/newsfirstlive-kannada/media/post_attachments/wp-content/uploads/2024/11/Blast-In-Pakistan.jpg)
ಪಾಕಿಸ್ತಾನದ ಕ್ವೆಟ್ಟಾ ರೈಲ್ವೆ ನಿಲ್ದಾಣದಲ್ಲಿ ಭೀಕರ ಬಾಂಬ್ ಸ್ಫೋಟಗೊಂಡು 14 ಜನ ಯೋಧರು ಸೇರಿದಂತೆ ಒಟ್ಟು 25 ಜನರು ದುರಂತ ಅಂತ್ಯ ಕಂಡಿದ್ದಾರೆ. ರಣಭೀಕರ ಸ್ಫೋಟದಲ್ಲಿ ಸುಮಾರು 40 ಜನರಿಗೆ ಗಂಭೀರ ಗಾಯಗಳಾಗಿದ್ದು. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಂಭವವಿದೆ ಎಂದು ಕ್ವೆಟ್ಟಾದ ಎಸ್ಎಸ್ಪಿ ಮೊಹಮ್ಮದ್ ಬಲೋಚ್ ಹೇಳಿದ್ದಾರೆ.
ಕ್ವೆಟ್ಟಾದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿಯೇ ಈ ಒಂದು ಭಯಂಕರ ಬಾಂಬ್ ಸ್ಫೋಟ ನಡೆದಿದ್ದು. ಬಾಂಬ್ ಸ್ಫೋಟಗೊಂಡ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಭೀಕರ ದೃಶ್ಯ ಕಂಡರೆ ಎಂತವರ ಎದೆಯೂ ಕೂಡ ನಡುಗಿ ಹೋಗುತ್ತದೆ. ನೂರಾರು ಜನರು ಪ್ಲಾಟ್ಫಾರ್ಮ್ನಲ್ಲಿ ರೈಲಿಗಾಗಿ ಕಾಯುತ್ತಿದ್ದ ಸಮಯದಲ್ಲಿಯೇ ಈ ಒಂದು ದುರಂತ ಸಂಭವಿಸಿದೆ. ದೃಶ್ಯದಲ್ಲಿ ಬಾಂಬ್ ಸ್ಫೋಟಗೊಂಡ ತೀವ್ರತೆಗೆ ಹಲವಾರು ಮಂದಿ ಹಾರಿ ಬಿದ್ದಿದ್ದು, ರೈಲ್ವೆ ಪ್ಲಾಟ್ಫಾರ್ಮ್ನ ಛಾವಣಿಯೇ ಕಿತ್ತುಕೊಂಡು ಬಿದ್ದಿದೆ.ಸದ್ಯಕ್ಕೆ ಬಂದ ಮಾಹಿತಿ ಪ್ರಕಾರ ಇದು ಆತ್ಮಾಹುತಿ ಬಾಂಬ್ ಸ್ಫೋಟ ಎಂದೇ ಹೇಳಾಗುತ್ತಿದೆ, ಆದ್ರೆ ಇನ್ನೂ ಕೂಡ ಯಾವುದೇ ನಿಖರ ಮಾಹಿತಿ ಬಂದಿಲ
ಈಗಾಗಲೇ ಬಾಂಬ್ ಸ್ಫೋಟದ ಹಿಂದೆ ನಿಖರವಾದ ಕಾರಣವೇನು ಎಂಬುದನ್ನು ಕಂಡು ಹಿಡಿಯಲು ತನಿಖೆ ಆರಂಭವಾಗಿದೆ.ಪೇಶಾವರ ಬೌಂಡ್ ಎಕ್ಸ್ಪ್ರೆಸ್ ಕ್ವೆಟ್ಟಾ ರೈಲ್ವೆ ನಿಲ್ದಾಣದಿಂದ ಹೊರಟ ಸಮಯದಲ್ಲಿಯೇ ಈ ಒಂದು ಬ್ಲಾಸ್ಟ್ ಸಂಭವಿಸಿದ್ದು ಬಲೂಚ್ ಲಿಬರೇಷನ್ ಆರ್ಮಿ ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ. ಬಲೂಚ್ ಲಿಬರೇಷನ್ ಆರ್ಮಿಯ ವಕ್ತಾರ ಜೀಯಾಂದ್ ಬಲೂಚ್ ಈ ಬಗ್ಗೆ ಮಾತನಾಡಿದ್ದು. ಕ್ವೆಟ್ಟಾ ರೈಲ್ವೆ ನಿಲ್ದಾಣದಲ್ಲಿ ಆದ ಬಾಂಬ್ ಸ್ಫೋಟದ ಹೊಣೆ ನಮ್ಮದೇ ಆಗಿದೆ.
#Pakistan is suffering the consequences of its deeds. #BombBlast took place in the #QuettaRailwayStation of Pakistan in which hundreds of people lost their lives. Pakistan itself is responsible for this.
क्वेटा रेलवे स्टेशन को बलूच सेना ने उड़ा दिया! #Blastpic.twitter.com/uUgMeQ4jKk
— Rocky Bhai ? (@Iambakshi) November 9, 2024
ಈ ಒಂದು ಭೀಕರ ಕೃತ್ಯ ಪಾಕಿಸ್ತಾನದ ಆರ್ಮಿ ವಿರುದ್ಧವಾಗಿದ್ದು, ಕ್ವೆಟ್ಟಾ ರೈಲ್ವೆ ಸ್ಟೇಷನ್ನಿಂದ ಜಾಫರ್ ಎಕ್ಸ್ಪ್ರೆಸ್ ಮೂಲಕ ಪಾಕ್ ಸೇನೆಯ ಸೈನಿಕರ ತಂಡ ವಾಪಸ್ ಬರುತ್ತಿರುವುದು ನಮಗೆ ಗೊತ್ತಾಗಿತ್ತು. ಹೀಗಾಗಿ ಅವರನ್ನು ಗುರಿಯಿಟ್ಟುಕೊಂಡೇ ಇಂದ ಸ್ಫೋಟವನ್ನು ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ