newsfirstkannada.com

ಭಲೇ ಬಾಲಕ.. ಬೇಟೆಗೆ ಬಂದ ಚಿರತೆಯನ್ನು ಮೆಲ್ಲಗೆ ಕೂಡಿ ಹಾಕಿ ಎಸ್ಕೇಪ್‌; ಎದೆ ಝಲ್ಲೆನಿಸುವ ವಿಡಿಯೋ ಇಲ್ಲಿದೆ!

Share :

Published March 6, 2024 at 6:35pm

    ಮೊಬೈಲ್​ನಲ್ಲಿ ಗೇಮ್ ಆಡುವಾಗ ಆಫೀಸ್​ಗೆ ಎಂಟ್ರಿ ಕೊಟ್ಟ ಚಿರತೆ

    ಯಾರಿಗೆ ಆಗಲಿ ತಾಳ್ಮೆ ಇದ್ರೆ ಆವಾಗಲೇ ಕೆಲಸ ನೂರರಷ್ಟು ಯಶಸ್ವಿ!

    ಬಾಲಕ ಚಿರತೆಯನ್ನ ಕೂಡಿ ಹಾಕಿದ್ದಕ್ಕೆ ಸೆಲ್ಯೂಟ್ ಹೇಳ್ತಿರುವ ನೆಟ್ಟಿಗರು

ಮುಂಬೈ: ಯಾವುದೇ ಕೆಲಸ ಮಾಡಬೇಕಾದರೆ ತಾಳ್ಮೆ ಇರಬೇಕು. ಆವಾಗಲೇ ಆ ಕೆಲಸ ನೂರರಷ್ಟು ಯಶಸ್ವಿಯಾಗುತ್ತದೆ. ಅದರಂತೆ ಬೇಟೆಯನ್ನು ಹುಡುಕಿಕೊಂಡು ಬಂದ ಚಿರತೆಯನ್ನು ಆಫೀಸ್​ನಲ್ಲಿ ಬಾಲಕನೊಬ್ಬ ಅತ್ಯಂತ ತಾಳ್ಮೆಯಿಂದ, ಸ್ಮಾರ್ಟ್​ ಆಗಿ ಕೂಡಿ ಹಾಕಿದ್ದಾನೆ. ಈ ಘಟನೆಯು ಮಹಾರಾಷ್ಟ್ರದ ಮಾಲೆಗಾಂವ್​ನಲ್ಲಿ ನಡೆದಿದೆ.

ಕಲ್ಯಾಣ ಮಂಟಪದ ಸೆಕ್ಯೂರಿಟಿ ಗಾರ್ಡ್​ವೊಬ್ಬರ ಮಗ ಮೋಹಿತ್ ಅಹಿರೆ (12) ಚಾಣಕ್ಷತೆಯಿಂದ ಚಿರತೆಯನ್ನು ಕೂಡಿ ಹಾಕಿದ್ದಾನೆ. ತಂದೆ ಹೊರ ಹೋದ ಸಮಯದಲ್ಲಿ ಆಫೀಸ್​ನ ಬಾಗಿಲಿನ ಬಳಿಯಿದ್ದ ಸೋಫಾದಲ್ಲಿ ಮೊಬೈಲ್​ನಲ್ಲಿ ಗೇಮ್​ ಆಡಿಕೊಂಡು ಕುಳಿತಿರುತ್ತಾನೆ. ಅದೇ ವೇಳೆ ಅಲ್ಲಿಗೆ ಬೇಟೆ ಹುಡುಕಿಕೊಂಡು ಚಿರತೆ ಬಂದು ಆಫೀಸ್​ನೊಳಗೆ ಹೋಗಿದೆ. ಆದರೆ ಬಾಗಿಲು ಬಳಿ ಸೋಫಾದಲ್ಲಿ ಕುಳಿತ್ತಿದ್ದ ಬಾಲಕನನ್ನು ಗಮನಿಸದೇ ಚಿರತೆ ಒಳ ಹೋಗಿದೆ. ಆದರೆ ಈ ವೇಳೆ ಯಾವುದೇ ಕೂಗದೇ, ಗಲಾಟೆ ಮಾಡದೇ ಕುಳಿತಲ್ಲಿಂದ ಸೈಲೆಂಟ್ ಆಗಿ ಎದ್ದ ಬಾಲಕ ತಕ್ಷಣ ಬಾಗಿಲನ್ನು ಮುಚ್ಚಿದ್ದಾನೆ.

ಬಾಗಿಲು ಹಾಕಿದ ತಕ್ಷಣ ಬಾಲಕ ಕಿರುಚಿಕೊಂಡಿದ್ದಾನೆ. ಇದನ್ನು ಕೇಳಿದ ಸ್ಥಳೀಯರೆಲ್ಲ ಓಡೋಡಿ ಬಂದು ಏನಾಯಿತು ಎಂದು ಕೇಳಿದ್ದಾರೆ. ಆಗ ಬಾಲಕ ನಡೆದಿದ್ದನ್ನು ಹೇಳಿದ್ದರಿಂದ ಸ್ಥಳೀಯರು ಮಾಹಿತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಚಿರತೆಯನ್ನು ಕೂಡಿ ಹಾಕಿದ ಬಾಲಕನ ಚಾಣಕ್ಷತೆಯ ದೃಶ್ಯ ಆಫೀಸ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದು, ನೆಟ್ಟಿಗರೆಲ್ಲ ಬಾಲಕನ ಕೆಲಸಕ್ಕೆ ಸೆಲ್ಯೂಟ್ ಎಂದು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಲೇ ಬಾಲಕ.. ಬೇಟೆಗೆ ಬಂದ ಚಿರತೆಯನ್ನು ಮೆಲ್ಲಗೆ ಕೂಡಿ ಹಾಕಿ ಎಸ್ಕೇಪ್‌; ಎದೆ ಝಲ್ಲೆನಿಸುವ ವಿಡಿಯೋ ಇಲ್ಲಿದೆ!

https://newsfirstlive.com/wp-content/uploads/2024/03/MAHARASHTRA_BOY.jpg

Load More