/newsfirstlive-kannada/media/post_attachments/wp-content/uploads/2024/05/sslc.jpg)
ನವದೆಹಲಿ: 2025ನೇ ಸಾಲಿನ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದೆ. 2025ರ ಶೈಕ್ಷಣಿಕ ವರ್ಷದ 12 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟ ಮಾಡಲಾಗಿದೆ. ವಿಶೇಷ ಎಂದರೆ ಈ ಬಾರಿ ಶೇಕಡಾ 91ರಷ್ಟು ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಶೇಕಡಾ 88.39ರಷ್ಟು ಮಕ್ಕಳು ಪಾಸ್ ಆಗಿದ್ದಾರೆ.
ಇದನ್ನೂ ಓದಿ:BREAKING: CBSE 12ನೇ ತರಗತಿ ಫಲಿತಾಂಶ.. ಈ ಬಾರಿ ಶೇ.91ರಷ್ಟು ವಿದ್ಯಾರ್ಥಿನಿಯರು ಪಾಸ್
/newsfirstlive-kannada/media/post_attachments/wp-content/uploads/2024/09/CBSC_EXAMS.jpg)
ಕಳೆದ ಫೆಬ್ರವರಿ 15ರಿಂದ 4 ಏಪ್ರಿಲ್‌ವರೆಗೆ CBSE 12ನೇ ತರಗತಿ ಪರೀಕ್ಷೆ ನಡೆಸಲಾಗಿತ್ತು. 2025ನೇ ಸಾಲಿನಲ್ಲಿ 16 ಲಕ್ಷದ 92 ಸಾವಿರದ 794 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 14 ಲಕ್ಷದ 96 ಸಾವಿರದ 307 ಮಕ್ಕಳು 12ನೇ ತರಗತಿ ಪಾಸ್ ಮಾಡಿದ್ದಾರೆ.
ಈ ಬಾರಿ CBSE 12ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 99.60ರಷ್ಟು ಫಲಿತಾಂಶ ಪಡೆಯುವ ಮೂಲಕ ವಿಜಯವಾಡ ಇಡೀ ದೇಶದಲ್ಲೇ ನಂ.1 ಸ್ಥಾನ ಪಡೆದಿದೆ. ಶೇ.79.53ರಷ್ಟು ಫಲಿತಾಂಶ ಪಡೆದ ಪ್ರಯಾಗ್‌ರಾಜ್ ಕೊನೆಯ ಸ್ಥಾನದಲ್ಲಿದೆ. ನಮ್ಮ ಬೆಂಗಳೂರು ಶೇಕಡಾ 95.95ರಷ್ಟು ಫಲಿತಾಂಶ ಪಡೆಯೋ ಮೂಲಕ 4ನೇ ಸ್ಥಾನದಲ್ಲಿ ಗಮನ ಸೆಳೆದಿದೆ. ಇನ್ನೂ ವಿಶೇಷ ಎಂದರೆ ಇಡೀ ದೇಶಕ್ಕೆ ಈ ಬಾರಿ ವಿಜಯವಾಡ ಫಸ್ಟ್ ಬಂದಿದೆ.
/newsfirstlive-kannada/media/post_attachments/wp-content/uploads/2025/05/cbse.jpg)
ಯಾವ ದೇಶಕ್ಕೆ ಎಷ್ಟನೇ ಸ್ಥಾನ ಇಲ್ಲಿದೆ ಅಂಕಪಟ್ಟಿ
- ವಿಜಯವಾಡ 99.60
- ತಿರುವನಂತಪುರ 99.32
- ಚೆನ್ನೈ 97.39
- ಬೆಂಗಳೂರು 95.95
- ದೆಹಲಿ ಪಶ್ಚಿಮ 95.37
- ದೆಹಲಿ ಪೂರ್ವ 95.06
- ಚಂಡೀಗಢ 91.61
- ಪಂಚಕುಲ 91.17
- ಪುಣೆ 90.93
- ಅಜ್ಮೀರ್ 90.40
- ಭುವನೇಶ್ವರ 83.64
- ಗುವಾಹಟಿ 83.62
- ಡೆಹ್ರಾಡೂನ್ 83.45
- ಪಾಟ್ನಾ 82.86
- ಭೋಪಾಲ್ 82.46
- ನೋಯ್ಡಾ 81.29
- ಪ್ರಯಾಗ್ ರಾಜ್ 79.53
CBSE ರಿಸಲ್ಟ್ ನೋಡಲು ಹೀಗೆ ಮಾಡಿ!
CBSE 12ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ನೋಡಲು ಹಲವು ರೀತಿಯ ಅವಕಾಶಗಳಿವೆ. ಆನ್‌ಲೈನ್, ಮೊಬೈಲ್ ಆ್ಯಪ್, SMS ಹಾಗೂ IVRS ಮೂಲಕ ನಿಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಆನ್‌ಲೈನ್ ಮೂಲಕ ಡಿಜಿಟಲ್ ಸಹಿ ಇರುವ ಮಾರ್ಕ್ಸ್ ಕಾರ್ಡ್‌ಗಳನ್ನು ಮಾಡಿಕೊಳ್ಳುವ ಅವಕಾಶವಿದೆ.
1. CBSE ವೆಬ್‌ಸೈಟ್: cbse.gov.in
2. CBSE ರಿಸಲ್ಟ್ಸ್ ಪೋರ್ಟಲ್: results.cbse.nic.in
3. ಡಿಜಿಲಾಕರ್ ಪೋರ್ಟಲ್: results.digilocker.gov.in
4. UMANG ಆ್ಯಪ್‌ನಲ್ಲೂ ಫಲಿತಾಂಶ ವೀಕ್ಷಿಸಬಹುದು
5. SMS: CBSE10
6. IVRS : STD ಕೋಡ್ ಸಹಿತ 24300699 ಕರೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us