ನಟಿ ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟ.. ಸಿಸಿಬಿ ಅಧಿಕಾರಿಗಳಿಂದ ಬಿಗ್ ಶಾಕ್..!

author-image
Ganesh
Updated On
ರನ್ಯಾ ರಾವ್ ಬೆನ್ನಲ್ಲೇ ಮತ್ತಿಬ್ಬರು ಸ್ಯಾಂಡಲ್​ವುಡ್ ನಟಿಯರಿಗೆ ಮಾಸ್ಟರ್ ಸ್ಟ್ರೋಕ್..!
Advertisment
  • ಈ ಹಿಂದೆ ಬಂಧನಕ್ಕೆ ಒಳಗಾಗಿದ್ದ ನಟಿ ಸಂಜನಾ
  • ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ ಸಿಸಿಬಿ
  • ಏನಿದು ಪ್ರಕರಣ? ನಟಿಗೆ ಯಾಕೆ ಮತ್ತೆ ಸಂಕಷ್ಟ?

ನಟಿ ಸಂಜನಾ ಗಲ್ರಾನಿಗೆ ಸಿಸಿಬಿ ಪೊಲೀಸರು ಮತ್ತೆ ಶಾಕ್ ನೀಡಲು ನಿರ್ಧರಿಸಿದ್ದಾರೆ. ಮಾದಕ ವಸ್ತು‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಇತ್ತೀಚಿಗೆ ಸಂಜನಾ ಗಲ್ರಾನಿ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ. ಇದನ್ನ ಪ್ರಶ್ನಿಸಿ‌ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆಗೆ ಸಿಸಿಬಿ ಪೊಲೀಸರು ಮನವಿ ಮಾಡಿದ್ದರು. ಶೀಘ್ರದಲ್ಲೇ ಗೃಹ ಇಲಾಖೆಯಿಂದ ಇದಕ್ಕೆ ಅನುಮತಿ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ: Please ಯಾವತ್ತೂ ಈ ತಪ್ಪು ಮಾಡಬೇಡಿ.. ಹುಡುಗಿಯರಿಗೆ ಗೊತ್ತಿರಲಿ ಈ ಮುಖ್ಯವಾದ ವಿಚಾರ..!

ಇದರೊಂದಿಗೆ ಡ್ರಗ್ಸ್ ಪ್ರಕರಣದಲ್ಲಿ ನಿರಾಳರಾಗಿದ್ದ ನಟಿ ಸಂಜನಾ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಸರ್ಕಾರದ ಪರ ವಾದಿಸಲು ಹಿರಿಯ ವಕೀಲರ ನೇಮಕಕ್ಕೂ ಚಿಂತನೆ ನಡೆದಿದೆ ಎನ್ನಲಾಗಿದೆ. 2021ರಲ್ಲಿ ಬೆಳಕಿಗೆ ಬಂದಿದ್ದ ಡ್ರಗ್ಸ್ ಪ್ರಕರಣದಲ್ಲಿ ನಟಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಜೈಲು ಸೇರಿದ್ದ ನಟಿ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ್ದರು. ನಂತರ ವೈದ್ಯಕೀಯ ಕಾರಣಕ್ಕೆ ಅವರಿಗೆ ಜಾಮೀನು ಸಿಕ್ಕಿತು. ನಂತರ ಪ್ರಕರಣವನ್ನು ರದ್ದು ಮಾಡುವಂತೆ ನಟಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್, ತಾಂತ್ರಿಕ ಕಾರಣ ನೀಡಿ ಸಂಜನಾ ಗಲ್ರಾನಿ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ ರದ್ದು ಮಾಡಿದೆ.

ಇದನ್ನೂ ಓದಿ: Bhagappa Harijan: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು.. ನಟೋರಿಯಸ್ ಬಾಗಪ್ಪ ಹರಿಜನ್ ಫಿನಿಶ್ ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment