newsfirstkannada.com

‘ಪ್ರೀತಿ ಬೇಕು ಅಪ್ಪ..!’ ಕಣ್ಣೀರಲ್ಲಿ ಮುಳುಗಿದ ವೀಕ್ಷಕರು, ದಿಗ್ಗಜರ ಹೃದಯ ಗೆದ್ದ ‘ಅಸಾಧಾರಣ’ ಈ ‘ಪ್ರತಿಭೆ

Share :

Published February 24, 2023 at 7:26am

Update September 25, 2023 at 9:09pm

  ಬಾಲನಟಿ ಮಹಿತಾ ಅಭಿನಯಕ್ಕೆ ಜಡ್ಜಸ್ ಫಿದಾ

  ಭಾವನಾತ್ಮಕ ಸ್ಕಿಟ್​ಗಳ ಮೂಲಕ ವೀಕ್ಷಕರ ಗೆಲ್ಲುತ್ತಿದ್ದಾಳೆ ಮಹಿತಾ

  ಕಳೆದ ಬಾರಿ ವಂಶಿಕಾ ನಟನೆಗೆ ಫಿದಾ ಆಗಿದ್ದ ವೀಕ್ಷಕರು

ಪುಟ್ಟಪುಟ್ಟ ಹೆಜ್ಜೆಗಳನ್ನು ಇಡುತ್ತ.. ವಯಲಿನ್ ನೂಡಿಸುತ್ತ.. ಮೆಲ್ಲ-ಮೆಲ್ಲನೆ ವೇದಿಕೆ ಮೇಲೆ ಕುಣಿಯುತ್ತ ‘ಶೃತಿ ಮೇಡಂ ನಾನು ನಿಮಗೊಂದು ಜೋಕ್ ಹೇಳಾ..?’ ಎನ್ನುತ್ತ ತನ್ನ ಕಥೆಯನ್ನು ಮುಂದುವರಿಸಿದ್ದಳು. ‘ಒಂದು ಊರಿನಲ್ಲಿ ಅಜ್ಜಿ ಇದ್ಲಂತೆ.. ಚಿಕ್ಕ ವಯಸ್ಸಿನಲ್ಲಿಯೇ ಸತ್ತೋಗಿ ಬಿಟ್ಲಂತೆ..!!’ ಎಂದ ಪುಟಾಣಿ ಹುಡುಗಿ ತನ್ನಷ್ಟಕ್ಕೇ ಜೋರಾಗಿ ನಗುತ್ತಾಳೆ!! ಅಷ್ಟರಲ್ಲೇ, ಅಮ್ಮನ ಜೋರಾದ ಕೂಗು ಕೇಳಿಸುತ್ತದೆ.. ‘ಬಂದೆ ಜಡ್ಜಸ್​’ ಎಂದು ಹೇಳಿ ಹೋಗುವ ಕಂದಮ್ಮ ಕೊನೆಗೆ ಬರುವಷ್ಟರಲ್ಲಿ ಎಲ್ಲರ ಕಣ್ಣಾಲಿಗಳು ಒದ್ದೆಯಾಗಿದ್ದವು. ತುಂಬಿದ ವೇದಿಕೆ ಮೇಲೆ ಗಳಗಳನೇ ಕಣ್ಣೀರಿಡುತ್ತಿದ್ದರು.. ಅಷ್ಟರ ಮಟ್ಟಿಗೆ ತನ್ನ ಭಾವನಾತ್ಮಕ ಕಲೆ ಮೂಲಕ ಎಲ್ಲರ ಹೃದಯ ಗೆದ್ದುಬಿಟ್ಟಿದ್ದಳು ಈ ಪುಟಾಣಿ ಹುಡುಗಿ..!!   

ಅಂದ್ಹಾಗೆ ಆ ಪುಟಾಣಿ ಹುಡುಗಿ ಬೇರೇ ಯಾರೂ ಅಲ್ಲ.. ‘ನನ್ನಮ್ಮ ಸೂಪರ್ ಸ್ಟಾರ್​’ ಖ್ಯಾತೀಯ ಮಹಿತ ವಿ.! ನನ್ನಮ್ಮ ಸೂಪರ್​ ಸ್ಟಾರ್​ನ ಮೊದಲ ಸೀಸನ್​ನಲ್ಲಿ ಜನಮೆಚ್ಚುಗೆಗೆ ಪಾತ್ರಳಾಗಿದ್ದ ಮಹಿತಾ, ಇಂದು ತನ್ನ ಅಭಿನಯದಲ್ಲಿ ಮತ್ತಷ್ಟು ಪಕ್ವಗೊಂಡಿದ್ದಾಳೆ. ತನ್ನಲ್ಲಿರುವ ಪ್ರಬುದ್ಧತೆ ಏನು ಅನ್ನೋದನ್ನು ‘ಗಿಚ್ಚ ಗಿಲಿಗಿಲಿ’ ಶೋ ಮೂಲಕ ಇಡೀ ಕರ್ನಾಟಕಕ್ಕೆ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾಳೆ. ಹೌದು.. ‘ಗಿಚ್ಚ ಗಿಲಿಗಿಲಿ’ ಎರಡನೇ ಸೀಸನ್​ನಲ್ಲಿ ಸ್ಥಾನ ಪಡೆದುಕೊಂಡಿರುವ ಮಹಿತ, ಜನರನ್ನು ನಕ್ಕು ನಗಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಅದರಲ್ಲೂ ಮೊನ್ನೆ ನಡೆದ ಒಂದು ಭಾವನಾತ್ಮಕ ಎಪಿಸೋಡ್​ನಲ್ಲಿ ತನ್ನ ನಟನೆ ಮೂಲಕ ದೊಡ್ಡ ದೊಡ್ಡ ಕಲಾವಿದರನ್ನೇ ಕಣ್ಣೀರಲ್ಲಿ ಮುಳುಗಿಸಿಬಿಟ್ಟಿದ್ದಾಳೆ!

‘ಅರಿವು’ ಎಂಬ ಧ್ಯೇಯವಾಕ್ಯದಲ್ಲಿ ಪ್ರಸ್ತುತಪಡಿಸಿದ ಸಣ್ಣ ಸ್ಕಿಟ್​​ ಮೂಲಕ ಮಹಿತ ಎಲ್ಲರ ಕಣ್ಣುಗಳನ್ನು ತೆರೆಸಿದ್ದಂತೂ ಸುಳ್ಳಲ್ಲ. ಜೊತೆಗೆ ಮಹಿತಾಗೆ ಈ ಎಪಿಸೋಡ್​ ಆಕೆಯ ಕಲಾ ಬದುಕಿಗೆ ಹೊಸ ಮೈಲೇಜ್ ತಂದುಕೊಡುವುದರಲ್ಲಿ ಯಾವುದೇ ಸಂದೇಹ ಇಲ್ಲ. ಅಪ್ಪ-ಅಮ್ಮನ ಕೆಲಸದ ಬ್ಯುಸಿ, ಸಂಸಾರದ ಒತ್ತಡ, ದಿನ ನಿತ್ಯದ ಜಗಳಗಳ ಜಂಜಾಟದಲ್ಲಿ ಮಕ್ಕಳಿಗೆ ಪ್ರೀತಿ ಸಿಗದಿದ್ದರೆ ಅದು, ಪುಟಾಣಿ ಮಕ್ಕಳ ಮೇಲೆ ಹೇಗೆಲ್ಲ ಪರಿಣಾಮ ಬಿರುತ್ತದೆ ಅನ್ನೋದ್ರ ಕುರಿತ ಸ್ಕಿಟ್​​ ಅದಾಗಿತ್ತು..

ಪ್ರತಿಯೊಂದು ಸನ್ನಿವೇಶದಲ್ಲೂ, ಪ್ರತಿ ಡೈಲಾಗ್​ನೂ ನೀತಿ ಪಾಠಗಳಿಂದ ಕೂಡಿದ್ದ ಸ್ಕಿಟ್​ಗೆ ಜೀವ ತುಂಬಿದ್ದೇ ಪುಟಾಣಿ ಮಹಿತಾ. ಆಕೆಯ ಅಭಿನಯದಲ್ಲಿರುವ ಚತುರತೆ, ಸದಾ ಕಾಲ ನೆನಪಿಡುವಂತಿತ್ತು.. ಅದರಲ್ಲೂ ಆಕೆಯ ಪಂಚಿಗ್​ ಡೈಲಾಗ್ಸ್​.. ಅಪ್ಪ-ಅಮ್ಮನ ಜಗಳದಲ್ಲಿ ಮಕ್ಕಳು ಬಡವಾಗುತ್ತಿರುವ ಇವತ್ತಿನ ದಿನಮಾದಲ್ಲಿ ಆಕೆ ಆಡಿದ ಮಾತುಗಳು ಮನಮಟ್ಟುವಂತಿತ್ತು.. ಕರುಳು ಕಿತ್ತು ಬರುವಂತಿತ್ತು.. ‘ಒಂದ್ ನಿಮಿಷ ಪ್ರೀತಿಯಿಂದ ಮಾತಾಡಬೇಕು ಅಂದರೂ ಅಪ್ಪ-ಅಮ್ಮನ ಜೊತೆ ಅಪಾಯಿಟ್ಮೆಂಟ್ ತೆಗೆದುಕೊಳ್ಳಬೇಕು..’ ಅನ್ನೋ ಮಾತಿರಬಹುದು. ‘ಕಣ್ಣುಗಳನ್ನು ತೆಗೆದುಬಿಡಿ.. ದಿನಾ ಅಪ್ಪ-ಅಮ್ಮನ ಜಗಳ ನೋಡೋ ಬದಲು ಕಣ್ಣುಗಳನ್ನ ತೆಗೆದ್ರೆ ಒಳ್ಳೆಯದೇ ಅಲ್ವಾ..? ಅನ್ನುವ ಎಮೋಷನಲ್ ಡೈಲಾಗ್ಸ್​ಗಳು ಹೃದಯಕ್ಕೆ ಹೊಡೆದಂತೆ ಇದ್ದವು.

ಅದರಲ್ಲೂ ಸ್ಕಿಟ್​​ನ ಕೊನೆಯ ಹಂತದಲ್ಲಿ ಅಪ್ಪ-ಮಗಳ ನಡುವಿನ ಸಂಭಾಷಣೆ ತುಂಬಾನೇ ಅರ್ಥಬದ್ಧವಾಗಿತ್ತು.. ಮಗಳೇ ನಾವು ಬಂದಿದ್ದೀವಿ.. ಮನೆಗೆ ಹೋಗೋಣ ಅಂದಾಗ.. ‘ನಾನ್ ಮನೆಗೆ ಬರಲ್ಲ, ನೀವು ಬರೀ ಜಗಳ ಆಡ್ತೀರಾ..’ ಎನ್ನುತ್ತಾಳೆ.. ಮಗಳ ಈ ಪ್ರತಿಕ್ರಿಯೆಗೆ ‘ನಾನು ನಿನಗೆ ಎಲ್ಲವನ್ನೂ ಕೊಟ್ಟಿದ್ದೆವಲ್ವಾ? ಇನ್ನೇನು ಬೇಕು ಮಗಳೇ ಎಂದಾಗ.. ‘ಪ್ರೀತಿ ಅಪ್ಪಾ..!’ ಎಂದು ಕಣ್ಣೀರಿಡುತ್ತ ಬಿಕ್ಕಳಿಸುತ್ತಾಳೆ.. ಆಕೆ ಆಡಿದ ಈ ಡೈಲಾಗ್​, ಟಿವಿ ಮುಂದೆ ಕೂತಿದ್ದ ಎಲ್ಲಾ ಪ್ರೇಕ್ಷಕರನ್ನು ಕಣ್ಣೀರಲ್ಲಿ ಮುಳುಗಿಸಿತ್ತು.

ಈ ಪುಟ್ಟ ಹುಡುಗಿಯ ಟ್ಯಾಲೆಂಟ್​ ಕರ್ನಾಟಕದ ಹೃದಯ ಗೆದ್ದಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಆಕೆಯ ಪ್ರತಿಭೆಗೆ ಶಹಬ್ಬಾಶ್ ಕೊಟ್ಟು ಹಾರೈಸುತ್ತಿದ್ದಾರೆ. ಒಟ್ಟಾರೆ ಮಹಿತಳ ಮನಕ್ಕೆ ತಟ್ಟುವ ಈ ಅಭಿನಯಕ್ಕೆ ಮನಸೋಲದವರಿಲ್ಲ ಎಂಬಂತಾಗಿದೆ. ಇನ್ನು ಗಿಚ್ಚಿ ಗಿಲಿಗಿಲಿಯಲ್ಲಿ ಶಿವು ಜೊತೆ ಮಹಿತಾ ಪಾಟ್ನರ್ ಶಿಪ್​ನಲ್ಲಿ ಪರ್ಫಾಮ್ ಮಾಡುತ್ತಿದ್ದಾಳೆ. ಈ ಹಿಂದೆ ವಂಶಿಕಾ ಹಾಗೂ ಶಿವಕುಮಾರ್​ ಜೋಡಿ ಗಿಚ್ಚಿ ಗಿಲಿಗಿಲಿಯಲ್ಲಿ ಸೂಪರ್​ ಹಿಟ್​ ಎನಿಸಿಕೊಂಡಿತ್ತು. ಇದೀಗ ಹಾಸ್ಯ ಕಲಾವಿದ ಶಿವು ಪುಟ್ಟ ಹುಡುಗಿ ಮಹಿತಾ ಸೇಪರ್ಡೆಗೊಂಡಿದ್ದಾಳೆ. ಬಾಲ ಪ್ರತಿಭೆಗಳ ಕಲಾ ಅನಾವರಣಕ್ಕೆ ‘ಗಿಚ್ಚ ಗಿಲಿಗಿಲಿ’ ದೊಡ್ಡ ವೇದಿಕೆಯಾಗಿದೆ.

ವಿಶೇಷ ವರದಿ: ವೀಣಾ ಗಂಗಾಣಿ, ಡಿಜಿಟಲ್ ಡೆಸ್ಕ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಪ್ರೀತಿ ಬೇಕು ಅಪ್ಪ..!’ ಕಣ್ಣೀರಲ್ಲಿ ಮುಳುಗಿದ ವೀಕ್ಷಕರು, ದಿಗ್ಗಜರ ಹೃದಯ ಗೆದ್ದ ‘ಅಸಾಧಾರಣ’ ಈ ‘ಪ್ರತಿಭೆ

https://newsfirstlive.com/wp-content/uploads/2023/02/MOHITA.jpg

Load More