/newsfirstlive-kannada/media/post_attachments/wp-content/uploads/2024/09/CBSC_EXAMS.jpg)
ನವದೆಹಲಿ: 2025ನೇ ಸಾಲಿನ CBSE (ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ) 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇಕಡಾ 91ರಷ್ಟು ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಶೇಕಡಾ 88.39ರಷ್ಟು ಮಕ್ಕಳು ಪಾಸ್ ಆಗಿದ್ದಾರೆ.
ದೇಶಾದ್ಯಂತ ಕಳೆದ ಫೆಬ್ರವರಿ 15ರಿಂದ 4 ಏಪ್ರಿಲ್‌ವರೆಗೆ CBSE 12ನೇ ತರಗತಿ ಪರೀಕ್ಷೆ ನಡೆಸಲಾಗಿತ್ತು. 2025ನೇ ಸಾಲಿನಲ್ಲಿ 16 ಲಕ್ಷದ 92 ಸಾವಿರದ 794 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 14 ಲಕ್ಷದ 96 ಸಾವಿರದ 307 ಮಕ್ಕಳು 12ನೇ ತರಗತಿ ಪಾಸ್ ಮಾಡಿದ್ದಾರೆ. CBSE 12ನೇ ತರಗತಿ ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಶೇಕಡಾ 0.41ರಷ್ಟು ಹೆಚ್ಚು ಫಲಿತಾಂಶ ಬಂದಿದೆ.
ಇದನ್ನೂ ಓದಿ: ಚಿನ್ನಾಭರಣ ಪ್ರಿಯರಿಗೆ ಖುಷಿ ಸುದ್ದಿ.. ಬೆಂಗಳೂರಿನಲ್ಲಿ 10 ಗ್ರಾಂಗೆ ಎಷ್ಟು ಇಳಿಕೆ?
ಈ ಬಾರಿ CBSE 12ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 99.60ರಷ್ಟು ಫಲಿತಾಂಶ ಪಡೆಯುವ ಮೂಲಕ ವಿಜಯವಾಡ ಇಡೀ ದೇಶದಲ್ಲೇ ನಂ.1 ಸ್ಥಾನ ಪಡೆದಿದೆ. ಶೇ.79.53ರಷ್ಟು ಫಲಿತಾಂಶ ಪಡೆದ ಪ್ರಯಾಗ್‌ರಾಜ್ ಕೊನೆಯ ಸ್ಥಾನದಲ್ಲಿದೆ. ನಮ್ಮ ಬೆಂಗಳೂರು ಶೇಕಡಾ 95.95ರಷ್ಟು ಫಲಿತಾಂಶ ಪಡೆಯೋ ಮೂಲಕ 4ನೇ ಸ್ಥಾನದಲ್ಲಿ ಗಮನ ಸೆಳೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ