/newsfirstlive-kannada/media/post_attachments/wp-content/uploads/2025/06/CHM_TIGER_CCF_OFFICER.jpg)
ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ. ಇದಕ್ಕೆ ಸಂಬಂಧಿಸಿದಂತೆ ಹಸುವಿಗೆ ವಿಷಪ್ರಾಶನ ಮಾಡಿದ್ದರಿಂದ ಹುಲಿಗಳು ಜೀವ ಬಿಟ್ಟಿವೆ ಎಂದು ಸಿಸಿಎಫ್​ ಹೀರಾಲಾಲ್ ಅವರು ಹೇಳಿದ್ದಾರೆ.
ಸುಮಾರು 3 ದಿನದ ಹಿಂದೆ ಹಸುವಿಗೆ ವಿಷ ಹಾಕಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. 8 ರಿಂದ 9 ವರ್ಷದ ಒಂದು ಹುಲಿ ಹಾಗೂ 9 ರಿಂದ 10 ತಿಂಗಳ 4 ಮರಿಗಳು ಜೀವ ಬಿಟ್ಟಿವೆ. ವೈದ್ಯರು ಹುಲಿಗಳ ಮರಣೋತ್ತರ ಪರೀಕ್ಷೆ ಮಾಡಿದ್ದು ಇದರಲ್ಲಿ ವಿಷಪ್ರಾಶನದಿಂದ ಈ ಕೃತ್ಯ ಆಗಿದೆ ಎಂದಿದ್ದಾರೆ. ವಿಷ ಯಾವುದು, ಎಷ್ಟು ಪ್ರಮಾಣದಲ್ಲಿ ಹಾಕಿದ್ದಾರೆ ಎನ್ನುವುದು ಲ್ಯಾಬ್​ನಲ್ಲಿ ಪರೀಕ್ಷಿಸಿದ ಬಳಿಕ ವರದಿಯಿಂದ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಹುಲಿಗಳ ಹೃದಯ, ಕಿಡ್ನಿ ಸೇರಿದಂತೆ ವಿವಿಧ ಅಂಗಾಂಗಗಳನ್ನು ಪರೀಕ್ಷೆಗೆಂದು ತೆಗೆದುಕೊಳ್ಳಲಾಗಿದೆ. ಪೋರೆನ್ಸಿಕ್ ಲ್ಯಾಬ್​ಗೆ ಕಳುಹಿಸಲಾಗುತ್ತದೆ. ಹಸುವಿನ ಮರಣೋತ್ತರ ಪರೀಕ್ಷೆ ಕೂಡ ಮಾಡಲಾಗುತ್ತದೆ. ವಿಷಪ್ರಾಶನ ಎರಡು ರೀತಿಯಲ್ಲಿ ಆಗುತ್ತದೆ. ಹಸು ಜೀವ ಬಿಟ್ಟ ಮೇಲೆ ವಿಷ ಹಾಕಿದ್ದಾರೋ ಅಥವಾ ಜೀವ ಇದ್ದಾಗಲೇ ಹಾಕಿದ್ದಾರೋ ಎನ್ನುವುದನ್ನ ತಿಳಿಯಲು ಮರಣೋತ್ತರ ಪರೀಕ್ಷೆ ಮಾಡಲಾಗುತ್ತದೆ ಎಂದರು.
/newsfirstlive-kannada/media/post_attachments/wp-content/uploads/2025/06/CHM_TIGER_CCF_OFFICER_1.jpg)
ಮಲೆಮಹಾದೇಶ್ವರ ಬೆಟ್ಟ 94 ಸಾವಿರ ಹೆಕ್ಟರ್​ ಅರಣ್ಯ ಪ್ರದೇಶ ಇದೆ. ನಮ್ಮಲ್ಲಿರುವ ಸಿಬ್ಬಂದಿ ಪ್ರತಿನಿತ್ಯ 15 ರಿಂದ 20 ಕಿಲೋ ಮೀಟರ್​ ದೂರ ಎಲ್ಲ ಕಡೆ ಕಣ್ಣು ಹಾಯಿಸುತ್ತಾರೆ. 3 ತಿಂಗಳಿನಿಂದ ಸಿಬ್ಬಂದಿ ಸಂಬಳ ಆಗಿರಲಿಲ್ಲ. ಎಲ್ಲದರ ಬಗ್ಗೆ ತನಿಖೆ ಮಾಡುತ್ತೇವೆ. ಇದಕ್ಕೆ ಯಾರು ಹೊಣೆಗಾರರು ಎಂಬುದನ್ನ ಇಲಾಖಾ ಮಟ್ಟದಲ್ಲಿ ತನಿಖೆ ಮಾಡುತ್ತೇವೆ.
ಹಸು ಯಾರದ್ದು ಎಂಬುದರ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ. ಸುಮಾರು 10 ರಿಂದ 15 ವರ್ಷಗಳಿಂದ ತಮಿಳುನಾಡಿನಿಂದ ಹಾಗೂ ಇಲ್ಲಿನ ಹಸುಗಳನ್ನ ಮೇಯಿಸಿ ಅವುಗಳ ಗೊಬ್ಬರವನ್ನು ಸಂಗ್ರಹಿಸಿ ಮಾರಾಟ ಮಾಡುತ್ತಾರೆ. ಈ ಬಗ್ಗೆ ಸಾಕಷ್ಟು ದೂರುಗಳು ನೀಡಲಾಗಿತ್ತು. ತಡೆಗಟ್ಟಲು ತುಂಬಾ ಕ್ರಮ ಕೈಗೊಂಡಿದ್ದೇವೆ. ವಿಧಾನಸಭಾಮಟ್ಟಕ್ಕೂ ಹೋಗಿ ಚರ್ಚೆ ಆಗಿದೆ. ಬೀದಿ ಹಸುಗಳು ಕಾಡಿನೊಳಗೆ ಬರುತ್ತವೆ. ಸದ್ಯಕ್ಕೆ ಹುಲಿ ಅಂತ್ಯ ಸ್ಥಳದಲ್ಲೇ ಅಂತಿಮ ಸಂಸ್ಕಾರ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us