CDSCO; ಉದ್ಯೋಗದಲ್ಲಿ ಅನುಭವ ಇರುವವರಿಗೆ ಇಲ್ಲಿದೆ ಕೆಲಸ.. ಆರಂಭದಲ್ಲೇ ಸಂಬಳ 67,700 ರೂ

author-image
Bheemappa
Updated On
KPSC ಇಂದ ಅಧಿಸೂಚನೆ.. ಕರ್ನಾಟಕ ಲೋಕೋಪಯೋಗಿ ಇಲಾಖೆಯ ಹುದ್ದೆಗಳಿಗೆ ಅರ್ಜಿ ಆಹ್ವಾನ
Advertisment
  • ಅರ್ಜಿ ಕಳುಹಿಸಿ ಕೊಡಬೇಕಾದ ವಿಳಾಸ ಇಲ್ಲಿ ನೀಡಲಾಗಿದೆ
  • 56 ವರ್ಷದ ಒಳಗಿನ ಉದ್ಯೋಗ ಆಕಾಂಕ್ಷಿಗಳಿಗೆ ಅವಕಾಶವಿದೆ
  • ಅಭ್ಯರ್ಥಿ ನೇಮಕವಾದರೆ ಎಲ್ಲಿ ನೇಮಕ ಮಾಡಲಾಗುವುದು?

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ನುರಿತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಉದ್ಯೋಗದಲ್ಲಿ ಸಾಕಷ್ಟು ಅನುಭವ ಹೊಂದಿದವರು ಈ ಕೆಲಸಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಸಿಡಿಎಸ್​​ಸಿಒ ಸಂಸ್ಥೆಯು ಹಿರಿಯ ವೈಜ್ಞಾನಿಕ ಅಧಿಕಾರಿ ಗ್ರೂಪ್- ಎ ಗೆಜೆಟೆಡ್ ಹುದ್ದೆಯನ್ನ ತುಂಬಲು ಬಯಸಿದೆ. 56 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಒಂದು ವೇಳೆ ಅಭ್ಯರ್ಥಿಯು ಕೆಲಸಕ್ಕೆ ನೇಮಕವಾದರೆ ಮೂರು ವರ್ಷಗಳವರೆಗೆ ಮಾತ್ರ ನೇಮಕ ಮಾಡಲಾಗುವುದು. ಆಯ್ಕೆ ಆದವರನ್ನು ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯ ಗುವಾಹಟಿ ಇಲ್ಲಿಗೆ ನೇಮಕ ಮಾಡಲಾಗುವುದು.

ಇದನ್ನೂ ಓದಿ:KPSC ಇಂದ ಕೃಷಿ ಇಲಾಖೆಯ 273 ಉದ್ಯೋಗಗಳಿಗೆ ಮತ್ತೆ ಅರ್ಜಿ ಆಹ್ವಾನ

publive-image

ಯಾವ ಪದವಿ ಪಡೆದಿರಬೇಕು

ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರ, ಬಯೋಕೆಮಿಸ್ಟ್ರಿ, ಫಾರ್ಮಸಿ, ಫಾರ್ಮಾಸ್ಯುಟಿಕಲ್ ಕೆಮಿಸ್ಟ್ರಿ, ಫಾರ್ಮಾಕಾಲಜಿ, ಬ್ಯಾಕ್ಟೀರಿಯಾಲಜಿ, ಮೆಡಿಸಿನ್, ಮೈಕ್ರೋಬಯಾಲಜಿ, ಬಯೋಟೆಕ್ನಾಲಜಿ ಇವುಗಳಲ್ಲಿ ಯಾವುದಾದರೂ ಒಂದರಲ್ಲಿ ದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ 6 ವರ್ಷಗಳ ಉದ್ಯೋಗದ ಅನುಭವ ಹೊಂದಿರಬೇಕು.

ಸಂಸ್ಥೆಯು ಒಳ್ಳೆಯ ಸಂಬಳ ಕೊಡುತ್ತದೆ. ಮಾಸಿಕವಾಗಿ 67,700 ರಿಂದ 2,08,700 ರೂಪಾಯಿಗಳನ್ನು ನೀಡಲಾಗುತ್ತದೆ. ಈ ಎಲ್ಲ ಮಾದಂಡಗಳನ್ನು ಹೊಂದಿರುವವರು ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಅದಕ್ಕೆ ಎಲ್ಲ ದಾಖಲೆಗಳೊಂದಿಗೆ ಸಂಸ್ಥೆಯ ವಿಳಾಸಕ್ಕೆ ಕಳುಹಿಸಬಹುದು. ಸಂಸ್ಥೆ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 60 ದಿನಗಳ ಒಳಗಾಗಿ ಸ್ವವಿವರ ಕಳುಹಿಸಿಕೊಡಬೇಕು. ನೀವು ಕಳುಹಿಸಬೇಕಾದ ವಿಳಾಸ ಈ ಕೆಳಗಡೆ ನೀಡಲಾಗಿದೆ.

ವಿಳಾಸ- Shri Pawan Kumar, Deputy Director (Admn.), (CDSCO), FDA Bhawan, Kotla Road, New Delhi-110002

ಮಾಹಿತಿಗಾಗಿ- https://cdsco.gov.in/opencms/opencms/system/modules/CDSCO.WEB/elements/download_file_division.jsp?num_id=MTI1MTA=

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment