/newsfirstlive-kannada/media/post_attachments/wp-content/uploads/2025/02/CCL-Darling-Krishna-century.jpg)
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸೀಸನ್ 11ರಲ್ಲಿ ಕರ್ನಾಟಕ ಬುಲ್ಡೋಜರ್ಸ್, ಮುಂಬೈ ಹೀರೋಸ್ ಮಧ್ಯೆ ರೋಚಕ ಹಣಾಹಣಿ ನಡೆದಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಿಸಿಎಲ್ ಪಂದ್ಯ ನಡೆಯುತ್ತಿದ್ದು, ಕರ್ನಾಟಕ ಬುಲ್ಡೋಜರ್ಸ್ ಪರ ಡಾರ್ಲಿಂಗ್ ಕೃಷ್ಣ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ.
ಟಾಸ್ ಗೆದ್ದ ಮುಂಬೈ ಹೀರೋಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಕರ್ನಾಟಕ ಬುಲ್ಡೋಜರ್ಸ್ ತಂಡವನ್ನೇ ಬ್ಯಾಟಿಂಗ್‌ಗೆ ಆಹ್ವಾನ ನೀಡಿತು. ಕಿಚ್ಚ ಸುದೀಪ್ ಅವರ ತಂಡ ನಿರೀಕ್ಷೆಯಂತೆ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ಕೇವಲ 1 ವಿಕೆಟ್ ನಷ್ಟಕ್ಕೆ 171 ರನ್ ಕಲೆ ಹಾಕಿತು. 171 ರನ್‌ಗಳ ಸುರಿಮಳೆಯಲ್ಲಿ ಡಾರ್ಲಿಂಗ್ ಕೃಷ್ಣ ಅವರು ಏಕಾಂಗಿಯಾಗಿ ಹೋರಾಡಿ 111 ರನ್ ಕಾಣಿಕೆ ನೀಡಿದರು. ಕೇವಲ 36 ಎಸೆತಗಳನ್ನು ಎದುರಿಸಿದ ಡಾರ್ಲಿಂಗ್ ಕೃಷ್ಣ ಅವರು 9 ಅದ್ಭುತ ಸಿಕ್ಸರ್ ಹಾಗೂ 11 ಬೌಂಡರಿಗಳನ್ನು ಸಿಡಿಸಿದರು.
ಇದನ್ನೂ ಓದಿ: CCL: ತೆಲುಗು ವಾರಿಯರ್ಸ್ ಮೇಲೆ ಕಿಚ್ಚನ ಟೀಂ ಸವಾರಿ.. ಕರ್ನಾಟಕ ಬುಲ್ಡೋಜರ್ಸ್ ರೋಚಕ ಪಂದ್ಯ ಹೇಗಿತ್ತು?
ಡಾರ್ಲಿಂಗ್ ಕೃಷ್ಣ ಅವರ ವೇಗದ ಶತಕ ಮತ್ತು ಭರ್ಜರಿ ಬ್ಯಾಟಿಂಗ್ ಅಮೋಘವಾಗಿದ್ದು, ಕಿಚ್ಚ ಸುದೀಪ್ ಅವರು ಫುಲ್ ಫಿದಾ ಆಗಿದ್ದಾರೆ. ಬ್ಯಾಟಿಂಗ್ ಮುಗಿಸಿ ಕ್ರೀಸ್‌ನಿಂದ ಡಾರ್ಲಿಂಗ್ ಕೃಷ್ಣ ಹೊರ ಬರುತ್ತಿದ್ದಂತೆ ತಂಡದ ಸದಸ್ಯರು ಪೆವಿಲಿಯನ್‌ಗೆ ಪ್ರೀತಿಯಿಂದ ಬರಮಾಡಿಕೊಂಡರು. ಡಾರ್ಲಿಂಗ್ ಕೃಷ್ಣ ಅವರು ಕರ್ನಾಟಕ ಬುಲ್ಡೋಜರ್ಸ್ ತಂಡದ ಪ್ರೀತಿಗೆ ಮಾರು ಹೋಗಿದ್ದಾರೆ.
View this post on Instagram
ಕರ್ನಾಟಕ ಬುಲ್ಡೋಜರ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ 171/1 ಮತ್ತು 2ನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 127 ರನ್ ಕಲೆ ಹಾಕಿದೆ. ಮುಂಬೈ ಹೀರೋಸ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 100 ರನ್‌ಗೆ ಸುಸ್ತಾಗಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ ಪಂದ್ಯ ಗೆಲ್ಲಲು 198 ರನ್‌ಗಳ ಟಾರ್ಗೆಟ್ ರೀಚ್ ಆಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ