/newsfirstlive-kannada/media/post_attachments/wp-content/uploads/2025/06/JSK.jpg)
ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ಅಭಿನಯದ ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ ಸಿನಿಮಾಕ್ಕೆ ರಿಲೀಸ್ಗೂ ಮೊದಲೇ ಸಂಕಷ್ಟ ಎದುರಾಗಿದೆ. ಸಿನಿಮಾ ಟೈಟಲ್ ಅನ್ನು ಬದಲಾವಣೆ ಮಾಡುವಂತೆ ಸೆನ್ಸರ್ ಬೋರ್ಡ್ ಫಾರ್ ಫಿಲ್ಮ ಸರ್ಟಿಫಿಕೇಶನ್ (ಸಿಬಿಎಫ್ಸಿ) ಹೇಳಿದೆ.
ರಾಮಾಯಣದಲ್ಲಿ ಶ್ರೀರಾಮನ ಪತ್ನಿ ಸೀತೆಯ ಇನ್ನೊಂದು ಹೆಸರು ಜಾನಕಿ ಎಂದು ಇದೆ. ಆದ ಕಾರಣ ಧಾರ್ಮಿಕ ಕಾಳಜಿಯಿಂದ ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ ಸಿನಿಮಾದ ಹೆಸರನ್ನು ಬದಲಾವಣೆ ಮಾಡುವಂತೆ ಸಿಬಿಎಫ್ಸಿ ಸಿನಿಮಾ ನಿರ್ಮಾಪಕರಿಗೆ, ನಿರ್ದೇಶಕರಿಗೆ ಹೇಳಿದೆ. ಆದರೆ ಈ ಬಗ್ಗೆ ಸಿನಿಮಾ ನಟರಾಗಿದ ರಾಜ್ಯ ಸಚಿವ ಸುರೇಶ್ ಗೋಪಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ:KL ರಾಹುಲ್, ಪಂತ್ ಶತಕ ಬಾರಿಸಿದರೂ ಸಂಕಷ್ಟ.. ಕುತೂಹಲದಲ್ಲಿ ಟೆಸ್ಟ್ನ ಕೊನೆಯ ದಿನ!
ಜೂನ್ 27 ರಂದು ಬಿಡುಗಡೆ ಆಗಲಿರುವ ಈ ಸಿನಿಮಾವು ಲೈಂ*ಗಿಕ ದೌರ್ಜನ್ಯಕ್ಕೆ ಒಳಗಾದ ಹಾಗೂ ಕಾನೂನು ಹೋರಾಟ ನಡೆಸುವ ಮಹಿಳೆಯ ಕಥೆಯನ್ನು ಒಳಗೊಂಡಿದೆ. ಹಲ್ಲೆಗೊಳಗಾದ ಮಹಿಳೆಗೆ ದೇವರ ಹೆಸರನ್ನು ಈ ಸಿನಿಮಾದಲ್ಲಿ ಇಡಲಾಗಿದೆ. ಹೀಗಾಗಿ ಸಿನಿಮಾದ ಟೈಟಲ್ ಅನ್ನು ಬದಲಾವಣೆ ಮಾಡುವಂತೆ ಸಿಬಿಎಫ್ಸಿ ಮಂಡಳಿ ತಿಳಿಸಿದೆ. ಸಿನಿಮಾದಲ್ಲಿ ಹಲ್ಲೆಗೊಳಗಾದ ಮಹಿಳೆಯ ಪಾತ್ರದಲ್ಲಿ ನಟಿ ಅನುಪಮಾ ಪರಮೇಶ್ವರನ್ ಅಭಿನಯ ಮಾಡಿದ್ದಾರೆ.
ಕೇರಳದ ತಿರುವನಂತಪುರಂನಲ್ಲಿ ಇರುವ ಸಿಬಿಎಫ್ಸಿ ಈ ಸಿನಿಮಾಗೆ ಯಾವುದೇ ಸೆನ್ಸರ್ ಹೇಳದೇ ಯು/ಎ ಸರ್ಟಿಫಿಕೆಟ್ ಅನ್ನು ನೀಡಿದೆ. ಇದಾದ ಮೇಲೆ ಮುಂಬೈನಲ್ಲಿ ಮುಖ್ಯ ಕಚೇರಿ ಇರುವ ಸಿಬಿಎಫ್ಸಿಗೆ ಈ ಸಿನಿಮಾವನ್ನು ಕಳುಹಿಸಲಾಗಿತ್ತು. ಆದರೆ ಮುಂಬೈನಲ್ಲಿ ಸಿಬಿಎಫ್ಸಿ ಅಧಿಕಾರಿಗಳು ಸಿನಿಮಾದ ಟೈಟಲ್ ಬದಲಾವಣೆ ಮಾಡುವಂತೆ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ