/newsfirstlive-kannada/media/post_attachments/wp-content/uploads/2025/02/ccl6.jpg)
ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2025 (CCL) ಇಂದಿನಿಂದ ಅದ್ಧೂರಿಯಾಗಿ ಆರಂಭ ಆಗಿದೆ. ಭಾರತದ ಸ್ಟಾರ್ ಸೆಲೆಬ್ರಿಟಿಗಳು ಮೈದಾನಕ್ಕೆ ಇಳಿದು ಕ್ರಿಕೆಟ್ ಆಡಿದ್ದಾರೆ. ಸಿಸಿಎಲ್ 2025 ಇದು 11ನೇ ಸೀಸನ್ ಆಗಿದ್ದು, ಬೆಂಗಳೂರಿನಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ.
ಇದನ್ನೂ ಓದಿ:ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್.. ಪ್ರಯಾಣ ದರ 46% ಹೆಚ್ಚಳ; ಎಷ್ಟಿತ್ತು? ನಾಳೆಯಿಂದ ಎಷ್ಟಾಗುತ್ತೆ?
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಎಲ್ 11 ಟೂರ್ನಮೆಂಟ್ ಅದ್ದೂರಿಯಾಗಿ ಉದ್ಘಾಟನೆ ಆಗಿದೆ. ಉದ್ಘಾಟನೆಗೂ ಮೊದಲೇ ಚೆನ್ನೈ ರೈನೋಸ್ ಮತ್ತು ಬೆಂಗಾಲ್ ಟೈಗರ್ಸ್ ಮಧ್ಯೆ ಹಣಾಹಣಿ ಶುರುವಾಗಿತ್ತು. ಇದೇ ಉದ್ಘಾಟನೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದು ವಿಶೇಷವಾಗಿತ್ತು. ಜೊತೆಗೆ ಎರಡೂ ತಂಡಕ್ಕೆ ಶುಭ ಹಾರೈಸಿದ್ದಾರೆ ಡಿಸಿಎಂ ಡಿ.ಕೆ.ಶಿವಕುಮಾರ್.
ಇನ್ನೂ, ಉದ್ಘಾಟನೆ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ಮಧ್ಯೆ ಹಣಾಹಣಿ ನಡೆದಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಬಾರಿ ಕಪ್ ಗೆಲ್ಲಲೇ ಬೇಕು ಅಂತ ಕಸರತ್ತು ನಡೆಸಿದೆ. ಕಿಚ್ಚ ಸುದೀಪ್ ಮತ್ತೆ ನಾಯಕನಾಗಿ ಕಣಕ್ಕೆ ಇಳಿದಿದ್ದಾರೆ.
ಮೊದಲು ಕರ್ನಾಟಕ ಬುಲ್ಡೋಜರ್ಸ್ ವಿರುದ್ಧದ ಹಣಾಹಣಿಯಲ್ಲಿ ಟಾಸ್ ಗೆದ್ದ ತೆಲುಗು ವಾರಿಯರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.
ಕರ್ನಾಟಕ ಬುಲ್ಡೋಜರ್ಸ್ ಉತ್ತಮ ಟಾರ್ಗೆಟ್ ಬೆನ್ನತ್ತಿದ ತೆಲುಗು ವಾರಿಯರ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 99 ರನ್ ಕಲೆ ಹಾಕುವಷ್ಟರಲ್ಲಿ ಸುಸ್ತಾಯಿತು.
ಮೊದಲು ಬ್ಯಾಟಿಂಗ್‌ಗಿಳಿದ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ 123 ರನ್ ಗಳಿಸೋ ಮೂಲಕ ತೆಲುಗು ವಾರಿಯರ್ಸ್‌ಗೆ 137 ರನ್ ಗೆಲುವಿನ ಟಾರ್ಗೆಟ್ ನೀಡಿತ್ತು.
ಕರ್ನಾಟಕ ಬುಲ್ಡೋಜರ್ಸ್ ಉತ್ತಮ ಟಾರ್ಗೆಟ್ ಬೆನ್ನತ್ತಿದ ತೆಲುಗು ವಾರಿಯರ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 99 ರನ್ ಕಲೆ ಹಾಕುವಷ್ಟರಲ್ಲಿ ಸುಸ್ತಾಯಿತು.
ಈ ಬಾರಿ ಕಿಚ್ಚ ಸುದೀಪ್ ಅವರು ಬಲಿಷ್ಠ ತಂಡವನ್ನು ಕಟ್ಟಿದ್ದಾರೆ. ಹಾಗೇ ಕರ್ನಾಟಕ ಬುಲ್ಡೋಜರ್ ತಂಡಕ್ಕೆ ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ಸುನೀಲ್ ರಾವ್, ಬಿಗ್ಬಾಸ್ ಖ್ಯಾತಿಯ ತ್ರಿವಿಕ್ರಮ್ ಸೇರಿದಂತೆ 12 ಆಟಗಾರರು ಆಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ