ಹೊಸ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ CBSC.. ಪಿಯುಸಿ ಮುಗಿಸಿದವ್ರಿಗೂ ಗೋಲ್ಡನ್ ಚಾನ್ಸ್​

author-image
Bheemappa
Updated On
ಹೊಸ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ CBSC.. ಪಿಯುಸಿ ಮುಗಿಸಿದವ್ರಿಗೂ ಗೋಲ್ಡನ್ ಚಾನ್ಸ್​
Advertisment
  • ವರ್ಷದ ಆರಂಭದಲ್ಲಿ ನೇಮಕಾತಿ ಮಾಡುತ್ತಿರುವ ಸಿಬಿಎಸ್​ಸಿ
  • ಉದ್ಯೋಗಾಕಾಂಕ್ಷಿಗಳಿಗೆ CBSC ಇಂದ 2025ರ ಗುಡ್ ನ್ಯೂಸ್​
  • ಈ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡಲಾಗಿದೆ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್​ಸಿ) ಇಲ್ಲಿ ಗ್ರೂಪ್ ಬಿ ಹಾಗೂ C ಉದ್ಯೋಗಗಳನ್ನು ನೇಮಕಾತಿ ಮಾಡಲಾಗುತ್ತಿದೆ. 200ಕ್ಕೂ ಅಧಿಕ ಹುದ್ದೆಗಳಿದ್ದು ಅರ್ಹ ಅಭ್ಯರ್ಥಿಗಳು ಇವಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ಕೇಂದ್ರ ಶಿಕ್ಷಣ ಸಚಿವಾಲಯದಡಿ ಸಿಬಿಎಸ್​ಸಿ ಇಲಾಖೆ ಬರುತ್ತದೆ. ಹೀಗಾಗಿ ಸ್ಯಾಲರಿ, ಬಡ್ತಿ ಇತ್ಯಾದಿ ಕೇಂದ್ರ ಸರ್ಕಾರದ ಸೌಲಭ್ಯಗಳು ಸರಿಯಾದ ಸಮಯಕ್ಕೆ ಆಯ್ಕೆಯಾದ ನೌಕರರಿಗೆ ತಲುಪಲಿವೆ.

ಸಿಬಿಎಸ್​ಸಿ ಆನ್​​ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅರ್ಹರು ಇಲಾಖೆಯ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳ ಕುರಿತು ಇಲ್ಲಿ ಮಾಹಿತಿ ಇದೆ. 2025ರ ವರ್ಷದಲ್ಲಿ ಸಿಬಿಎಸ್​ಸಿ ನೇಮಕ ಮಾಡುತ್ತಿರುವ ಮೊದಲ ಹುದ್ದೆಗಳಾಗಿವೆ. ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ಅಗತ್ಯ ಮಾಹಿತಿ, ಮಾನದಂಡಗಳು, ವಯಸ್ಸಿನ ಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹೇಗೆ ಇರುತ್ತದೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿ ಸಂಪೂರ್ಣವಾಗಿದೆ.

ಉದ್ಯೋಗಗಳ ಹೆಸರು?

ಸೂಪರಿಂಟೆಂಡೆಂಟ್
ಜೂನಿಯರ್ ಅಸಿಸ್ಟೆಂಟ್

ಸ್ಯಾಲರಿ ಎಷ್ಟು ಇದೆ?

ಸೂಪರಿಂಟೆಂಡೆಂಟ್- 35,400 ದಿಂದ 1,12,400 ರೂಪಾಯಿಗಳು
ಜೂ.ಅಸಿಸ್ಟೆಂಟ್- 19,900 ದಿಂದ 63,200 ರೂಪಾಯಿಗಳು

ಒಟ್ಟು ಕೆಲಸಗಳು- 112
ಕೆಲಸ ಮಾಡುವ ಸ್ಥಳ- ಭಾರತದ್ಯಾಂತ

publive-image

ಇದನ್ನೂ ಓದಿಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್; KEA ಇಂದ ಶೀಘ್ರವೇ 2,609 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ

ವಿದ್ಯಾರ್ಹತೆ ಏನು ಕೇಳಲಾಗಿದೆ?

ಸೂಪರಿಂಟೆಂಡೆಂಟ್- ಯಾವುದೇ ಪದವಿ (ಕಂಪ್ಯೂಟರ್ ಜ್ಞಾನ, ಹಿಂದಿ, ಇಂಗ್ಲಿಷ್ ಟೈಪಿಂಗ್ ಸ್ಕಿಲ್ ಇರಬೇಕು)
ಜೂನಿಯರ್ ಅಸಿಸ್ಟೆಂಟ್- ದ್ವಿತಿಯ ಪಿಯುಸಿ (ಕಂಪ್ಯೂಟರ್ ಜ್ಞಾನ, ಹಿಂದಿ, ಇಂಗ್ಲಿಷ್ ಟೈಪಿಂಗ್ ಸ್ಕಿಲ್ ಇರಬೇಕು)

ವಯೋಮಿತಿ
18 ರಿಂದ 30 ವರ್ಷಗಳ ಒಳಗಿನವರಿಗೆ ಅವಕಾಶ

ಆಯ್ಕೆ ಪ್ರಕ್ರಿಯೆ

  • ಲಿಖಿತ ಪರೀಕ್ಷೆ
  • ಕೌಶಲ್ಯ ಪರೀಕ್ಷೆ (Skill test)
  • ದಾಖಲೆ ಪರಿಶೀಲನೆ

ಮುಖ್ಯವಾದ ದಿನಾಂಕಗಳು

  • ನೋಟಿಫಿಕೇಶನ್ ರಿಲೀಸ್ ದಿನಾಂಕ- 31 ಡಿಸೆಂಬರ್ 2024
  • ಅರ್ಜಿ ಆರಂಭದ ದಿನಾಂಕ- 02 ಜನವರಿ 2025
  • ಅರ್ಜಿಗೆ ಕೊನೆಯ ದಿನಾಂಕ- 31 ಜನವರಿ 2025

ಅರ್ಜಿ ಶುಲ್ಕ ಎಷ್ಟು..?
ಜನರಲ್, ಇಡಬ್ಲುಎಸ್, ಒಬಿಸಿ- 800 ರೂಪಾಯಿಗಳು
ಎಸ್​​ಸಿ, ಎಸ್​ಟಿ, ಮಾಜಿ ಸೈನಿಕ- ಶುಲ್ಕ ಇಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment