newsfirstkannada.com

ಬರೋಬ್ಬರಿ ಐದು ಕೋಟಿ ಲಂಚ ಸ್ವೀಕಾರ; ED ಅಧಿಕಾರಿಯನ್ನೇ ಬಂಧಿಸಿದ CBI

Share :

29-08-2023

    ಇದು ಬೇಲಿಯೇ ಎದ್ದು ಹೊಲ ಮೇಯ್ದ ಕೇಸ್

    ಇಬ್ಬರು ED ಅಧಿಕಾರಿ ವಿರುದ್ಧ ಎಫ್​ಐಆರ್

    ದೆಹಲಿ ಲಿಕ್ಕರ್ ಹಗರಣದ ಜಾಲ ತುಂಬಾ ದೊಡ್ಡದು

ಸಿಬಿಐ (Central Bureau of Investigation) ಅಧಿಕಾರಿಗಳು ನಿನ್ನೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಯೊಬ್ಬರನ್ನು ಬಂಧಿಸಿದ್ದಾರೆ. ಬರೋಬ್ಬರಿ 5 ಕೋಟಿ ರೂಪಾಯಿ ಲಂಚ ಸ್ವೀಕಾರ ಆರೋಪ ಪ್ರಕರಣದಲ್ಲಿ ಸಿಬಿಐ ಲಾಕ್ ಮಾಡಿದೆ.

ದೆಹಲಿ ಲಿಕ್ಕರ್​ ಪಾಲಿಸಿ ಹಗರಣದಲ್ಲಿ ಉದ್ಯಮಿ ಅಮನ್​​ದೀಪ್ ಎಂಬುವವರಿಂದ ಇಡಿ ಸಹಾಯಕ ನಿರ್ದೇಶಕ ಪವನ್ ಖತ್ರಿ 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅದರಂತೆ ಲಂಚ ಸ್ವೀಕಾರ ಮಾಡುವ ವೇಳೆ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಜೊತೆಗೆ ಇಬ್ಬರು ED ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಯಾರೆಲ್ಲ ವಿರುದ್ಧ ಕೇಸ್..?

ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳು ನೀಡಿದ ಮಾಹಿತಿ ಆಧಾರದ ಮೇಲೆ ಸಿಬಿಐ ಅಧಿಕಾರಿಗಳು ಇಬ್ಬರು ಇ.ಡಿ (ED) ಅಧಿಕಾರಿಗಳ ವಿರುದ್ಧ ಎಪ್​ಐಆರ್ ದಾಖಲಿಸಿದ್ದಾರೆ. ಸಹಾಯಕ ನಿರ್ದೇಶಕ ಪವನ್ ಖತ್ರಿ ಹಾಗೂ ಅಪ್ಪರ್ ಡಿವಿಸಿನಲ್ ಕ್ಲರ್ಕ್​​ ನಿತೇಶ್ ಕೊಹರ್​ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಏರ್​ ಇಂಡಿಯಾ ಎಂಪ್ಲಾಯ್ ದೀಪಕ್ ಸಂಗ್ವನ್, ಉದ್ಯಮಿ ಅಮನ್​​ದೀಪ್ ಸಿಂಗ್ ಧಲ್​, ಗುರುಗ್ರಾಮ ನಿವಾಸಿ ಬಿರೇಂದರ್ ಪಾಲ್ ಸಿಂಗ್, ಚಾರ್ಟೆಡ್ ಅಕೌಂಟೆಂಟ್ ಪ್ರವೀಣ್ ಕುಮಾರ್ ವ್ಯಾಟ್ಸ್ ಹಾಗೂ ಕ್ಲಾರಿಜ್ ಹೋಟೆಲ್ಸ್​​ನ ಸಿಇಓ ವಿಕ್ರಮಾದಿತ್ಯ ಅನ್ನೋರನ್ನು ಬಂಧಿಸಿದ್ದಾರೆ.

ED, ಸಿಬಿಐ ಅಧಿಕಾರಿಗಳಿಗೆ ನೀಡಿದ ದೂರಿನ ಪ್ರಕಾರ, ದೆಹಲಿ ಲಿಕ್ಕರ್ ಹಗರಣದಲ್ಲಿ ಅಮನ್​ದೀಪ್ ಸಿಂಗ್ ಹಾಗೂ ಬಿರೇಂದರ್ ಪಾಲ್​​ಗೆ ತನಿಖೆಯಲ್ಲಿ ಸಹಾಯ ಮಾಡಲು ಪ್ರವೀಣ್ ವ್ಯಾಟ್ಸ್​ ಮೂಲಕ 5 ಕೋಟಿ ರೂಪಾಯಿ ಲಂಚ ನೀಡಿದ್ದಾರೆ. ಡಿಸೆಂಬರ್ 2022 ಮತ್ತು ಜನವರಿ 2023 ಅವಧಿಯಲ್ಲಿ ಲಂಚ ಸ್ವೀಕರಿಸಲಾಗಿದೆ ಎಂದು ದೂರಿದೆ.

ಪ್ರವೀಣ್ ವ್ಯಾಟ್ಸ್​​ ಇಡಿ ಅಧಿಕಾರಿಗಳಿಗೆ ನೀಡಿದ ಹೇಳಿಕೆಯಲ್ಲಿ ಅಮನ್​ದೀಪ್ ಧಲ್​ ಬಂಧನದ ಭೀತಿಯಲ್ಲಿ ಇರುತ್ತಾರೆ. ಅವರಿಗೆ ಈ ಪ್ರವೀಣ್ ವಾಟ್ಸ್​ ಬಂಧಿಸದಿರುವ ಬಗ್ಗೆ ಭರವಸೆ ನೀಡಿದ್ದ. ಆರೋಪಿ ಸಂಗ್ವನ್ ಎಂಬಾತ ಪ್ರವೀಣ್​ ವ್ಯಾಟ್ಸ್​ಗೆ ಕಳಂಕಿತ ಇಡಿ ಅಧಿಕಾರಿ ಪವನ್ ಖತ್ರಿಯನ್ನು 2022 ಡಿಸೆಂಬರ್​ನಲ್ಲಿ ಪರಿಚಯ ಮಾಡಿಕೊಟ್ಟಿದ್ದ ಎಂದು ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.

ಡೀಲ್ ಹೇಗಿತ್ತು ಅಂದರೆ..!

ದೀಪಕ್ ಸಂಗ್ವನ್, ಪ್ರವೀಣ್ ವ್ಯಾಟ್ಸ್​ಗೆ ಅಮನ್​ದೀಪ್​​ ಧಲ್​ನಿಂದ 3 ಕೋಟಿ ರೂಪಾಯಿ ಕೊಡಿಸುವ ಬಗ್ಗೆ ಭರವಸೆ ನೀಡಿದ್ದ. 50 ಲಕ್ಷ ರೂಪಾಯಿಯಂತೆ 6 ಕಂತಿನಲ್ಲಿ ಮೂರು ಕೋಟಿ ಕೊಡಿಸುವ ಭರವಸೆ ನೀಡಿದ್ದ. ನಂತರ ದೀಪಕ್ ಸಂಗ್ವಾನ್ ಹೆಚ್ಚುವರಿಯಾಗಿ ಅಮನ್​​ದೀಪ್ ಸಿಂಗ್ ಬಳಿ ಮತ್ತೆ 2 ಕೋಟಿ ರೂಪಾಯಿ ಹಣವನ್ನು ಕೇಳಿದ್ದ. ಅದಕ್ಕೆ 50 ಲಕ್ಷ ರೂಪಾಯಿಯಂತೆ ನಾಲ್ಕು ಕಂತಿನಲ್ಲಿ 2 ಕೋಟಿ ರೂಪಾಯಿ ನೀಡಲು ಒಪ್ಪಿದ್ದ ಎಂದು ಇಡಿ ಅಧಿಕಾರಿಗಳ ತನಿಖೆಯಲ್ಲಿ ಪ್ರವೀಣ್ ವ್ಯಾಟ್ಸ್​ ತಿಳಿಸಿದ್ದಾನೆ ಎನ್ನಲಾಗಿದೆ.

ಇಷ್ಟೆಲ್ಲ ನಡೆದ ಮೇಲೆ ದೀಪಕ್ ಸಂಗ್ವನ್ ಮತ್ತು ಪವನ್ ಖತ್ರಿಗೆ ಅಮನ್​​ದೀಪ್ ಸಿಂಗ್ ಧಲ್ ಅಡ್ವಾನ್ಸ್​ ಆಗಿ ಹಣ ನೀಡಿದ್ದ. 50 ಲಕ್ಷ ನಗದು ಹಣವನ್ನು ತಂದೆಯ ಮೂಲಕ ಕೊಡಲಾಗಿತ್ತು. ದೆಹಲಿಯ ವಸಂತ್ ವಿಹಾರ್​​ನಲ್ಲಿರುವ ಐಟಿಸಿ ಹೋಟೆಲ್​ನಲ್ಲಿ ನೀಡಲಾಗಿತ್ತು ಎಂದು ಇಡಿ ಅಧಿಕಾರಿಗಳಿಗೆ ಪ್ರವೀಣ್ ವ್ಯಾಟ್ಸ್​ ತಿಳಿಸಿದ್ದಾನೆ ಎಂದು ಜಾರಿ ನಿರ್ದೇಶನಾಲಯದ ಹೇಳಿದೆ. ಮಾರ್ಚ್​ 1, 2023ರಲ್ಲಿ ಲಂಚ ಸ್ವೀಕಾರ ಆರೋಪ ಪ್ರಕರಣದಲ್ಲಿ ಅಮನ್​​ದೀಪ್ ಧಲ್ ಮತ್ತು ಸಂಗ್ವಾನ್​​ನನ್ನು ಇಡಿ ಬಂಧಿಸಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ ಐದು ಕೋಟಿ ಲಂಚ ಸ್ವೀಕಾರ; ED ಅಧಿಕಾರಿಯನ್ನೇ ಬಂಧಿಸಿದ CBI

https://newsfirstlive.com/wp-content/uploads/2023/08/BRIBE.jpg

Load More