/newsfirstlive-kannada/media/post_attachments/wp-content/uploads/2025/01/SUDEEP_ASHOK_KHENI.jpg)
2025ರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 11ನೇ ವರ್ಷದ ಟೂರ್ನಿಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಫೆಬ್ರುವರಿ 8 ರಿಂದ ಲೀಗ್ನ ಪಂದ್ಯಾವಳಿಗಳು ಆರಂಭವಾಗಲಿವೆ. ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರ ಹೆಸರನ್ನು ಘೋಷಣೆ ಮಾಡಲಾಗಿದೆ.
ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರ ಹೆಸರನ್ನು ಘೋಷಣೆ ಮಾಡಲಾಗಿದೆ. ಅಶೋಕ್ ಖೇಣಿಯವರು ತಂಡದ ಮಾಲೀಕರಾಗಿದ್ದು ಈ ಸಲ ತಂಡವನ್ನು ಸುದೀಪ್ ಅವರ ನೇತೃತ್ವದಲ್ಲಿ ಮುನ್ನಡೆಯಲಿದೆ. ಕಳೆದ ಬಾರಿ ರನ್ನರ್ ಅಪ್ ಆಗಿದ್ದ ಕರ್ನಾಟಕ ಬುಲ್ಡೋಜರ್ಸ್ ಈ ಬಾರಿ ಟ್ರೋಫಿ ಗೆಲ್ಲುವ ನಿರೀಕ್ಷೆಯಿಂದ ಅಖಾಡಕ್ಕೆ ಎಂಟ್ರಿ ಕೊಡಲಿದೆ.
ಮೊದಲ ಪಂದ್ಯ ಬೆಂಗಳೂರಿನಲ್ಲಿ ಫೆಬ್ರುವರಿ 8 ರಂದು ನಡೆಯಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ರೈನೋಸ್ ಹಾಗೂ ಬೆಂಗಾಲ್ ಟೈಗರ್ಸ್ ಸೆಣಸಾಡಲಿವೆ. ಇದರ ನಂತರ 2ನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ಪಂದ್ಯವಾಡಲಿವೆ. ಮೊದಲ ದಿನ ಎರಡು ಪಂದ್ಯಗಳನ್ನು ನಿಗದಿ ಮಾಡಲಾಗಿದೆ.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಇದು ಭಾರತೀಯ ಚಿತ್ರರಂಗದ ವಿವಿಧ ಚಲನಚಿತ್ರೋದ್ಯಮಗಳ ನಟರ ತಂಡಗಳನ್ನು ಒಳಗೊಂಡ ಟೂರ್ನಿಯಾಗಿದೆ. 2025ರ ಟೂರ್ನಿಯಲ್ಲಿ ಒಟ್ಟು 7 ಟೀಮ್ಗಳು ಭಾಗವಹಿಸಲಿವೆ. ಇದರಲ್ಲಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಕೂಡ ಒಂದಾಗಿದೆ. ಇದರ ಜೊತೆಗೆ ತೆಲುಗು ವಾರಿಯರ್ಸ್, ಬೆಂಗಾಲ್ ಟೈಗರ್ಸ್, ಚೆನ್ನೈ ರೈನೋಸ್, ಪಂಜಾಬ್ ಡಿ ಶೇರ್, ಮುಂಬೈ ಹೀರೋಸ್, ಭೋಜ್ಪುರಿ ದಬಾಂಗ್ಸ್ ತಂಡಗಳು ಇವೆ.
ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರ ಹೆಸರನ್ನು ಘೋಷಣೆ ಮಾಡಲಾಗಿದೆ. ಯಾರು ಯಾರು ಸ್ಥಾನ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ. ಇದರ ಜೊತೆಗೆ ಈ ಬಾರಿಯ ಬಿಗ್ಬಾಸ್ ಸೀಸನ್- 11ರಲ್ಲಿ ಭಾಗಿಯಾಗಿದ್ದ ತ್ರಿವಿಕ್ರಮ್ ಅವರು ಸುದೀಪ್ ಟೀಮ್ ಅಲ್ಲಿ ಸ್ಥಾನ ಪಡೆದಿರುವುದು ಮತ್ತೊಂದು ಸಂತಸ ಸುದ್ದಿಯಾಗಿದೆ. ಇನ್ನು ಸುದೀಪ್ ಹಾಗೂ ಅಶೋಕ್ ಖೇಣಿ ಅವರು ತಂಡದ ಜಿರ್ಸಿಯನ್ನು ಬಿಡುಗಡೆ ಮಾಡಿದರು.
ಇದನ್ನೂ ಓದಿ:CCL; ಕಿಚ್ಚ ನೇತೃತ್ವದ ಬುಲ್ಡೋಜರ್ಸ್ ತಂಡದಲ್ಲಿ ತ್ರಿವಿಕ್ರಮ್ಗೆ ಚಾನ್ಸ್ ಸಿಕ್ಕಿತಾ; ಸುದೀಪ್ ಹೇಳಿದ್ದೇನು?
ಕರ್ನಾಟಕ ಬುಲ್ಡೋಜರ್ಸ್ ಪ್ಲೇಯರ್ಸ್
ಸುದೀಪ್, ಗಣೇಶ್, ಡಾರ್ಲಿಂಗ್ ಕೃಷ್ಣ, ಸುನೀಲ್ ರಾವ್, ತ್ರಿವಿಕ್ರಮ್, ರಾಜೀವ್ ಹನು, ಕಾರ್ತಿಕ್ ಜಯರಾಮ್, ಚಂದನ್ ಕುಮಾರ್, ಪ್ರತಾಪ್ ನಾರಾಯಣ್, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ಕರಣ್ ಆರ್ಯನ್, ಸಾಗರ್ ಗೌಡ, ಮಂಜುನಾಥ್ ಗೌಡ ಹಾಗೂ ಅಲಕಾನಂದ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ