/newsfirstlive-kannada/media/post_attachments/wp-content/uploads/2025/04/RCB-1-1.jpg)
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಪಂದ್ಯ ನಡೆದ್ರೆ ಅಭಿಮಾನಿಗಳಿಗೆ ಟಿಕೆಟ್ ಸಿಗೋದು ಭಾರೀ ಕಷ್ಟ. ಐಪಿಎಲ್ ಪಂದ್ಯದ ಟಿಕೆಟ್ ರೇಟ್ ಅಷ್ಟು ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಅದರಲ್ಲೂ RCB v/s ಡೆಲ್ಲಿ ಮ್ಯಾಚ್ ಟಿಕೆಟ್ ಕಾಳ ಸಂತೆಯಲ್ಲಿ ಮಾರಾಟ ಆಗಿದೆ. ಲೈವ್‌ನಲ್ಲಿ ಬಾಲ್ ಟು ಬಾಲ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
RCB ಪಂದ್ಯದ ಟಿಕೆಟ್‌ಗಳು ಬ್ಲಾಕ್‌ನಲ್ಲಿ ಮಾರಾಟವಾಗುತ್ತಿದ್ದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ರಹಸ್ಯ ಕಾರ್ಯಾಚರಣೆ ಮಾಡಿದ್ದಾರೆ. RCB ಫ್ಯಾನ್ಸ್ ಸೋಗಿನಲ್ಲಿ ಸ್ಟಿಂಗ್ ಆಪರೇಷನ್ ಮಾಡಿರುವ ಸಿಸಿಬಿ ಪೊಲೀಸರು ಟಿಕೆಟ್ ಇದ್ರೆ ಕೊಡಿ ಎಷ್ಟು ದುಡ್ಡಾದ್ರೂ ಪರ್ವಾಗಿಲ್ಲ ಅಂತಾ ದಂಧೆಕೋರರನ್ನ ಖೆಡ್ಡಾಗೆ ಕೆಡವಿದ್ದಾರೆ.
ಸಿಸಿಬಿ ಪೊಲೀಸರು ಮಫ್ತಿಯಲ್ಲಿ ಟಿಕೆಟ್ ಖರೀದಿಸುವ ನೆಪದಲ್ಲಿ ಕಾರ್ಯಾಚರಣೆ ನಡೆಸಿದ್ದು, 8 ಮಂದಿ ಬ್ಲಾಕ್ ಟಿಕೆಟ್ ಮಾರಾಟಗಾರರನ್ನು ಬಂಧಿಸಿದ್ದಾರೆ. ಕಾಳ ಸಂತೆಕೋರರಿಗೆ ಐಪಿಎಲ್ ಟಿಕೆಟ್ ಹೇಗೆ ಸಿಗ್ತಿದೆ ಅಂತ ತನಿಖೆ ನಡೆಸಲಾಗುತ್ತಿದೆ.
ಐಪಿಎಲ್ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಒಂದೆರಡು ನಿಮಿಷ ಬಿಟ್ರೆ ಅದೇ ಹೆಚ್ಚು. ಹೀಗಾಗಿಯೇ ಕ್ರಿಕೆಟ್ ಪ್ರಿಯರಿಗೆ ಟಿಕೆಟ್ ಸಿಗುತ್ತಿರಲಿಲ್ಲ. ಕಾಳ ಸಂತೆಯಲ್ಲಿ ಟಿಕೆಟ್ ಮಾರಾಟ ಮಾಡುವ ಈ ಜಾಲದಲ್ಲಿ ಕೆಎಸ್‌ಸಿಎನ ಕೆಲ ಸಿಬ್ಬಂದಿಗಳು ಶಾಮೀಲಾಗಿರುವ ಶಂಕೆ ಇದೆ. ಇವರು ಟಿಕೆಟ್ ಕೊಟ್ಟು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಐಪಿಎಲ್​ ಪಂದ್ಯದ ವೇಳೆ ದುಡ್ಡು ಮಾಡಲು ಕಿಲಾಡಿ ಕೆಲಸ.. ಕಂಬಿ ಹಿಂದೆ ಸೇರಿದ 8 ಮಂದಿ..!
ಸದ್ಯ 8 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, ಕಬ್ಬನ್ ಪಾರ್ಕ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬ್ಲಾಕ್ ಟಿಕೆಟ್ ದಂಧೆ ಹಿಂದೆ ಯಾರಿದ್ದಾರೆ ಅನ್ನೋ ತನಿಖೆ ನಡೆಸುತ್ತಿದ್ದಾರೆ.
ಇದಿಷ್ಟೇ ಅಲ್ಲ ಆರ್​​​ಸಿಬಿ ವರ್ಸಸ್​ ಡೆಲ್ಲಿ ಮ್ಯಾಚ್​​​ ವೇಳೆ ಲೈವ್ ಬೆಟ್ಟಿಂಗ್ ಕೂಡ ನಡೆದಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಕುಳಿತುಕೊಂಡು ಬೆಟ್ಟಿಂಗ್ ಆ್ಯಪ್​​​​​​ನ ಮೂಲಕ ಬಾಲ್ ಟು ಬಾಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದವರನ್ನು ಅರೆಸ್ಟ್ ಮಾಡಲಾಗಿದೆ. ಧ್ರುವ ಮಿತ್ತಲ್, ವಿಜಯ್ ಕುಮಾರ್, ರೋಹಿತ್ ಬಂಧಿತರು.
ಟಿವಿ ಲೈವ್​​ಗಿಂತ ಸ್ಟೇಡಿಯಂನಲ್ಲಿ 1-2 ನಿಮಿಷ ಬೇಗ ಪಂದ್ಯದ ವಿವರ ಗೊತ್ತಾಗುತ್ತೆ. ಹೀಗಾಗಿ ಪ್ರತಿ ಬಾಲ್​​ನ ಪಿನ್ ಟು ಪಿನ್ ಮಾಹಿತಿ ಪಂಟರ್​​ಗಳಿಗೆ ಆರೋಪಿ ರೋಹಿತ್ ನೀಡುತ್ತಿದ್ದ. ಸ್ಟೇಡಿಯಂನಲ್ಲೇ ಸಿಸಿಬಿ ಪೊಲೀಸುರ ರೋಹಿತ್ ರಂಜನ್​​ನನ್ನು ಬಂಧಿಸಿದ್ದಾರೆ.
ಬೆಟ್ಟಿಂಗ್ ಆ್ಯಪ್ ಮೂಲಕ ದಂಧೆ ನಡೆಸುತ್ತಿದ್ದ ವಿಜಯ್ ಕುಮಾರ್, ಆ್ಯಪ್‌ನಲ್ಲಿದ್ದ 10 ಲಕ್ಷ ಹಣವನ್ನು ಸಿಸಿಬಿ ಸೀಜ್ ಮಾಡಿದ್ದಾರೆ. ಈ ಮೂವರು ಆರೋಪಿಗಳಿಂದ ಸುಮಾರು 85 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ