/newsfirstlive-kannada/media/post_attachments/wp-content/uploads/2025/04/Bike-taxi.jpg)
ಕರ್ನಾಟಕದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿ ನಿಷೇಧಕ್ಕೊಳಗಾಗಿದ್ದ ಬೈಕ್ ಟ್ಯಾಕ್ಸಿ ಸೇವೆ ಕುರಿತು ಕೇಂದ್ರ ಸರ್ಕಾರ ಮಹತ್ವದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ನಿಷೇಧ ಬೆನ್ನಲ್ಲೇ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ.
ಱಪಿಡೊ, ಉಬರ್ ಮತ್ತು ಓಲಾದಂತಹ ಬೈಕ್ ಟ್ಯಾಕ್ಸಿ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನ ಹೊರಡಿಸಿದ್ದು, ಅದರನ್ವಯ ಪ್ರಯಾಣಿಕರ ಖಾಸಗಿ ಮೋಟಾರ್ ಸೈಕಲ್‌ಗಳ ಬಳಕೆಯನ್ನ ಅನುಮತಿಸಲಾಗಿದೆ. ರಾಜ್ಯ ಸರ್ಕಾರ ಅನುಮತಿ ನೀಡಿದರೆ ಕರ್ನಾಟಕದಲ್ಲೂ ಅಗ್ರಿಗೇಟರ್ ಸೇವೆ ಪುನರಾರಂಭ ಆಗಲಿದೆ.
ಇದನ್ನೂ ಓದಿ: ಟೀಂ ಇಂಡಿಯಾಗೆ ಇಂದಿನಿಂದ ಅಗ್ನಿ ಪರೀಕ್ಷೆ; ಶಾರ್ದೂಲ್ ಔಟ್.. ಬದಲಿ ಆಟಗಾರ ಯಾರು..?
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನ ಸಂಗ್ರಾಹಕ ಮಾರ್ಗಸೂಚಿಗಳು 2025 ನ್ನು ಹೊರಡಿಸಿದ್ದು, ಆಯಾ ರಾಜ್ಯ ಸರ್ಕಾರಗಳ ಅನುಮತಿ ಕಡ್ಡಾಯವೆಂದು ಕೇಂದ್ರ ಹೇಳಿದೆ.
ಮಾರ್ಗ ಸೂಚಿಯಲ್ಲಿ ಏನಿದೆ..?
- ರಾಜ್ಯ ಸರ್ಕಾರಗಳು ಖಾಸಗಿ ಬೈಕ್ಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅಗ್ರಿಗೇಟರ್ಗಳಿಗೆ ಅನುಮನತಿ ಕೊಡಬಹುದು
- ಇದರಿಂದ ಸಂಚಾರ ದಟ್ಟಣೆ, ಮಾಲಿನ್ಯ ನಿಯಂತ್ರಣ, ಕೈಗೆಟಕುವ ದರದ ಪ್ರಯಾಣ, ಸ್ಥಳೀಯ ಸಾರಿಗೆ ಅಭಿವೃದ್ಧಿ, ಜೀವನವನ್ನು ರೂಪಿಸುವ ಅವಕಾಶ ಮಾಡಿಕೊಡಬಹುದಾಗಿದೆ
- ರಾಜ್ಯ ಸರ್ಕಾರಗಳು ಮೋಟಾರ್ ವಾಹನ ಕಾಯ್ದೆಯ ಸೆಕ್ಷನ್ 67 ಸಬ್ ಸೆಕ್ಷನ್ (3) ಅಡಿಯಲ್ಲಿ ಅಗ್ರಿಗೇಟರ್ಗಳಿಗೆ ಖಾಸಗಿ ವಾಹನಗಳನ್ನು ಪ್ರಯಾಣಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಬಹುದು
- ಇದರ ಅಡಿಯಲ್ಲಿ ಅಗ್ರಿಗೇಟರ್ಗಳಿಗೆ ದೈನಂದಿನ, ವಾರದ, ಹದಿನೈದು ದಿನದ ಅನುಮತಿಗಾಗಿ ಸರ್ಕಾರ ಶುಲ್ಕವನ್ನು ವಿಧಿಸಬಹುದು.
ಇದನ್ನೂ ಓದಿ: Heart attack: ‘ಕೋವಿಡ್ ಲಸಿಕೆಯ ದುಷ್ಪರಿಣಾಮ ಇರಬಹುದೇ..?’ ಚರ್ಚೆ ಹುಟ್ಟುಹಾಕಿದ ಸಿದ್ದರಾಮಯ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ