/newsfirstlive-kannada/media/post_attachments/wp-content/uploads/2025/03/SUNITA-WILLIAMS-VILLAGE.jpg)
ಯಾರೇ, ಯಾವುದೇ ದೇಶಕ್ಕೆ ಹೋಗಿ ದೊಡ್ಡ ಸಾಧನೆ ಮಾಡಿದ ಭಾರತೀಯರನ್ನು ಈ ದೇಶ ಎಂದು ಮರೆತಿಲ್ಲ. ಅಂದು ಕಲ್ಪನಾ ಚಾವ್ಲಾರ ಅಗಲಿಕೆಗೆ ಹೇಗೆ ಇಡೀ ದೇಶಕ್ಕೆ ದೇಶವೇ ಕಣ್ಣೀರಿಟ್ಟಿತ್ತೋ. ಇಂದು ನಮ್ಮದೇ ದೇಶದ ಮೂಲದ ಹೆಮ್ಮೆಯ ಕುವರಿ ಬಾಹ್ಯಾಕಾಶದಲ್ಲಿ ಮೂರು ತಿಂಗಳುಗಳನ್ನು ಕಳೆದು ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. ಇಡೀ ದೇಶಕ್ಕೆ ದೇಶವೇ ಹೆಮ್ಮೆಯಿಂದ ಬೀಗುತ್ತಿದೆ. ದೇವರೇ ನಮ್ಮ ಪ್ರಾರ್ಥನೆ ನಿನಗೆ ಕೇಳಿಸಿತಲ್ಲ. ಧನ್ಯೋಸ್ಮಿ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಸುನೀತಾ ವಿಲಿಯಮ್ಸ್ ಅವರ ವಂಶದ ಬೇರು ಬೆಳೆದ ಊರಲ್ಲಂತೂ ತೀರದ ಸಂಭ್ರಮ.
ಹೌದು, ಗುಜರಾತ್​ನ ಮೆಹ್ಸಾನ್ ಜಿಲ್ಲೆಯ ಜುರಸಾಲ್​ ಗ್ರಾಮದಲ್ಲೀಗ ಸಂಭ್ರಮ ಮನೆ ಮಾಡಿದೆ. ನಮ್ಮ ಮನೆ ಮಗಳು, ನಮ್ಮೂರಿನ ಹೆಮ್ಮೆಯ ಕುವರಿಯ ಸಾಧನೆಯನ್ನು ಕಂಡು ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದೇ ಕೆಲವು ದಿನಗಳ ಹಿಂದೆ ಸುನೀತಾ ಸುರಕ್ಷಿತವಾಗಿ ಬರಲಿ ಎಂದು ಪೂಜೆ, ಹೋಮ ಹವನ ಮಾಡಿದ್ದರು. ಇಂದು ಸುನೀತಾ ವಿಲಿಯಮ್ಸ್ ಸುರಕ್ಷಿತವಾಗಿ ಬಂದಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
Celebrations at #SunitaWilliams ancestral village Jhulasan #Mehsana Gujarat #sunitawilliamsreturn#NASApic.twitter.com/d8zUM2GX8e
— Shivani Sharma (@shivanipost)
Celebrations at #SunitaWilliams ancestral village Jhulasan #Mehsana Gujarat #sunitawilliamsreturn#NASApic.twitter.com/d8zUM2GX8e
— Shivani Sharma (@shivanipost) March 18, 2025
">March 18, 2025
ಸುನೀತಾ ವಿಲಿಯಮ್ಸ್ ತಂದೆ ದೀಪಕ್ ಪಾಂಡ್ಯಾ ಅವರು ಇದೇ ಗ್ರಾಮದವರು. ಸುನೀತಾ ವಿಲಿಯಮ್ಸ್​ ವಂಶದ ಬೇರುಗಳು ಇಲ್ಲಿಯೇ ಇವೆ. ಈ ಗ್ರಾಮಕ್ಕೆ ಸುನೀತಾ ವಿಲಿಯಮ್ಸ್ ಈ ಹಿಂದೆ ಎರಡು ಬಾರಿ ಭೇಟಿ ನೀಡಿದ್ದರು. ಈಗ ತಮ್ಮೂರಿನ ಮಗಳು ಮೂರು ತಿಂಗಳುಗಳ ಕಾಲದ ಬಾಹ್ಯಾಕಾಶದ ಬದುಕಿನಿಂದ ಸುರಕ್ಷಿತವಾಗಿ ಭೂಮಿಗೆ ಬಂದಿದ್ದು ಅವರ ಹರ್ಷವನ್ನು ಇಮ್ಮಡಿಗೊಳಿಸಿದೆ. ಹೀಗಾಗಿ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಜುರಸಾಲ್ ಗ್ರಾಮಸ್ಥರು ಸಂಭ್ರಮಿಸಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ