KKR ವಿರುದ್ಧ ಚಿನ್ನಸ್ವಾಮಿಯಲ್ಲಿ ಆರ್​ಸಿಬಿಗೆ ಕಹಿ ನೆನಪು.. ಗೆದ್ದಿದ್ದು ಯಾವಾಗ ಗೊತ್ತಾ..?

author-image
Ganesh
Updated On
KKR ವಿರುದ್ಧ ಚಿನ್ನಸ್ವಾಮಿಯಲ್ಲಿ ಆರ್​ಸಿಬಿಗೆ ಕಹಿ ನೆನಪು.. ಗೆದ್ದಿದ್ದು ಯಾವಾಗ ಗೊತ್ತಾ..?
Advertisment
  • ಐಪಿಎಲ್​ ಎರಡನೇ ಇನ್ನಿಂಗ್ಸ್​​ಗೆ ಕೌಂಟ್​ಡೌನ್ ಶುರು
  • ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ
  • RCB vs KKR ನಡುವಿನ ಫೈಪೋಟಿ ಹೇಗಿದೆ..?

ಐಪಿಎಲ್​ನ ಎರಡನೇ ಇನ್ನಿಂಗ್ಸ್ ಮೇ 17 ರಿಂದ ಪುನರ್​ ಆರಂಭ ಆಗುತ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಬಿಕ್ಕಟ್ಟು ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಐಪಿಎಲ್​​ ಪಂದ್ಯಗಳನ್ನು ಮುಂದೂಡಲಾಗಿತ್ತು.

ಅಂತೆಯೇ ನಾಡಿದ್ದು ಆರಂಭವಾಗುವ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ನಡುವೆ ಸೆಣಸಾಟ ನಡೆಯಲಿದೆ. ವಿಶೇಷ ಅಂದರೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಎರಡು ತಂಡಗಳು ಮುಖಾಮುಖಿ ಆಗುತ್ತಿವೆ. ಪಂದ್ಯವು ಸಂಜೆ 7.30ಕ್ಕೆ ಸರಿಯಾಗಿ ಆರಂಭವಾಗಲಿದೆ.

ಚಿನ್ನಸ್ವಾಮಿಯಲ್ಲಿ ಎರಡು ತಂಡಗಳ ಸೆಣಸಾಟ ಹೇಗಿದೆ ಅಂತಾ ನೋಡೋದಾದರೆ, 2015ರಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಸೋಲಿಸಿತ್ತು. ಅದು ಬಿಟ್ಟರೆ, ಬೇರೆಲ್ಲ ಪಂದ್ಯಗಳನ್ನೂ ಆರ್​​ಸಿಬಿ ಕೆಕೆಆರ್ ವಿರುದ್ಧ ಸೋತಿದೆ.

ಇದನ್ನೂ ಓದಿ: RCBಗೆ ಸ್ಫೋಟಕ ಬ್ಯಾಟರ್ಸ್​, ಆಲ್​ರೌಂಡರ್ಸ್​ ಕಮ್​ಬ್ಯಾಕ್.. ಮತ್ತೆ ಬೆಂಗಳೂರು ತಂಡ ಬಲಿಷ್ಠ​

ಅಲ್ಲದೇ ಚಿನ್ನಸ್ವಾಮಿಯಲ್ಲಿ ನಡೆದ ಕಳೆದ ಐದೂ ಪಂದ್ಯಗಳಲ್ಲೂ ಕೆಕೆಆರ್​ ವಿರುದ್ಧ ಆರ್​ಸಿಬಿ ಸೋಲನ್ನು ಕಂಡಿದೆ. ಹೀಗಾಗಿ ರಹಾನೆ ಪಡೆ ಮೇ 17 ರಂದು ನಡೆಯುವ ಪಂದ್ಯದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ. ಈಗಾಗಲೇ ಪಾಯಿಂಟ್ಸ್​ ಪಟ್ಟಿಯಲ್ಲಿ ಭದ್ರ ಸ್ಥಾನದಲ್ಲಿರುವ ಆರ್​ಸಿಬಿ, ಗೆಲುವಿನ ಹಳಿಯಲ್ಲಿದೆ. ಈ ಹಿಂದಿನ ಎಲ್ಲ ಸೋಲುಗಳ ಸೇಡನ್ನು ತೀರಿಸಿಕೊಳ್ಳಲು ಆರ್​ಸಿಬಿ ತುದಿಗಾಲಲ್ಲಿ ನಿಂತಿದೆ.

ಕೆಕೆಆರ್​ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಬಹುತೇಕ ಹೊರಬಿದ್ದಂತೆಯೇ. ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಕೆಕೆಆರ್, 12 ಪಂದ್ಯಗಳನ್ನು ಆಡಿ ಐದರಲ್ಲಿ ಮಾತ್ರ ಗೆದ್ದುಕೊಂಡಿದೆ. ಹೀಗಾಗಿ ಕೆಕೆಆರ್​ ಪ್ಲೇ-ಆಫ್​ಗೆ ಎಂಟ್ರಿಗೆ ಇರುವ ಅವಕಾಶ ಕ್ಷೀಣವಾಗಿದೆ.

ಇದನ್ನೂ ಓದಿ: ಅಭಿಮಾನಿಗಳ ಆತಂಕ ದೂರ, ಆರ್​ಸಿಬಿಗೆ ಬಂತು ಆನೆಬಲ.. ವಿಡಿಯೋ ಹಂಚಿಕೊಂಡ ಫ್ರಾಂಚೈಸಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment