/newsfirstlive-kannada/media/post_attachments/wp-content/uploads/2025/03/CBSE-SYLBASS.jpg)
ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(CBSE) 2025-26 ಸಾಲಿನ 10 ಮತ್ತು 12ನೇ ತರಗತಿಯ ವಿದ್ಯಾರ್ಥೀಗಳಿಗಾಗಿ ಹೊಸ ಪಠ್ಯಕ್ರಮ ಅಂದ್ರೆ ಸಿಲಬಸ್​ ಬಿಡುಗಡೆ ಮಾಡಿದೆ. ಹೊಸದಾಗಿ ಬಿಡುಗಡೆಯಾಗಿರುವ ಪಠ್ಯಕ್ರಮ ಹಲವು ಶೈಕ್ಷಣಿಕವಾಗಿ ಹಲವು ಮಾರ್ಗಸೂಚಿಗಳನ್ನು, ಕಲಿಕೆಯ ರೀತಿಯನ್ನು ಮತ್ತು ರೋಡ್​ಮ್ಯಾಪ್​ ಹೇಗಿರಬೇಕೆಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಸಿಬಿಎಸ್​ಸಿ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಬಹಳಷ್ಟು ಬದಲಾವಣೆಯನ್ನು ಮಾಡಿದೆ.
10ನೇ ತರಗತಿಯ ವಿದ್ಯಾರ್ಥಿಗಳು ಈಗ ಎರಡು ಬಾರಿ ಬೋರ್ಡ್ ಎಕ್ಸಾಂ ಬರೆಯಲು ಅವಕಾಶ ನೀಡಲಾಗಿದೆ. ಫೆಬ್ರವರಿಯಲ್ಲಿ ಒಂದು ಬಾರಿ ಹಾಗೂ ಏಪ್ರಿಲ್​ನಲ್ಲಿ ಒಂದು ಬಾರಿ ಬರೆಯುವ ಅವಕಾಶವನ್ನು 2025-26ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡಲಾಗಿದೆ.
ಇನ್ನು 12ನೇ ತರಗತಿಯ ಪರೀಕ್ಷೆಯನ್ನು ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ. 12ನೇ ತರಗತಿಯ ಬೋರ್ಡ್ ಎಕ್ಸಾಂ 2026ರಲ್ಲಿ ಫೆಬ್ರವರಿ 17 ರಿಂದ ಆರಂಭವಾಗಿಲಿವೆ. ಈ ಬೋರ್ಡ್​ ಎಕ್ಸಾಂನಲ್ಲಿ ಸುಮಾರು 20 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ ಎಂದು ಸಿಬಿಎಸ್​ಸಿ ಹೇಳಿದೆ.
ಇನ್ನು 10ನೇ ತರಗತಿಯ ಪಠ್ಯಕ್ರಮ ಹಾಗೂ ಫಲಿತಾಂಶದ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ. ಸಿಬಿಎಸ್​ಸಿ 2025-26ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅಂಕಗಳನ್ನು ಶ್ರೇಣಿಕೃತ ವ್ಯವಸ್ಥೆಯಾಗಿ ಅಂದ್ರೆ ಗ್ರೇಡ್ ಸಿಸ್ಟಮ್ ಆಗಿ ಪರಿವರ್ತನೆ ಮಾಡಲಾಗಿದೆ. 9 ಪಾಯಿಂಟ್ ಗ್ರೇಡಿಂಗ್​ ಸಿಸ್ಟಮ್​ ಇದಾಗಿದ್ದು. ಪ್ರತಿ ಬೋರ್ಡ್ ಎಕ್ಸಾಂನ ಪ್ರತಿ ವಿಷಯಕ್ಕೆ 80 ಮಾರ್ಕ್ಸ್​ಗಳನ್ನು ನಿಗದಿಪಡಿಸಲಾಗಿದ್ದು. 20 ಅಂಕಗಳನ್ನು ಕಡ್ಡಾಯವಾಗಿ ಇಂಟರ್ನಲ್ ಅಸೆಸ್ಮೆಂಟ್​ಗೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: NTPC ಗ್ರೀನ್ ಎನರ್ಜಿ ನೇಮಕಾತಿ 2025; ಹುದ್ದೆಗಳಿಗೆ ಅರ್ಜಿ ಆಹ್ವಾನ.. ಉದ್ಯೋಗಕ್ಕೆ ಆಯ್ಕೆ ಹೇಗೆ ನಡೆಯುತ್ತೆ?
ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ ಪಾಸ್ ಆಗಬೇಕಾದಲ್ಲಿ ಕನಿಷ್ಠ ಶೇಕಡಾ 33 ರಷ್ಟು ಅಂಕವನ್ನು ಪಡೆಯಬೇಕಾಗುತ್ತದೆ. ಇನ್ನು ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿಗೊಳಿಸುವ ಮೂರು ವಿಷಯಗಳಲ್ಲಿ ಒಂದನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಕಂಪ್ಯೂಟರ್ ಅಪ್ಲಿಕೇಷನ್ (ಕೋಡ್​-165) ಇನ್ಫಾರ್ಮೇಷನ್ ಟೆಕ್ನಾಲಜಿ (ಕೋಡ್​-402) ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್​ (ಕೋಡ್-417) ಇದರ ಜೊತೆಗೆ ವಿದ್ಯಾರ್ಥಿಗಳು ಇಂಗ್ಲಿಷ್​ ಇಲ್ಲವೇ ಹಿಂದಿಯನ್ನು ಒಂದು ಭಾಷೆಯ ವಿಷಯವಾಗಿ ಆಯ್ಕೆ ಮಾಡಿಕೊಳ್ಳಬೇಕು( 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳು)
ಒಂದು ವೇಳೆ ಒಬ್ಬ ವಿದ್ಯಾರ್ಥಿ ಕೋರ್ ಸಬ್ಜೆಕ್ಟ್​ಗಳಾದ ವಿಜ್ಞಾನ ಗಣಿತ ಅಥವಾ ಸೋಷಿಯಲ್ ಸೈನ್ಸ್​ ಇಲ್ಲವೇ ಭಾಷೆಯ ವಿಷಯಗಳಲ್ಲಿ ಫೇಲ್ ಆಗಿ, ಆದ್ರೆ ಸ್ಕಿಲ್​ ಸಬ್ಜ್​ಕ್ಟಗಳಾದ ಅಥವಾ ಆಪ್ಷನಲ್ ಲ್ಯಾಂಗವೇಜ್ ಸಬ್ಜ್​ಕ್ಟಗಳಲ್ಲಿ ಪಾಸಾದಲ್ಲಿ ಫೇಲಾದ ವಿಷಯಗಳನ್ನು ಲ್ಯಾಂಗವೇಜ್ ಇಲ್ಲವೇ ಸ್ಕಿಲ್ ಸಬ್ಜೆಕ್ಟ್​ಗೆ ಅರ್ಹವೆಂದು ಬದಲಾಯಿಸಲಾಗುವುದು.
ಇನ್ನು 2026ರಲ್ಲಿ ನಡೆಯಲಿರುವ ಸಿಬಿಎಸ್​ಸಿ 12ನೇ ತರಗತಿ ಪರೀಕ್ಷೆಯಲ್ಲೂ 9ಪಾಯಿಂಟ್ಸ್​ ಗ್ರೇಡ್ ಸ್ಟಿಸ್ಟಮ್​ ಇರಲಿದೆ. ಈ ಬಾರಿ ನಾಲ್ಕು ಹೊಸ ಸ್ಕಿಲ್ ವಿಷಯಗಳನ್ನು ಪರಿಚಯಿಸಲಾಗಿದೆ. ಲ್ಯಾಂಡ್​ ಟ್ರಾನ್ಸ್​ಪೋರ್ಟ್​ ಅಸೋಸಿಯೇಟ್​ ಜೊತೆಗೆ ಎಲೆಕ್ರಟ್ರಾನಿಕ್ಸ್​ ಮತ್ತು ಹಾರ್ಡವೇರ್, ಪಿಜಿಕಲ್​ ಆ್ಯಕ್ಟಿವಿಟಿ ಟ್ರೇನರ್ ಮತ್ತು ಡಿಸೈನ್ ಥಿಂಕಿಂಗ್​ ಆ್ಯಂಡ ಇನೋವೇಷನ್​ ಎಂಬ ನಾಲ್ಕು ಸ್ಕಿಲ್​ ಸಂಬಂಧಿತ ವಿಷಯಗಳನ್ನು ಪರಿಚಯಿಸಲಾಗಿದೆ.
ಇನ್ಫಾರ್ಮೆಷನ್ ಪ್ರಾಕ್ಟಿಸ್, ಕಂಪ್ಯೂಟರ್ ಸೈನ್ಸ್​ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ ವಿದ್ಯಾರ್ಥೀಗಳು ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು
ಇನ್ನು 12ನೇ ತರಗತಿ ವಿದ್ಯಾರ್ಥೀಗಳಿಗೆ ಏಳು ಪ್ರಮುಖ ಕಲಿಕಾ ಕ್ರಮಗಳನ್ನು ವಿಸ್ತರಿಸಲಾಗಿದೆ. ಹ್ಯೂಮನಿಟಿಸ್, ಮ್ಯಾಥಮ್ಯಾಟಿಕ್ಸ್, ಸ್ಕಿಲ್ ಸಬ್ಜೆಕ್ಟ್ಸ್​, ಜನರಲ್ ಸ್ಟಡೀಸ್ ಮತ್ತು ಹೆಲ್ತ್ ಆ್ಯಂಡ್ ಪಿಸಿಕಲ್ ಎಜ್ಯುಕೇಷನ್​.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us