CCL ಕ್ರಿಕೆಟ್: ಮುಂಬೈ ಹೀರೋಗಳನ್ನು ಝೀರೋ ಮಾಡಿದ ಕಿಚ್ಚನ ಸೇನೆ; ಕರ್ನಾಟಕ ಬುಲ್ಡೋಜರ್ಸ್‌ಗೆ ಭರ್ಜರಿ ಜಯ!

author-image
Gopal Kulkarni
Updated On
CCL ಕ್ರಿಕೆಟ್: ಮುಂಬೈ ಹೀರೋಗಳನ್ನು ಝೀರೋ ಮಾಡಿದ ಕಿಚ್ಚನ ಸೇನೆ; ಕರ್ನಾಟಕ ಬುಲ್ಡೋಜರ್ಸ್‌ಗೆ ಭರ್ಜರಿ ಜಯ!
Advertisment
  • ಮುಂಬೈ ಹೀರೋಸ್ ವಿರುದ್ಧ ಕಿಚ್ಚನ ಪಡೆಗೆ ಭರ್ಜರಿ ಜಯ
  • ಮೊದಲ ಇನ್ನಿಂಗ್ಸ್​​ನಲ್ಲಿ ಸ್ಪೋಟಕ ಸೆಂಚುರಿ ಗಳಿಸಿದ ಕೃಷ್ಣ
  • 85 ರನ್​ಗಳಿಂದ ಹೀನಾಯವಾಗಿ ಸೋತ ಮುಂಬೈ ಹೀರೋಸ್

ಹೈದ್ರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ಹೀರೋ ಹಾಗೂ ಕರ್ನಾಟಕ ಬುಲ್ಡೋಜರ್ಸ್​ ನಡುವಿನ ಸಿಸಿಎಲ್​ ಪಂದ್ಯದಲ್ಲಿ ಮುಂಬೈ ಹೀರೋಗಳನ್ನು ಕರ್ನಾಟಕ ತಂಡ ಮಣ್ಣು ಮುಕ್ಕುಸಿದೆ. ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತನ್ನ ಆಯ್ಕೆಗೆ ಪಶ್ಚಾತಾಪವನ್ನು ಪಡುವಂತೆ ಕರ್ನಾಟಕದ ಹೀರೋಗಳು ಆಟವಾಡಿದರು. ಮೊದಲ ಇನ್ನಿಂಗ್ಸ್​ನಲ್ಲಿ ಡಾರ್ಲಿಂಗ್​​ ಕೃಷ್ಣ ಭರ್ಜರಿ ಶತಕದಿಂದಾಗಿ ಕರ್ನಾಟಕ ಬುಲ್ಡೋಜರ್ಸ್ 10 ಓವರ್​ಗಳಿಗೆ 171 ರನ್​ ಕಲೆ ಹಾಕಿತು.ಕೇವಲ 36 ಬೌಲ್​ಗಳನ್ನು ಎದುರಿಸಿದ ಕೃಷ್ಣ 9 ಸಿಕ್ಸ್ ಹಾಗೂ 11 ಬೌಂಡರಿಗಳ ಮೂಲಕ 111 ರನ್ ಕಲೆ ಹಾಕಿದರು

ನಂತರ ಬ್ಯಾಟಿಂಗ್​ಗೆ ಇಳಿದ ಮುಂಬೈ ಹೀರೋಗಳನ್ನು ಕೇವಲ 100ರನ್​ಗೆ ಕಟ್ಟಿ ಹಾಕುವಲ್ಲಿ ಕರ್ನಾಟಕ ಬುಲ್ಡೋಸರ್ಸ್​ ತಂಡದ ಬೌಲರ್​ಗಳು ಯಶಸ್ವಿಯಾದ್ರು ಕರಣ್ ಆರ್ಯನ್ 2 ಓವರ್​ ಬೌಲಿಂಗ್ ಮಾಡಿ 3 ವಿಕೆಟ್ ಕಿತ್ತು ಮುಂಬೈ ತಂಡಕ್ಕೆ ದೊಡ್ಡ ಪೆಟ್ಟನ್ನು ಕೊಟ್ಟರು. ಮೊದಲ ಇನ್ನಿಂಗ್ಸ್​ನಲ್ಲಿ ಶಬೀರ್ ಅಹ್ಲುವಾಲಿಯಾ ಗಳಿಸಿದ 35 ರನ್ ಅತಿಹೆಚ್ಚು ರನ್ ಆಗಿ. ಉಳಿದ ಬ್ಯಾಟರ್​ಗಳು ಹೀಗೆ ಬಂದು ಹಾಗೆ ಹೋದರು.

publive-image

ನಂತರ ಎರಡನೇ ಇನ್ನಿಂಗ್ಸ್​ಗೆ ಬ್ಯಾಟಿಂಗ್​​ಗೆ ಇಳಿದ ಕರ್ನಾಟಕದ ಕಿಚ್ಚನ ಪಡೆ 10 ಓವರ್​ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 127 ರನ್ ಕಲೆ ಹಾಕಿತು. ಮೊದಲ ಇನ್ನಿಂಗ್ಸ್​ನಲ್ಲಿ ಅಬ್ಬರಿಸಿದ್ದ ಡಾರ್ಲಿಂಗ್​ ಕೃಷ್ಣ ಕೇವಲ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಂಜುನಾಥ್ ಗೌಡ ಅವರ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ 127ರನ್ ಗಳಿಸುವಲ್ಲಿ ಯಶಸ್ವಿಯಾಯ್ತು.

ಇದನ್ನೂ ಓದಿ:9 ಸಿಕ್ಸರ್, 11 ಬೌಂಡರಿ.. ಡಾರ್ಲಿಂಗ್ ಕೃಷ್ಣ ಆಕರ್ಷಕ ಶತಕ; ಕರ್ನಾಟಕ ಬುಲ್ಡೋಜರ್ಸ್ ಸಖತ್‌ ಸೆಲೆಬ್ರೇಷನ್! VIDEO

ಕರ್ನಾಟಕದ ಬ್ಯಾಟಿಂಗ್​​ ಬಳಿಕ ಅಂಗಳಕ್ಕೆ ಇಳಿದ ಮುಂಬೈ ಹೀರೋಸ್​ ತಂಡ ಮತ್ತೆ ಮುಗ್ಗರಿಸಿತು. 10 ಓವರ್​ಗಳಲ್ಲಿ ಐದು ವಿಕೆಟ್​ ಒಪ್ಪಿಸಿ ಕೇವಲ 113 ರನ್​ಗಳನ್ನು ಗಳಿಸಲು ಮಾತ್ರ ಸಾಧ್ಯವಾಯ್ತು. ಮುಂಬೈ ಪರ ಶಬೀರ್ ಅಹುಲುವಾಲಿಯಾ ಮಾತ್ರ ಏಕಾಂಗಿ ಹೋರಾಟ ನಡೆಸಿ 26 ಬಾಲ್​ಗಳಿಗೆ 3 ಸಿಕ್ಸರ್ ಹಾಗೂ 4 ಬೌಂಡರಿ ಬಾರಿಸುವ ಮೂಲಕ 51 ರನ್​ ಗಳಿಸಿದರು. ಆದರೆ ಅವರ ಏಕಾಂಗಿ ಹೋರಾಟ ವ್ಯರ್ಥವಾಯ್ತು ಕೊನೆಗೆ ಕರ್ನಾಟಕ ಬುಲ್ಡೋಸರ್ಸ್ ತಂಡ 85 ರನ್​ಗಳ ಅಂತರದಲ್ಲಿ ಮುಂಬೈ ತಂಡವನ್ನು ಮಣಿಸಿ ಗೆಲುವಿನ ಕೇಕೆ ಹಾಕಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment