ಗೆ ಚರ್ಚಿಸಿಲು ಇಂದು ಮಹತ್ವದ ಸರ್ವಪಕ್ಷ ಸಭೆಯನ್ನ ಕರೆದಿದೆ.
ತಮಿಳುನಾಡಿಗೆ ಜುಲೈ 31 ರವರೆಗೆ ಪ್ರತಿನಿತ್ಯ 1 ಟಿಎಂಸಿ ನೀರು!
ತಮಿಳುನಾಡಿಗೆ ಪ್ರತಿದಿನ ಒಂದು ಟಿಎಂಸಿ ನೀರು ಬಿಡುಗಡೆಗೆ ಆದೇಶವೊಂದು ಬಂದಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಕಣ್ಮುಚ್ಚಿ ವಾಸ್ತವ ಅರಿಯದೇ ಆದೇಶದ ಪ್ರತಿಗೆ ಅಂಕಿತ ಹಾಕಿ, ರಾಜ್ಯ ಸರ್ಕಾರಕ್ಕೆ ಸೂಚನೆ ಜಾರಿ ಮಾಡಿದೆ. ನ್ಯಾಯ-ಅನ್ಯಾಯಗಳ ಪರಿಶೀಲನೆ ಆಗದೇ ಏಕಾಏಕಿ ನೀಡಿದ ಆದೇಶ, ರಾಜ್ಯಕ್ಕೆ ಬರ ಸಿಡಿನಂತೆ ಬಡಿದಪ್ಪಳಿಸಿದೆ. ಈ ಎಲ್ಲಾ ಸಾಧಕ-ಬಾಧಕ ಅರಿಯಲು ಸರ್ಕಾರ ಇವತ್ತು ಸರ್ವಪಕ್ಷ ಸಭೆ ಕರೆದಿದೆ..
ಮೇಲ್ಮನವಿ ಸೇರಿ ಮುಂದಿನ ಹೋರಾಟಗಳ ಬಗ್ಗೆ ಚರ್ಚೆ ನಡೆಸಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ. ಸಂಜೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುವ ಸಭೆಗೆ ವಿಪಕ್ಷಗಳ ನಾಯಕರು, ಕೇಂದ್ರ ಸಚಿವರು, ಸಂಸದರು, ಕಾವೇರಿ ಜಲಾನಯದ ಶಾಸಕರು, ಎಂಎಲ್ಸಿಗಳಿಗೆ ಆಹ್ವಾನ ನೀಡಲಾಗಿದೆ.
ಕಾವೇರಿಗಾಗಿ ಸರ್ವಪಕ್ಷ ಸಭೆ
- ಜುಲೈ 12 ರಿಂದ ಜುಲೈ 31ರ ಅವಧಿಯಲ್ಲಿ ದಿನಕ್ಕೆ 1 ಟಿಎಂಸಿ
- ಕಾವೇರಿ ತೀರದಲ್ಲಿ ಮುಂಗಾರು ಮಳೆ ಕಣ್ಣಾಮುಚ್ಚಾಲೆ ಆಟ
- ಕಾವೇರಿ ಜಲಾನಯನದ ಡ್ಯಾಂಗಳಲ್ಲಿ ಕಾಡ್ತಿದೆ ನೀರಿನ ಕೊರತೆ
- ಈ ಪರಿಸ್ಥಿತಿಯಲ್ಲಿ ನೀರು ಬೀಡೋದು ಹೇಗೆ ಅನ್ನೋ ಸಭೆ
- ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಸೇರಿ ಸಂಪುಟ ಸದಸ್ಯರ ಚರ್ಚೆ
- ಕಾವೇರಿ ನೀರು ನಿರ್ಣಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಪ್ರಸ್ತಾಪ
- ಹವಾಮಾನ ಮುನ್ಸೂಚನೆ ಇದ್ರೂ ಶೇ.28ರಷ್ಟು ನೀರಿನ ಕೊರತೆ
- ಜುಲೈ ಅಂತ್ಯದವರೆಗೂ ನೀರು ಸಾಧ್ಯವಿಲ್ಲ ಅಂತ ಮನವರಿಕೆ
ಕಾವೇರಿ ನೀರು ಬಿಡುವ ವಿಚಾರವಾಗಿ ಸರ್ವಪಕ್ಷದ ಸಲಹೆ ಪಡೆಯೋದಕ್ಕೆ ರಾಜ್ಯ ಸರ್ಕಾರ ಮಂದಾಗಿದೆ. ರಾಜ್ಯದ ಮುಂದಿನ ನಡೆ ಏನು ಎಂಬ ಕುರಿತು ಸಭೆಯಲ್ಲಿ ತೀರ್ಮಾನ ಆಗಲಿದೆ. ಈ ಮೂಲಕ ಕಾವೇರಿ ವಿಚಾರದಲ್ಲಿ ಪಕ್ಷಾತೀತವಾಗಿ ಹೋರಾಟಕ್ಕೆ ಸಿದ್ದರಾಮಯ್ಯ ಸರ್ಕಾರ ಹೆಜ್ಜೆ ಇಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ