ಕೇಂದ್ರದಿಂದ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್​ನ್ಯೂಸ್​​; ಮಹತ್ವದ ತೀರ್ಮಾನ

author-image
Veena Gangani
Updated On
NHAIನಿಂದ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಈ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ
Advertisment
  • ಕೇಂದ್ರ ಸರ್ಕಾರದ ನೌಕರರಿಗೆ ಶೇ.2 ರಷ್ಟು ಡಿಎ ಏರಿಕೆ
  • ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ
  • ನೌಕರರಿಗೆ ಯುಗಾದಿ ಗಿಫ್ಟ್ ನೀಡಿದ ಕೇಂದ್ರ ಸರ್ಕಾರ

ಬೆಂಗಳೂರು: ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತುಟ್ಟಿ ಭತ್ಯೆ ಹೆಚ್ಚಳದ ಘೋಷಣೆಗಾಗಿ ಕಾಯುತ್ತಿದ್ದರು. ಇದೀಗ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಯುಗಾದಿ ಹಬ್ಬದ ನಿಮಿತ್ತ ಗಿಫ್ಟ್​ವೊಂದನ್ನು ನೀಡಿದೆ.

ಇದನ್ನೂ ಓದಿ:ಭಾರತದ ಹತ್ತಿ ಕಾರ್ಖಾನೆ ಎಂದು ಯಾವ ರಾಜ್ಯವನ್ನು ಕರೆಯಲಾಗುತ್ತದೆ? ಅಧಿಕ ಹತ್ತಿ ಬೆಳೆಯುವ ಸ್ಟೇಟ್ ಯಾವುದು?

ಹೌದು, ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡಾ 2ರಷ್ಟು ಡಿಎ ಏರಿಕೆ ಮಾಡಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಶೇಕಡಾ 53 ರಿಂದ ಶೇ.55ಕ್ಕೆ ಡಿಎ ಏರಿಕೆ ಮಾಡಲಾಗಿದ. ಕೇಂದ್ರ ಸರ್ಕಾರದ ನೌಕರರು, ಪಿಂಚಣಿದಾರರಿಗೆ ಏರಿಕೆಯ ಲಾಭ ಪಡೆಯಲಿದ್ದಾರೆ.

publive-image

ಈ ಹಿಂದೆ, ಅಕ್ಟೋಬರ್ 2024ರಲ್ಲಿ ಡಿಎ ಹೆಚ್ಚಳವನ್ನು ಘೋಷಿಸಲಾಗಿತ್ತು. ಆ ಸಮಯದಲ್ಲಿ, ಕೇಂದ್ರ ಸರ್ಕಾರಿ ನೌಕರರಿಗೆ ಶೇ.3 ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು. ಅದಾದ ನಂತರ ಇದೀಗ ಒಟ್ಟು ತುಟ್ಟಿ ಭತ್ಯೆ ಶೇಕಡಾ 53 ರಿಂದ ಶೇ.55ಕ್ಕೆ ಡಿಎ ಏರಿಕೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment