newsfirstkannada.com

ಮೊದಲ ಪಟ್ಟಿ ಬಿಡುಗಡೆಗೆ ಬಿಜೆಪಿ ಸಿದ್ಧತೆ.. ಫಸ್ಟ್​ ಲಿಸ್ಟ್​ನಲ್ಲಿ ಯಾರೆಲ್ಲ ಹೆಸರು..? ​

Share :

Published February 29, 2024 at 6:43am

Update February 29, 2024 at 6:44am

    ಇವತ್ತು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಮೊದಲ ಸಭೆ

    ಸಭೆ ಬಳಿಕ 150ಕ್ಕೂ ಹೆಚ್ಚು ಅಭ್ಯರ್ಥಿಗಳ ಲಿಸ್ಟ್‌ ಘೋಷಣೆ?

    ಮೊದಲ ಪಟ್ಟಿಯಲ್ಲಿ ದಿಗ್ಗಜ ನಾಯಕರ ಹೆಸರು ಘೋಷಣೆ

ಲೋಕಸಭಾ ಚುನಾವಣೆಗೆ ಕೇಸರಿ ಪಡೆ ರಣಕಹಳೆ ಮೊಳಗಿಸಲು ಸಜ್ಜಾಗಿದೆ. ತೀಸ್ರೀ ಬಾರ್ ಮೋದಿ ಸರ್ಕಾರ್ ಎಂಬ ಘೋಷಣೆಯೊಂದಿಗೆ ಅಖಾಡಕ್ಕೆ ಇಳಿಯಲು ರಣತಂತ್ರ ರೂಪಿಸಿದೆ. ಈ ನಿಟ್ಟಿನಲ್ಲಿ ಸೇನಾನಿಗಳನ್ನ ಸಂಸತ್‌ ಕುರುಕ್ಷೇತ್ರಕ್ಕೆ ಅಣಿಗೊಳಿಸಲು ಇವತ್ತು ಮಹತ್ವದ ಸಭೆ ಕರೆದಿದೆ. ಮಹತ್ವದ ಮೀಟಿಂಗ್‌ನಲ್ಲಿ ಪ್ರಮುಖ ಹುರಿಯಾಳುಗಳ ಲಿಸ್ಟ್‌ನ ಘೋಷಿಸಲು ಕಮಲ ಪಡೆ ಸಜ್ಜಾಗಿದೆ.

ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ಶಂಖನಾದ ಮೊಳಗಿಸಲು ಸಜ್ಜಾಗಿದೆ. ಇವತ್ತು ಲೋಕಸಭಾ ಸಮರಕ್ಕೆ ಕಮಲ ಪಾಳಯ ಅಧಿಕೃತವಾಗಿ ರಂಗಪ್ರವೇಶ ಮಾಡಲಿದೆ..ಈ ನಿಟ್ಟಿನಲ್ಲಿ ಇವತ್ತು ಬಿಜೆಪಿಯ ಮಹತ್ವದ ಸಭೆ ನಡೆಯಲಿದೆ. ಕೇಸರಿ ಸೇನೆಯ ಕಟ್ಟಾಳುಗಳ ಮೊದಲ ಲಿಸ್ಟ್‌ ಇವತ್ತೇ ತಯಾರಾಗುವ ಸಾಧ್ಯತೆ ಇದೆ.

ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಮೊದಲ ಸಭೆ ಇವತ್ತು ದೆಹಲಿಯಲ್ಲಿ ನಡೆಯಲಿದೆ. ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಧ್ಯಪ್ರದೇಶ, ಹರಿಯಾಣ, ರಾಜಸ್ಥಾನ, ಉತ್ತರಾಖಂಡ್, ಉತ್ತರಪ್ರದೇಶ, ತೆಲಂಗಾಣ, ಛತ್ತೀಸ್‌ಘಡ ಸೇರಿ ಹಲವು ರಾಜ್ಯಗಳ ನಾಯಕರ ಜೊತೆ ಪೂರ್ವಭಾವಿ ಸಭೆ ನಡೆಸಿದ್ದಾರೆ. ಇದೀಗ ಎಲ್ಲಾ ನಾಯಕರ ಅಭಿಪ್ರಾಯವನ್ನು ಬಿಜೆಪಿ ಹೈಕಮಾಂಡ್ ಸಂಗ್ರಹಿಸಿದ್ದು, ಇವತ್ತು ಸಂಜೆ 6 ಗಂಟೆಗೆ ನಡೆಯಲಿರುವ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯಲ್ಲಿ ಅಭ್ಯರ್ಥಿಗಳ ಹೆಸರು ಪ್ರಸ್ತಾಪವಾಗಲಿದೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಭಾಗಿಯಾಗಲಿದ್ದಾರೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಕೂಡಾ ಇವತ್ತು ಸಭೆ ನಿಮಿತ್ತ ದೆಹಲಿಗೆ ತೆರಳಲಿದ್ದಾರೆ.

ಕೇಸರಿ ‘ಲೋಕ’ ಕಸರತ್ತು!

  • ಇವತ್ತು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಮೊದಲ ಸಭೆ
  • ಮೊದಲ ಸಭೆ ನಂತರ 150ಕ್ಕೂ ಹೆಚ್ಚು ಅಭ್ಯರ್ಥಿ ಘೋಷಣೆ
  • ಮೊದಲ ಪಟ್ಟಿಯಲ್ಲಿ ಗಣ್ಯ ನಾಯಕರ ಹೆಸರು ಘೋಷಣೆ
  • ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ನಿರೀಕ್ಷೆ
  • ಗಾಂಧಿನಗರದಿಂದ ಗೃಹ ಸಚಿವ ಅಮಿತ್ ಶಾ ಲೋಕ ಸ್ಪರ್ಧೆ
  • ಲಖನೌನಿಂದ ರಾಜನಾಥ್ ಸಿಂಗ್, ನಾಗ್ಪುರ ನಿತಿನ್ ಗಡ್ಕರಿ
  • ಈ ನಾಯಕರು ಮೊದಲ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ

ಲಿಸ್ಟ್‌ನಲ್ಲಿ ಮತ್ಯಾರೆಲ್ಲಾ ಹೆಸರು?

ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್, ಪಿಯೂಷ್ ಗೋಯಲ್, ಮನ್‌ಸುಖ್ ಮಾಂಡವಿಯಾ, ಪರ್ಶೋತ್ತಮ್ ರೂಪಾಲಾ, ರಾಜೀವ್ ಚಂದ್ರಶೇಖ‌ರ್ ಹೆಸರು ಮೊದಲ ಪಟ್ಟಿಯಲ್ಲಿ ಇರಲಿದೆ ಎನ್ನಲಾಗಿದೆ.. ಇನ್ನುಳಿದಂತೆ ಪಶ್ಚಿಮ ದೆಹಲಿಯಿಂದ ಪರ್ವೇಶ್ ವರ್ಮಾ ಸ್ಪರ್ಧಿಸುವ ಸಾಧ್ಯತೆ ಇದೆ.. ವಾಯುವ್ಯ ದೆಹಲಿಯಿಂದ ಮನೋಜ್ ತಿವಾರಿ, ದಕ್ಷಿಣ ದೆಹಲಿಯಿಂದ ರಮೇಶ್‌ ಬಿಧುರಿ ಹೆಸರು ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಬಹುದು ಎಂದು ಹೇಳಲಾಗಿದೆ.
ಒಟ್ಟಾರೆ, ಸಭೆಯಲ್ಲಿ ಅಂತಿಮವಾಗಿ ಲೋಕಸಭಾ ಕಟ್ಟಾಳುಗಳ ಆಯ್ಕೆಯಾಗಲಿದೆ. ಈ ಮೂಲಕ ಲೋಕಸಭಾ ಚುನಾವಣೆಗೆ ಕೇಸರಿ ಪಡೆಯ ಮೊದಲ ಪಟ್ಟಿ ಬಿಡುಗಡೆಯಾಗೋದು ನಿಶ್ಚಿತವಾಗಿದೆ.

ವಿಶೇಷ ವರದಿ: ಜಗದೀಶ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊದಲ ಪಟ್ಟಿ ಬಿಡುಗಡೆಗೆ ಬಿಜೆಪಿ ಸಿದ್ಧತೆ.. ಫಸ್ಟ್​ ಲಿಸ್ಟ್​ನಲ್ಲಿ ಯಾರೆಲ್ಲ ಹೆಸರು..? ​

https://newsfirstlive.com/wp-content/uploads/2024/02/PM-MODI-9-1.jpg

Load More