/newsfirstlive-kannada/media/post_attachments/wp-content/uploads/2025/05/PAK-AND-US.jpg)
ಭಾರತೀಯ ಸೇನೆಯ ವೈಮಾನಿಕ ದಾಳಿಗೆ ಪಾಕಿಸ್ತಾನ ಪತರಗುಟ್ಟಿ ಹೋಗಿತ್ತು. ಉಗ್ರರ ನೆಲೆಗಳು ತರಗಲೆಯಂತೆ ಉದುರಿ ಹೋಗುವಾಗ ಭಾರತದ ಮುಂದೆ ಮಂಡಿಯೂರುವುದನ್ನ ಬಿಟ್ಟು ಆ ದೇಶಕ್ಕೆ ಬೇರೆ ಆಯ್ಕೆಯೇ ಇರಲಿಲ್ಲ. ಪಾಕಿಸ್ತಾನದಲ್ಲಿ ಭಯಾನಕ ನಷ್ಟ ಉಂಟಾದ ಮೇಲೆ ಕದನ ವಿರಾಮಕ್ಕೆ ಒಪ್ಪಿಕೊಂಡಿತು. ಆದರೆ ಕದನ ವಿರಾಮದ ಮೂರೇ ಗಂಟೆಯಲ್ಲಿ ಉಲ್ಲಂಘಿಸಿ ಮತ್ತೆ ಡ್ರೋನ್‌ಗಳ ಮೂಲಕ ದಾಳಿಗೆ ಯತ್ನಿಸಿದೆ.
ಪಾಕ್ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದೇಕೆ?
ಭಾರತದ ದಾಳಿಗೆ ನಡುಗಿದ್ದ ಪಾಕಿಸ್ತಾನ ದಿಢೀರನೇ ಕದನ ವಿರಾಮ ಪ್ರಸ್ತಾಪಕ್ಕೆ ಮುಂದಾಗಿತ್ತು. ಇದಕ್ಕೆ ಪ್ರಮುಖ ಕಾರಣ ಪಾಕಿಸ್ತಾನಕ್ಕೆ IMF (ಅಂತರಾಷ್ಟ್ರೀಯ ಹಣಕಾಸು ನಿಧಿ) ನೀಡುವ 1.2 ಬಿಲಿಯನ್ ಡಾಲರ್ ಸಾಲ. ಹೌದು ಪಾಕಿಸ್ತಾನಕ್ಕೆ ಐಎಂಎಫ್ 19 ಸಾವಿರ ಕೋಟಿ ರೂಪಾಯಿಯ ಸಾಲ ಮಂಜೂರು ಮಾಡಿದೆ. IMF ಸಾಲ ಬಿಡುಗಡೆಗೆ ಅಮೆರಿಕಾ ಕದನ ವಿರಾಮದ ಷರತ್ತು ವಿಧಿಸಿತ್ತು. ಇದರಿಂದಾಗಿ ನಿನ್ನೆ ಮಧ್ಯಾಹ್ನ ಪಾಕ್ ಡಿಜಿಎಂಓರಿಂದ ಕದನ ವಿರಾಮದ ಪ್ರಸ್ತಾಪ ಸಲ್ಲಿಸಿತ್ತು. ಭಾರತದ ಡಿಜಿಎಂಓ ಕೂಡ ಇದನ್ನು ಒಪ್ಪಿಕೊಂಡಿತ್ತು.
ಪಾಕಿಸ್ತಾನಕ್ಕೆ ಐಎಂಎಫ್‌ನ 1.2 ಬಿಲಿಯನ್ ಡಾಲರ್ ಸಾಲ ಸಿಗದಿದ್ದರೆ ಆರ್ಥಿಕ ಸಂಕಷ್ಟ ಮತ್ತಷ್ಟ ಹೆಚ್ಚಳ ಆಗುತ್ತಾ ಇತ್ತು. ಹೀಗಾಗಿ ಐಎಂಎಫ್‌ನ ಸಾಲದ ಹಣಕ್ಕಾಗಿ ಪಾಕಿಸ್ತಾನ ಅನಿವಾರ್ಯವಾಗಿ ಕದನ ವಿರಾಮದ ಷರತ್ತು ಒಪ್ಪಿಕೊಂಡಿದೆ.
ಇದನ್ನೂ ಓದಿ: ‘ಭಾರತದ ರಫೇಲ್ ಹೊಡೆದು ಉರುಳಿಸಿದ್ದೇವೆ’- ಪಾಕ್ ಪ್ರಧಾನಿ ಹೇಳಿದ 4 ಸುಳ್ಳುಗಳು ಇಲ್ಲಿವೆ!
ಕದನ ವಿರಾಮ ಉಲ್ಲಂಘನೆ ಮಾಡಿದ್ದೇಕೆ?
ಭಿಕ್ಷೆ ಬೇಡುತ್ತಿದ್ದ ಪಾಕಿಸ್ತಾನ ಸರ್ಕಾರ IMF ಸಾಲಕ್ಕಾಗಿ ಅಮೆರಿಕಾದ ಷರತ್ತು ಒಪ್ಪಿಕೊಂಡಿತ್ತು. ಆರ್ಥಿಕ ಸಂಕಷ್ಟದಿಂದ ಪಾರಾಗಲು ಕದನ ವಿರಾಮಕ್ಕೆ ಒಪ್ಪಿಕೊಂಡಿತ್ತು. ಆದರೆ ಪಾಕ್ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರೇ ಪಾಕಿಸ್ತಾನ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಕದನ ವಿರಾಮದ ಬಗ್ಗೆ ಪಾಕಿಸ್ತಾನದಲ್ಲೇ 2 ವಾದವಿದ್ದು, ಭಿನ್ನಮತ ಸೃಷ್ಟಿಯಾಗಿದೆ. ಪಾಕ್ ಸರ್ಕಾರದ ವಿರುದ್ಧ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ತಿರುಗಿಬಿದ್ದಿದ್ದಾರೆ. ಸರ್ಕಾರ ಒಪ್ಪಿದ ಕದನ ವಿರಾಮಕ್ಕೆ ಒಪ್ಪದ ಅಸೀಮ್ ಮುನೀರ್ ಅವರ ಸೂಚನೆ ಮೇರೆಗೆ ಪಾಕ್ನಿಂದ ಮತ್ತೆ ದಾಳಿ ನಡೆದಿದೆ.
ಕದನ ವಿರಾಮಕ್ಕೆ ಪಾಕ್ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಒಪ್ಪಿಕೊಂಡಿಲ್ಲ. ಹೀಗಾಗಿ ಅಸೀಮ್ ಮುನೀರ್ ಸೂಚನೆ ಮೇರೆಗೆ ಪಾಕ್ ಸೇನೆಯಿಂದ ಭಾರತದ ಮೇಲೆ ಡ್ರೋಣ್ ದಾಳಿ ನಡೆಸಲಾಗಿದೆ. ಅಸೀಮ್ ಮುನೀರ್ ಕುತಂತ್ರದಿಂದ ಕದನ ವಿರಾಮ ಉಲ್ಲಂಘನೆಯಾಗಿದೆ ಎನ್ನಲಾಗಿದೆ.
ಕದನ ವಿರಾಮದ ಕಳ್ಳಾಟವಾಡಿದ ಪಾಕಿಸ್ತಾನ ಮೇ 10 ಅಂದ್ರೆ ನಿನ್ನೆ ಮಧ್ಯಾಹ್ನದಿಂದ ತಡರಾತ್ರಿಯವರೆಗೆ ಏನೆಲ್ಲಾ ಮಾಡಿದೆ ಅನ್ನೋದರ ವಿವರ ಇಲ್ಲಿದೆ.
ಪಾಕ್ ಕಳ್ಳಾಟದ ಕಥೆ!
ಮಧ್ಯಾಹ್ನ 3:35: ಪಾಕ್ ಡಿಜಿಎಂಒ ಫೋನ್, ವಿದೇಶಾಂಗ ಕಾರ್ಯದರ್ಶಿ ಮಾಹಿತಿ
ಸಂಜೆ 5:00: ಎಲ್ಲಾ ತರಹದ ಕದನ ವಿರಾಮ ಘೋಷಿಸಿದ ಭಾರತ-ಪಾಕ್
ಸಂಜೆ 5:15: ಕದನ ವಿರಾಮ ಬಳಿಕ ಪ್ರಧಾನಿ ಮೋದಿ ಹೈ ಲೇವೆಲ್ ಮೀಟಿಂಗ್
ಮೋದಿ ಸಭೆಯಲ್ಲಿ ಅಜಿತ್ ದೋವಲ್, 3 ಸೇನೆಗಳ ಮುಖ್ಯಸ್ಥರು ಭಾಗಿ
ಸಂಜೆ 5:30: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕದನ ವಿರಾಮ ಘೋಷಣೆ
ಸಂಜೆ 6:00: ಪಾಕಿಸ್ತಾನದ ಏರ್ಸ್ಪೇಸ್ ಓಪನ್, ವಿಮಾನಗಳ ಹಾರಾಟ ಆರಂಭ
ರಾತ್ರಿ 8:00: ಕದನ ವಿರಾಮ ಘೋಷಣೆಯಾದ ಮೂರು ಗಂಟೆ ಬಳಿಕ ಉಲ್ಲಂಘನೆ
ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ತಾನದಲ್ಲಿ ಪಾಕ್ನಿಂದ ಶೆಲ್ ದಾಳಿ
ರಾತ್ರಿ 8:30: ಇಂಡಿಯನ್ ಏರ್ಸ್ಪೇಸ್ಗೆ ನುಗ್ಗಿ ಬಂದ ಪಾಕ್ನ ಡ್ರೋನ್ಗಳು
ರಾತ್ರಿ 8:30: LOC ಹೊಂದಿರುವ ಭಾರತದ ಗಡಿ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಣೆ
ರಾತ್ರಿ 8:30: ಪಾಕ್ನ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೇನೆ ಪ್ರತ್ಯುತ್ತರ
ರಾತ್ರಿ 10:30: ಗಡಿ ಭಾಗದಲ್ಲಿ ಮಿಸೈಲ್, ಡ್ರೋನ್ ದಾಳಿಗಳಿಗೆ ಪಾಕಿಸ್ತಾನ ಬ್ರೇಕ್
ರಾತ್ರಿ 11:00: ಕದನ ವಿರಾಮ ಉಲ್ಲಂಘನೆಗೆ ಪ್ರತಿದಾಳಿಗೆ ಸೂಚಿಸಿದ ವಿದೇಶಾಂಗ ಇಲಾಖೆ
ರಾತ್ರಿ 11 :00: ಈ ಬಗ್ಗೆ ಪಾಕ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ ವಿಕ್ರಮ್ ಮಿಸ್ರಿ
ರಾತ್ರಿ 11:30: ತಡರಾತ್ರಿ ಸುದ್ದಿಗೋಷ್ಠಿ ನಡೆಸಿದ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್
ರಾತ್ರಿ 11:30: ಚೀನಾಕ್ಕೆ ಹೊಗಳಿ, ಭಾರತವನ್ನ ಮತ್ತೆ ಕೆಣಕಿ, ಬೆನ್ನು ತಟ್ಟಿಕೊಂಡ ಷರೀಫ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ