/newsfirstlive-kannada/media/post_attachments/wp-content/uploads/2023/07/Train-Accident.jpg)
ಕಳೆದ ತಿಂಗಳು ಒಡಿಶಾದ ಬಾಲಾಸೋರ್​ ಜಿಲ್ಲೆಯ ಬಹನಗಾ ನಿಲ್ದಾಣದ ಬಳಿ ನಡೆದ ತ್ರಿವಳಿ ರೈಲು ಅಪಘಾತ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಅಪಘಾತದಲ್ಲಿ 1,100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರೆ, 290 ಜನರು ಪ್ರಾಣತೆತ್ತರು. ಆದರೆ ಕೇಂದ್ರೀಯ ತನಿಖಾ ದಳ ಈ ಅಪಘಾತದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದು, ಇದೀಗ ಮೂವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಲಾಗಿದೆ.
ಹಿರಿಯ ವಿಭಾಗದ ಎಂಜಿನಿಯರ್​ ಅರುಣ್​​ ಕುಮಾರ್​​ ಮಹಾಂತ, ಕಿರಿಯ ವಿಭಾಗದ ಎಂಜಿನಿಯರ್​ ಎಂಡಿ ಅಮೀರ್​ ಖಾನ್​ ಮತ್ತು ತಂತ್ರಜ್ಞ ಪಾಪು ಕುಮಾರ್​ನನ್ನು​ ಸಿಬಿಐ ಬಂಧಿಸಿದೆ. ಭಾರತೀಯ ದಂಡ ಸಂಹಿತೆಯ ಪ್ರಕಾರ ಸೆಕ್ಷನ್​ 304ರ ಅಡಿಯಲ್ಲಿ ಮೂವರು ರೈಲ್ವೆ ಉದ್ಯೋಗಿಗಳನ್ನು ಅರೆಸ್ಟ್​ ಮಾಡಲಾಗಿದೆ.
ಸಾಕ್ಷ್ಯಾಧಾರಗಳನ್ನು ನಾಶ
ಅರುಣ್​​ ಕುಮಾರ್​​ ಮಹಾಂತ ತನಿಖಾ ಸಮಿತಿಯ ಸದಸ್ಯರಾಗಿದ್ದರು. ಬಾಲಸೋರು ರೈಲ್ವೇ ಅಪಘಾತದ ಬಗ್ಗೆ ಪ್ರಾಥಮಿಕ ತಪಾಸಣಾ ವರದಿಯನ್ನು ಬರೆದಿದ್ದರು. ಆದರೆ ತಪಾಸಣಾ ವರದಿಯ ಬಗ್ಗೆ ಭಿನ್ನಾಭಿಪ್ರಾಯ ಮೂಡಿಬಂದವು.
ಇದೀಗ ಸಿಬಿಐ ಅಪರಾಧ ಸಾಕ್ಷ್ಯಾಧಾರಗಳನ್ನು ನಾಶ ಮಾಡಿದ ಹಿನ್ನಲೆಯಲ್ಲಿ 3 ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಅವರ ವಿರುದ್ಧ ಸೆಕ್ಷನ್​ 201ರ ಆರೋಪ ಹೊರಿಸಿದೆ.
ತ್ರಿವಳಿ ರೈಲು ಅಪಘಾತ
ಜೂನ್​2ರಂದು ಬಾಲಸೋರ್​ನಲ್ಲಿ ತ್ರಿವಳಿ ರೈಲು ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ 290 ಜನರು ಸಾವನ್ನಪ್ಪಿದ್ದರು. ಅದರಲ್ಲೂ ಪ್ರಾಣತೆತ್ತ ಪ್ರಯಾಣಿಕರ ಮೃತದೇಹವನ್ನು ಹುಡುಕಾಡಲು ಸಂಬಂಧಪಟ್ಟವರು, ಮನೆಯವರು, ಕುಟುಂಬಸ್ಥರು ನರಕಯಾತನೆ ಪಡುವ ದೃಶ್ಯ ಮಾತ್ರ ಎಲ್ಲರ ಕಣ್ಣು ಕಟ್ಟಿತ್ತು. ಆದರೆ ಈ ಅಪಘಾತಕ್ಕೆ ನಿಜವಾದ ಕಾರಣ ತಿಳಿಯಲು ಕೇಂದ್ರ ತನಿಖಾ ದಳ ಮುಂದಾಯಿತು. ಜೂನ್​ 6 ರಂದು ಕೂಲಂಕುಷವಾಗಿ ಈ ಅಪಘಾತದ ಬಗ್ಗೆ ತನಿಖೆಗೆ ಇಳಿಯಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us