Advertisment

ಬೇಲೆಕೇರಿ ಅದಿರು ಕೇಸ್​; ಕಾಂಗ್ರೆಸ್​ MLA ಸತೀಶ್ ಸೈಲ್ ಅರೆಸ್ಟ್​.. ಇಂದು ಕೋರ್ಟ್​​ನಿಂದ ಶಿಕ್ಷೆ ಪ್ರಕಟ

author-image
Bheemappa
Updated On
ಬೇಲೆಕೇರಿ ಅದಿರು ಕೇಸ್​; ಕಾಂಗ್ರೆಸ್​ MLA ಸತೀಶ್ ಸೈಲ್ ಅರೆಸ್ಟ್​.. ಇಂದು ಕೋರ್ಟ್​​ನಿಂದ ಶಿಕ್ಷೆ ಪ್ರಕಟ
Advertisment
  • 6 ಕೇಸ್‌ನಲ್ಲಿ ಅಪರಾಧಿ ಅಂತ ಜನಪ್ರತಿನಿಧಿ ಕೋರ್ಟ್‌ ಜಡ್ಜ್‌ಮೆಂಟ್
  • ಮಹೇಶ್ ಬಿಳಿಯೆ, ಸತೀಶ್ ಸೈಲ್ ಅಪರಾಧಿ ಎಂದು ಕೋರ್ಟ್​ ತೀರ್ಪು
  • ಏನಿದು ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ..? ಇಲ್ಲಿದೆ ಎಲ್ಲ ಮಾಹಿತಿ​

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್ ಆರೋಪಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 6 ಕೇಸ್‌ಗಳಲ್ಲೂ ಶಾಸಕ ಸತೀಶ್ ಸೈಲ್ ದೋಷಿ ಎಂದು ವಿಶೇಷ ಕೋರ್ಟ್ ತೀರ್ಪು ನೀಡಿದೆ. ಇವತ್ತು ನ್ಯಾಯಾಲಯ ಶಿಕ್ಷೆಯ ಅವಧಿಯನ್ನ ಘೋಷಿಸಲಿದೆ.

Advertisment

ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಬೇಕು. ಅದು ಜನಪ್ರತಿನಿಧಿಯೇ ಆಗಲಿ, ಅಥವಾ ಸಾಮಾನ್ಯ ವ್ಯಕ್ತಿಯೇ ಆಗಲಿ ಕಾನೂನಿನ ಅಡಿ ಸಮಾನರು. ಇದೀಗ ಕಾಂಗ್ರೆಸ್‌ನ ಪ್ರಭಾವಿ ಶಾಸಕ ಅಪರಾಧಿ ಅಂತ ಕೋರ್ಟ್‌ ಆದೇಶ ಹೊರಡಿಸಿದೆ.

ಇದನ್ನೂ ಓದಿ: ನಾಮಪತ್ರಕ್ಕೆ ಕೊನೇ ದಿನ; ನಿಖಿಲ್ ಸೇರಿ ಇಂದು ಯಾರು ಯಾರು ಉಮೇದುವಾರಿಕೆ ಸಲ್ಲಿಸ್ತಾರೆ?

publive-image

ಬೇಲೆಕೇರಿ ಅದಿರು ನಾಪತ್ತೆ ಕೇಸ್‌.. ಶಾಸಕ ಸತೀಶ್ ಸೈಲ್‌ ಅರೆಸ್ಟ್‌!

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಅತಿದೊಡ್ಡ ಅಕ್ರಮ. ದೊಡ್ಡ ದೊಡ್ಡ ಘಟಾನುಘಟಿ ನಾಯಕರನ್ನೇ ಸುತ್ತಿಕೊಂಡಿದ್ದ ಹಗರಣ. ಇದೀಗ ಇದೇ ಕೇಸ್‌ ಹಾಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ನ ಸುಳಿಯೊಳಗೆ ಸಿಲುಕಿಸಿಕೊಂಡು ಸಂಕಷ್ಟಕ್ಕೆ ತಳ್ಳಿದೆ. ಸೀಜ್ ಆಗಿದ್ದ 11 ಸಾವಿರದ 312 ಮೆಟ್ರಿಕ್ ಟನ್ ಅದಿರನ್ನು ಅನುಮತಿ ಇಲ್ಲದೇ ಸಾಗಾಟ ಮಾಡಿದ್ದ ಕೇಸ್‌ನಲ್ಲಿ ಸತೀಶ್ ಸೈಲ್‌ ಅಪರಾಧಿ ಅಂತ ಜನಪ್ರತಿನಿಧಿಗಳ ಕೋರ್ಟ್ ಆದೇಶಿಸಿದೆ.

Advertisment

ಸತೀಶ್ ಸೈಲ್ ‘ಅಪರಾಧಿ’ ಆದೇಶ!

ಸಿಬಿಐನಿಂದ ಬೇಲೇಕೇರಿ ಅದಿರು ನಾಪತ್ತೆ ಸಂಬಂಧ 6 ಕೇಸ್‌
ಆರು ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಕೆ
ಅದಿರು ನಾಪತ್ತೆಯ 6 ಪ್ರಕರಣಗಳಲ್ಲಿ ನಿನ್ನೆ ಅಂತಿಮ ಆದೇಶ
82ನೇ CCH ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು
ಮಹೇಶ್ ಬಿಳಿಯೆ, ಸತೀಶ್ ಸೈಲ್ ‘ಅಪರಾಧಿ’ ಎಂದು ತೀರ್ಪು
ಇವತ್ತು ಕೋರ್ಟ್‌ನಿಂದ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟ

ಅಂದ್ಹಾಗೆ ಏನಿದು ಬೇಲಿಕೇರಿ ಅದಿರು ನಾಪತ್ತೆ ಪ್ರಕರಣ ಅಂತ ನೋಡಿದ್ರೆ..

ಏನಿದು ಅದಿರು ನಾಪತ್ತೆ ಕೇಸ್‌?

  • 2010ರಲ್ಲಿ ಬಳ್ಳಾರಿಯಿಂದ ಮ್ಯಾಂಗನೀಸ್ ಅದಿರು ಸಾಗಾಟ
  • ಕಾರವಾರ ಬಂದರು ಮೂಲಕ ವಿದೇಶಕ್ಕೆ ರಫ್ತು ಮಾಡಲಾಗಿತ್ತು
  • ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ಬೆಳಕಿಗೆ ತಂದಿದ್ರು
  • 7.74 ಮಿಲಿಯನ್ ಟನ್ ಕಬ್ಬಿಣದ ಅದಿರು ವಿದೇಶಕ್ಕೆ ರಫ್ತಾಗಿತ್ತು
  • 2006-07, 2010-11ರ ನಡುವೆ ಭಾರೀ ಪ್ರಮಾಣದ ಅದಿರು ರಫ್ತು
  • ಈ ಅಕ್ರಮದಿಂದ ಸರ್ಕಾರದ ಖಜಾನೆಗೆ ಭಾರೀ ನಷ್ಟವುಂಟಾಗಿತ್ತು
  • ಮಲ್ಲಿಕಾರ್ಜುನ ಶಿಪ್ಪಿಂಗ್ ಕಾರ್ಪೊರೇಷನ್ ಮಾಲೀಕ ಸತೀಶ್ ಸೈಲ್
  • ಈ ಇಬ್ಬರ ವಿರುದ್ಧ ಕ್ರಿಮಿನಲ್ ಕಾನ್ಸ್‌ಪೆರೆಸಿ, ಚೀಟಿಂಗ್ ಕೇಸ್ ದಾಖಲು
  • 2013ರ ಸೆಪ್ಟೆಂಬರ್ ತಿಂಗಳಲ್ಲಿ ಸಿಬಿಐ ಸತೀಶ್ ಸೈಲ್‌ರನ್ನ ಬಂಧಿಸಿತ್ತು
  • ಇದೀಗ ಇದೇ ಕೇಸ್‌ನಲ್ಲಿ ಸತೀಶ್ ಸೈಲ್ ಅಪರಾಧಿ ಎಂದು ಆದೇಶ

ಇದನ್ನೂ ಓದಿ:  ಗೃಹ ಆರೋಗ್ಯ ಯೋಜನೆಗೆ CM ಸಿದ್ದರಾಮಯ್ಯ ಚಾಲನೆ.. ಬಿಪಿ, ಶುಗರ್, ಕ್ಯಾನ್ಸರ್ ತಪಾಸಣೆ; ಉಚಿತ ಔಷಧಿ ಪೂರೈಕೆ

Advertisment

publive-image

ದೋಷಿ ಅಂತ ನ್ಯಾಯಾದೀಶರು​ ತೀರ್ಪು ನೀಡ್ತಿದ್ದಂತೆ ನ್ಯಾಯಾಲಯದ ಬಳಿಯೇ ಸತೀಶ್‌ ಸೈಲ್‌ನ ಸಿಬಿಐ ಬಂಧಿಸಿದೆ. ಬಂಧನದ ಬಳಿಕ ನೇರವಾಗಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ. ಎಷ್ಟು ವರ್ಷ ಶಿಕ್ಷೆ ಅಂತ ಕೋರ್ಟ್‌ ಇಂದು ಆದೇಶ ಪ್ರಕಟಿಸಲಿದ್ದು, ಜನಪ್ರತಿನಿಧಿಗಳ ನ್ಯಾಯಾಲಯದತ್ತ ಎಲ್ಲರ ಚಿತ್ತ ನೆಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment