/newsfirstlive-kannada/media/post_attachments/wp-content/uploads/2025/03/SUSHANT-SINGH.jpg)
ಬಾಲಿವುಡ್‌ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ನಟನೆ, ಪ್ರತಿಭೆ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದ ಸುಶಾಂತ್ ಸಾವಿನ ಬೆನ್ನಲ್ಲೇ ಆರೋಪ ಪ್ರತ್ಯಾರೋಪಗಳು ಕೇಳಿಬಂದಿತ್ತು. ಇಷ್ಟೇ ಅಲ್ಲ ಪ್ರಕರಣ ಕೂಡ ದಾಖಲಾಗಿತ್ತು. ಈ ಪ್ರಕರಣಕ್ಕೆ ಎಂಟ್ರಿ ಕೊಟ್ಟ ಸಿಬಿಐ ಪ್ರಕರಣಕ್ಕೆ ಲಾಜಿಕಲ್ ಎಂಡ್ ಕೊಟ್ಟಿದೆ. ಸಮಾಪ್ತಿ ವರದಿಯನ್ನ ಕೋರ್ಟ್‌ಗೆ ಸಲ್ಲಿಸಿದೆ.
2020ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಬದುಕು ಅಂತ್ಯಗೊಳಿಸಿದ ಸುದ್ದಿ ಬಹುತೇಕರನ್ನು ಬೆಚ್ಚಿ ಬೀಳಿಸಿತ್ತು. ಬಾಲಿವುಡ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಸುಶಾಂತ್ ಸಾವು ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸುಶಾಂತ್ ಸಾವು ಆತ್ಮಹತ್ಯೆಯಲ್ಲ ಎಂಬ ಆರೋಪವಿತ್ತು. ಈ ಕೇಸ್‌ನ ಬೆನ್ನುಬಿದ್ದಿದ್ದ ಸಿಬಿಐ ಕಳೆದ ನಾಲ್ಕು ವರ್ಷ ತನಿಖೆ ನಡೆಸಿ ಇದೀಗ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಮಾಪ್ತಿ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದೆ.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸ್‌ನಲ್ಲಿ ಪ್ರಭಾವಿಗಳ ಕೈವಾಡವಿರೋ ಆರೋಪ ಕೇಳಿಬಂದಿತ್ತು. ಸುಶಾಂತ್ ತಂದೆ ಮತ್ತು ಕುಟುಂಬಸ್ಥರು ದಾಖಲಿಸಿದ್ದ ಎರಡು ದೂರು ಆಧರಿಸಿ ಸಿಬಿಐ ತನಿಖೆ ನಡೆಸಿತ್ತು. ಆಗಸ್ಟ್ 2020ರಲ್ಲಿ ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಕಳೆದ ನಾಲ್ಕು ವರ್ಷಗಳಿಂದ ಸುದೀರ್ಘ ತನಿಖೆ ನಡೆಸಿದ ಸಿಬಿಐ ಇದೀಗ ಮುಂಬೈ ಕೋರ್ಟ್‌ಗೆ ವರದಿ ಸಲ್ಲಿಸಿದೆ.
ಇದನ್ನೂ ಓದಿ:ಸತ್ತಳು ಅಂತ ಅಂತ್ಯ ಸಂಸ್ಕಾರ ಮಾಡಿದ್ರು.. 18 ತಿಂಗಳ ಆ 1 ಟ್ಯಾಟೂ ಕೊಟ್ಟಿದೆ ಬಿಗ್ ಟ್ವಿಸ್ಟ್! ಏನದು?
ಸುಶಾಂತ್ ಸಾವಿನಲ್ಲಿ ಕಾಣದ ಕೈಗಳ ಕೈವಾಡ ಆರೋಪ ಕೇಳಿಬಂದಿತ್ತು. ಇದೀಗ ಸಿಬಿಐ ಕೋರ್ಟ್‌ಗೆ ಸಲ್ಲಿಸಿರೋ ವರದಿಯಲ್ಲಿ ಸುಶಾಂತ್ ಸಾವಿನ ಹಿಂದೆ ಕಾಣದ ಕೈಗಳ ಕೈವಾಡವಿದೆ ಅನ್ನೋ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಅಂತ ಸಿಬಿಐ ಹೇಳಿದೆ. ನಟನ ಸಾವಿಗೆ ಇತರರು ಪ್ರಚೋದನೆ ನೀಡಿರುವ ಬಗ್ಗೆಯಾಗಲೀ, ಒತ್ತಡ ಹಾಕಿರುವ ಬಗ್ಗೆಯೂ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಸಿಬಿಐ ವರದಿಯಲ್ಲಿ ಹೇಳಿದೆ. ಇನ್ನೂ ಪ್ರಕರಣದಲ್ಲಿ ಲಭ್ಯವಿರುವ ಎಲ್ಲಾ ಸಾಕ್ಷ್ಯಗಳನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದೆ. ಈ ಪೈಕಿ ಮರಣೋತ್ತರ ಪರೀಕ್ಷೆ ವರದಿಯನ್ನೂ ತನಿಖೆ ನಡೆಸಿದೆ. ಸುಶಾಂತ್ ವ್ಯಾಟ್ಸಾಪ್ ಸಂದೇಶ, ಮೆಸೇಜ್, ಕರೆ ಸೇರಿದಂತೆ ಎಲ್ಲಾ ಮಾಹಿತಿಗಳನ್ನ ಅಮೆರಿಕಕ್ಕೆ ಕಳುಹಿಸಿ ಪರೀಕ್ಷಿಸಿದೆ. ಈ ವರದಿಯಲ್ಲೂ ಯಾವುದೇ ಮೆಸೇಜ್ ಡಿಲೀಟ್ ಅಥವಾ ಎಡಿಟ್ ಮಾಡಿರೋದು ತಿಳಿದುಬಂದಿಲ್ಲ ಅಂತ ಸಿಬಿಐ ಕೋರ್ಟ್‌ಗೆ ತಿಳಿಸಿದೆ.
ಇನ್ನೂ ರಿಯಾ ಚಕ್ರವರ್ತಿ ಮೇಲಿನ ಆರೋಪ, ಆಕೆಯ ಹೇಳಿಕೆ ಸೇರಿದಂತೆ ಎಲ್ಲವನ್ನು ದಾಖಲಿಸಿ ತನಿಖೆ ನಡೆಸಲಾಗಿದೆ. ಸಾವಿಗೆ ಪ್ರಚೋದನೆ ನೀಡುವಂತ ಸಂಭಾಷಣೆ, ಸಂದೇಶ ಇಬ್ಬರ ಮಧ್ಯೆ ವಿನಿಮಯವಾಗಿಲ್ಲ ಅಂತ ಸಿಬಿಐ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: ನೀವು ದಿನಕ್ಕೆ ಎಷ್ಟು ಗಂಟೆ ಫೋನ್ ಬಳಸುತ್ತೀರಾ? ಸಮೀಕ್ಷೆಯಲ್ಲಿ ಶಾಕಿಂಗ್ ಸತ್ಯ ಬಹಿರಂಗ!
ಕಳೆದ ಹಲವು ವರ್ಷಗಳಿಂದ ಸುಶಾಂತ್ ಸಿಂಗ್ ಸಾವಿನ ಸುತ್ತ ಇದ್ದ ಅನುಮಾನಕ್ಕೆ ಸಿಬಿಐ ವರದಿ ತೆರೆ ಎಳೆದಿದೆ. ಸುಶಾಂತ್ ಸಾವಿನ ಹಿಂದೆ ಪ್ರಭಾವಿಗಳ ಕೈವಾಡವಿದೆ ಅನ್ನೋ ಆರೋಪ, ಅನುಮಾನಕ್ಕೆ ತೆರೆ ಬಿದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ