newsfirstkannada.com

ಕರ್ಣಾಟಕ ಬ್ಯಾಂಕ್​ಗೆ 100ನೇ ವರ್ಷದ ಸಂಭ್ರಮ; ಯಾವುದೇ ಕಾರಣಕ್ಕೂ ಬ್ಯಾಂಕ್ ವಿಲೀನ ಆಗಬಾರದು ಎಂದ ಡಿಕೆಶಿ

Share :

Published February 19, 2024 at 7:12am

Update February 19, 2024 at 7:42am

  ಸ್ವಾತಂತ್ರ್ಯಪೂರ್ವದಲ್ಲೇ ಅಸ್ತಿತ್ವಕ್ಕೆ ಬಂದ ಬ್ಯಾಂಕ್

  ಶತಮಾನೋತ್ಸವ ಸಂಭ್ರಮದಲ್ಲಿ ಕನ್ನಡಿಗರ ಬ್ಯಾಂಕ್​

  ಅಂಚೆ ಚೀಟಿ&ಕವರ್‌ಗಳ ಬಿಡುಗಡೆಗೊಳಿಸಿದ ಗಣ್ಯರು

ಕರ್ಣಾಟಕ ಬ್ಯಾಂಕ್ ಯಾವುದೇ ಕಾರಣಕ್ಕೂ ಬೇರೆ ಬ್ಯಾಂಕ್‌ಗಳ ಜೊತೆ ವಿಲೀನ ಆಗಬಾರದು, ಬದಲಿಗೆ ಬೇರೆ ಬ್ಯಾಂಕ್‌ಗಳನ್ನೇ ಇದರಲ್ಲಿ ವಿಲೀನ ಮಾಡುವುದಕ್ಕೆ ಎಲ್ಲರೂ ಪ್ರತಿಜ್ಞಾಬದ್ಧರಾಗಬೇಕು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕರೆ ನೀಡಿದ್ದಾರೆ. ಕರ್ಣಾಟಕ ಬ್ಯಾಂಕ್‌ನ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಕರ್ಣಾಟಕ ಬ್ಯಾಂಕ್‌. ಸ್ವಾತಂತ್ರ್ಯಪೂರ್ವದಲ್ಲೇ ಅಸ್ತಿತ್ವಕ್ಕೆ ಬಂದ ಬ್ಯಾಂಕ್​. 100 ವರ್ಷಗಳನ್ನು ಪೂರೈಸಿರುವ ಖಾಸಗಿ ರಂಗದ ಮುಂಚೂಣಿಯ ಬ್ಯಾಂಕ್‌. ಸದ್ಯ ಇದರ ಶತಮಾನೋತ್ಸವ ಸಮಾರಂಭ ಮಂಗಳೂರಿನಲ್ಲಿ ನಡೆಯಿತು.

ಮಂಗಳೂರು ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಭವ್ಯ ಸಮಾರಂಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯ ಅತಿಥಿಯಾಗಿ‌ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಕರ್ಣಾಟಕ ಬ್ಯಾಂಕ್ ಯಾವುದೇ ಕಾರಣಕ್ಕೂ ಬೇರೆ ಬ್ಯಾಂಕ್‌ಗಳ ಜೊತೆ ವಿಲೀನ ಆಗಬಾರದು. ಬದಲಿಗೆ ಬೇರೆ ಬ್ಯಾಂಕ್‌ಗಳನ್ನೇ ಇದರಲ್ಲಿ ವಿಲೀನ ಮಾಡುವುದಕ್ಕೆ ಎಲ್ಲರೂ ಪ್ರತಿಜ್ಞಾಬದ್ಧರಾಗಬೇಕು ಅಂತ ಹೇಳಿದರು.

ಬಳಿಕ ಮಾತನಾಡಿದ ಭಾರತ ಸರಕಾರದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಕರ್ಣಾಟಕ ಬ್ಯಾಂಕ್ ದೇಶಾದ್ಯಂತ ಬ್ಯಾಂಕಿಂಗ್ ಕನಸು ಹುಟ್ಟುಹಾಕಿದೆ. ಅದೇ ರೀತಿ ಕನ್ಯಾಕುಮಾರಿ ಹಾಗೂ ಕಾಶ್ಮೀರದಲ್ಲೂ ಶಾಖೆ ತೆರೆಯುವ ಮೂಲಕ ಭಿನ್ನವಾದ ಭಾರತ್ ಜೋಡೋ ಯೋಜನೆ ಹಮ್ಮಿಕೊಳ್ಳಲಿ. ಆ ಮೂಲಕ ಮೌಲ್ಯಯುತವಾದ ಉತ್ಪನ್ನಗಳು ಜನರಿಗೆ ಸಿಗುವಂತಾಗಲಿ. ನೂರಾರು ಕರ್ಣಾಟಕ ಬ್ಯಾಂಕ್‌ಗಳು ಜನಿಸುವಂತಾಗಲಿ ಎಂದು ಹಾರೈಸಿದರು.

ಇನ್ನು ಬ್ಯಾಂಕ್‌ನ ಚೇರ್ಮನ್ ಪಿ. ಪ್ರದೀಪ್ ಕುಮಾರ್ ಮಾತನಾಡಿ, 100 ವರ್ಷಗಳಲ್ಲಿ ಗ್ರಾಹಕರ ಅನಿಯಮಿತ ಬೆಂಬಲ, ಸಿಬ್ಬಂದಿಯ ಸೇವಾ ಬದ್ಧತೆ, ಆಡಳಿತ ವರ್ಗದ ಸದಾ ನವೀನತೆಗೆ ತೆರೆದುಕೊಳ್ಳುವ ಗುಣದಿಂದ ಬ್ಯಾಂಕ್ ಇಷ್ಟು ಬೆಳೆಯುವಂತಾಯಿತು ಎಂದರು.

ಇನ್ನು ಬ್ಯಾಂಕ್‌ನ ನೂರು ವರ್ಷಗಳ ಸವಿನೆನಪಿಗೆ 100 ರೂಪಾಯಿ ವಿಶೇಷ ನಾಣ್ಯ, ಅಂಚೆ ಚೀಟಿ ಹಾಗೂ ಕವರ್‌ಗಳನ್ನು ಗಣ್ಯರು ಬಿಡುಗಡೆ ಮಾಡಿದರು. ಅಲ್ಲದೆ ಶತಮಾನೋತ್ಸವ ನೆನಪಿನ ಸ್ಮರಣಿಕೆ ಹಾಗೂ ನವೀಕೃತ ವೆಬ್‌ಸೈಟ್‌ಗಳನ್ನು ಅನಾವರಣ ಗೊಳಿಸಲಾಯಿತು. ಇದೇ ವೇಳೆ ಕರ್ಣಾಟಕ ಬ್ಯಾಂಕ್‌ನ ವಿವಿಧ ಕಡೆಗಳಲ್ಲಿ 15 ಶಾಖೆಗಳನ್ನು ಏಕಕಾಲದಲ್ಲಿ ಉದ್ಘಾಟನೆ ಮಾಡಲಾಯಿತು. ಒಟ್ಟಾರೆ ನಾಡಿನ ಹೆಮ್ಮೆಯ ಕರ್ಣಾಟಕ ಬ್ಯಾಂಕ್ ಹೀಗೆ ತನ್ನ ಸೇವೆ ಮುಂದುವರೆಸಲಿ ಅನ್ನೋದೇ ಕನ್ನಡಿಗರ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ಣಾಟಕ ಬ್ಯಾಂಕ್​ಗೆ 100ನೇ ವರ್ಷದ ಸಂಭ್ರಮ; ಯಾವುದೇ ಕಾರಣಕ್ಕೂ ಬ್ಯಾಂಕ್ ವಿಲೀನ ಆಗಬಾರದು ಎಂದ ಡಿಕೆಶಿ

https://newsfirstlive.com/wp-content/uploads/2024/02/D-K-Shivakumar-1.jpg

Load More