/newsfirstlive-kannada/media/post_attachments/wp-content/uploads/2024/11/JOB_BANK-1.jpg)
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಮಾಹಿತಿ ತಂತ್ರಜ್ಞಾನ (IT) ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಮುಂದಾಗಿದೆ. ಇದಕ್ಕಾಗಿ ಅರ್ಹ ಮತ್ತು ಆಸಕ್ತಿ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡುತ್ತಿದೆ.
ಎಲ್ಲ ವರ್ಗದ ಉದ್ಯೋಗಾಕಾಂಕ್ಷಿಗಳಿಗೆ ಈ ಕೆಲಸಗಳು ಲಭ್ಯ ಇವೆ. ಹೀಗಾಗಿ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೆ ಕೆಲವು ಮಾನದಂಡಗಳನ್ನು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನಿಗದಿ ಮಾಡಿದೆ. ಅಂದರೆ 23 ವರ್ಷದಿಂದ 40 ವರ್ಷದ ಒಳಗಿನವರು ಈ ಕೆಲಸಗಳಿಗೆ ಅಪ್ಲೇ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆ ಮಾಡುವಾಗ ಜನರಲ್, ಇಡಬ್ಲುಎಸ್ ಹಾಗೂ ಓಬಿಸಿ ಅಭ್ಯರ್ಥಿಗಳು 750 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ. ಎಸ್ಸಿ, ಎಸ್ಟಿ, ವಿಶೇಷ ಚೇತನರಿಗೆ ಅರ್ಜಿ ವಿನಾಯತಿ ಇರುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಒಟ್ಟು ಈ ಕೆಲಸಗಳು 24 ಇದ್ದು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉದ್ಯೋಗಗಳು ಆಗಿವೆ. ಕಾಂಟ್ರಾಕ್ಟ್ ಬೇಸ್ ಅಡಿ ಈ ಹುದ್ದೆಗಳಿದ್ದು 3 ವರ್ಷಗಳವರೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮೂರು ವರ್ಷದಲ್ಲಿ ಉತ್ತಮ ಕೆಲಸ ಮಾಡಿದ್ದರೆ ಮತ್ತೆ 12 ತಿಂಗಳುಗಳ ಕಾಲ ಹುದ್ದೆ ವಿಸ್ತರಣೆ ಮಾಡಲಾಗುತ್ತದೆ. ಯಾರಿಗೆ ಈ ಕೆಲಸಗಳನ್ನು ಬಯಸುವರೋ ಅವರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.
ಇದನ್ನೂ ಓದಿ: CWC ಅಲ್ಲಿ ವಿವಿಧ ಹುದ್ದೆಗಳು ಖಾಲಿ ಖಾಲಿ.. 150ಕ್ಕೂ ಹೆಚ್ಚು ಕೆಲಸಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ- ಬಿಇ, ಬಿಟೆಕ್, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ (Electronics & Communication), ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಅಥವಾ ಎಂಸಿಎ ಅಥವಾ ಎಂಎಸ್ಸಿ ಪೂರ್ಣಗೊಳಿಸಿರಬೇಕು. ಅಲ್ಲದೇ ಉದ್ಯೋಗಕ್ಕೆ ಆಯ್ಕೆ ಆದಾಗ ಮೊಬೈಲ್ ರೀಚಾರ್ಜ್, ನ್ಯೂಸ್ ಪೇಪರ್ಗೆ ಹಣ ಹಾಗೂ ಪೆಟ್ರೋಲ್ಗೆ ಬ್ಯಾಂಕ್ ಹಣ ಪಾವತಿ ಮಾಡುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 15 ಜನವರಿ 2025
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 26 ಜನವರಿ 2025
ಸಂದರ್ಶನವನ್ನು ಫೆಬ್ರುವರಿ ಮೊದಲ ವಾರದಲ್ಲಿ ನಡೆಸುವ ಸಾಧ್ಯತೆ ಇದೆ.
ಅರ್ಜಿ ಸಲ್ಲಿಕೆಗೆ ಲಿಂಕ್- https://www.centralbankofindia.co.in/en/recruitments
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ