/newsfirstlive-kannada/media/post_attachments/wp-content/uploads/2023/06/500-Rupees.jpg)
ನವದೆಹಲಿ: 2016, ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ರೂಪಾಯಿ ಮುಖಬೆಲೆಯ ನೋಟುಗಳನ್ನ ದಿಢೀರ್ ಬ್ಯಾನ್ ಮಾಡೋ ಘೋಷಣೆ ಮಾಡಿದರು. ನೋಟ್ ಬ್ಯಾನ್ ಆದ ಮೇಲೆ ಏನಾಯ್ತು ಅನ್ನೋದನ್ನ ಇಂದಿಗೂ ದೇಶದ ಜನತೆ ಮರೆತಿಲ್ಲ. ಇದಾಗಿ 8 ವರ್ಷಗಳಾದ ಬಳಿಕ ಮತ್ತೊಮ್ಮೆ ನೋಟ್ ಬ್ಯಾನ್ ಸುದ್ದಿ ವೈರಲ್ ಆಗಿದೆ.
500 ರೂಪಾಯಿ ಮುಖಬೆಲೆ ನೋಟ್‌ಗಳನ್ನು 2026ಕ್ಕೆ ಸ್ಥಗಿತಗೊಳಿಸಲಾಗುತ್ತಾ? ಕ್ಯಾಪಿಟಲ್ ಟಿವಿ ಅನ್ನೋ ಯೂಟ್ಯೂಬ್ ಚಾನೆಲ್‌ನಲ್ಲಿ ಹೀಗೊಂದು ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಅದರಲ್ಲಿ 2026 ಮಾರ್ಚ್‌ನಲ್ಲಿ 500 ರೂಪಾಯಿ ನೋಟ್‌ಗಳನ್ನು ಸ್ಥಗಿತಗೊಳಿಸಲಾಗುತ್ತೆ ಎಂದು ಹೇಳಲಾಗಿದೆ.
/newsfirstlive-kannada/media/post_attachments/wp-content/uploads/2023/07/500-RS-Note.jpg)
ಈ ವಿಡಿಯೋ ದೇಶದಾದ್ಯಂತ ಗಮನ ಸೆಳೆದಿದ್ದು, ಕೆಲವೇ ಗಂಟೆಯಲ್ಲಿ ಲಕ್ಷ, ಲಕ್ಷ ವೀವ್ಸ್‌ಗಳನ್ನು ಪಡೆದುಕೊಂಡಿದೆ. ವೈರಲ್ ವಿಡಿಯೋದಲ್ಲಿ ಕೆಲವೇ ವರ್ಷಗಳಲ್ಲಿ ದೇಶಾದ್ಯಂತ 500 ರೂಪಾಯಿ ನೋಟಿನ ಚಲಾವಣೆ ವಿಪರೀತ ಹೆಚ್ಚಾಗಿದೆ. ಹೀಗಾಗಿ 2026ಕ್ಕೆ ಸ್ಥಗಿತಗೊಳಿಸಲಾಗುತ್ತದೆ ಅನ್ನೋ ಹೇಳಿಕೆ ನೀಡಲಾಗಿದೆ.
ಇದನ್ನೂ ಓದಿ: ಮೊದಲು ಶಿವಣ್ಣನ ಭೇಟಿ ಮಾಡ್ತೀನಿ; ಜೈಲಿನಿಂದ ರಿಲೀಸ್ ಆದ ಮಡೆನೂರು ಮನು ಹೇಳಿದ್ದೇನು?
ಇದೊಂದು ಸುಳ್ಳು ಸುದ್ದಿಯಾಗಿದ್ದು, ಕೇಂದ್ರ ಸರ್ಕಾರ ಇದನ್ನು ತಳ್ಳಿ ಹಾಕಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಇದಕ್ಕೆ ಸಂಬಂಧಪಟ್ಟ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರೆಸ್ ಬ್ಯುರೋ ಇನ್ಫಾರ್ಮಶನ್ ಬ್ಯೂರೋ (PIB) ಇದರ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ್ದು, ಸಾರ್ವಜನಿಕರು ಈ ಸುಳ್ಳು ಸುದ್ದಿಯನ್ನು ನಂಬಬೇಡಿ. 500 ನೋಟಿನ ಸ್ಥಗಿತಗೊಳಿಸೋ ಸುದ್ದಿಗೆ ಆತಂಕಗೊಳ್ಳದಿರಿ ಎಂದು ಎಚ್ಚರಿಕೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us