newsfirstkannada.com

156 FDC ಔಷಧಿಗಳನ್ನು ಬ್ಯಾನ್​ ಮಾಡಿದ ಕೇಂದ್ರ ಸರ್ಕಾರ! ಹಾಗಿದ್ರೆ ಪ್ಯಾರೆಸಿಟಮಾಲ್ ಇನ್ಮುಂದೆ ಬರಲ್ವಾ?

Share :

Published August 23, 2024 at 8:36am

Update August 23, 2024 at 8:37am

    ಜ್ವರ, ಶೀತ, ಅಲರ್ಜಿಗಳಿಗೆ ಬಳಸುವಂತಹ ಮಾತ್ರೆಗಳಿವು

    ಕೇಂದ್ರ ಸರ್ಕಾರ ಈ ಔಷಧಿಗಳನ್ನು ನಿಷೇಧಿಸಿರೋದು ಏಕೆ?

    ಪ್ಯಾರೆಸಿಟಮಾಲ್​​ FDC ಮಾತ್ರೆಗಳು ಇನ್ಮುಂದೆ ಬರಲ್ಲ

ಕೇಂದ್ರ ಸರ್ಕಾರ 156 ಫಿಕ್ಸೆಡ್​​ ಡೋಸ್​ ಕಾಂಬಿನೇಷನ್​ ಔಷಧಿಗಳನ್ನು ನಿಷೇಧಿಸಿದೆ. ಜ್ವರ, ಶೀತ, ಅಲರ್ಜಿಗಳಿಗೆ ಬಳಸುವಂತಹ ಬ್ಯಾಕ್ಟೀರಿಯಾ ವಿರೋಧಿ ಔಷಧಿಗಳು ಇವುಗಳಲ್ಲಿ ಸೇರಿದ್ದು, ಮನುಷ್ಯರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ.

FDC ಎಂದರೇನು?

ಎಫ್​ಡಿಸಿ ಎಂದರೆ ಫಿಕ್ಸೆಡ್​​ ಡೋಸ್​​ ಕಾಂಬಿನೇಷನ್​ ಎಂದು ಕರೆಯಲಾಗುತ್ತದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ಸಕ್ರಿಯ ಔಷಧೀಯ ಪದಾರ್ಥಗಳನ್ನು ಇವು ಹೊಂದಿರುತ್ತವೆ. ಇದನ್ನು ಕಾಕ್​ಟೈಲ್​ ಡ್ರಗ್ಸ್​ ಎಂದೂ ಕೂಡ ಕರೆಯಲಾಗುತ್ತದೆ.

ಇದನ್ನೂ ಓದಿ: ಮುಂದಿನ 7 ದಿನಗಳ ಕಾಲ ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗೋ ಸಾಧ್ಯತೆ.. ಈ ಜಿಲ್ಲೆಗಳ ಜನರೇ ಕೊಂಚ ಎಚ್ಚರ!

ಕೇಂದ್ರ ಆರೋಗ್ಯ ಸಚಿವಾಲಯವು ಆಗಸ್ಟ್​ 12ರಂದು ಹೊರಡಿಸಿರುವ ಗೆಜೆಟ್​​​ ಅಧಿಸೂಚನೆಯ ಪ್ರಕಾರ, ಕೆಲವು ಫಾರ್ಮಾ ಕಂಪನಿಗಳು ತಯಾರಿಸುವ ನೋವು ನಿವಾರಕ ಔಷಧಿಗಳಲ್ಲಿ ಒಂದಾದ ‘Aceclofenac 50mg + Paracetamol 125mg’ ಮಾತ್ರೆಯನ್ನು ಸರ್ಕಾರ ನಿಷೇಧಿಸಿದೆ.

ಇದಲ್ಲದೆ, ಮೆಫೆನಾಮಿಕ್ ಆಸಿಡ್ + ಪ್ಯಾರೆಸಿಟಮಾಲ್ ಇಂಜೆಕ್ಷನ್, ಸೆಟಿರಿಜಿನ್ ಹೆಚ್‌ಸಿಎಲ್ + ಪ್ಯಾರೆಸಿಟಮಾಲ್ + ಫೆನೈಲ್ಫ್ರಿನ್ ಎಚ್‌ಸಿಎಲ್, ಲೆವೊಸೆಟಿರಿಜಿನ್ + ಫೆನೈಲೆಫ್ರಿನ್ ಎಚ್‌ಸಿಎಲ್ + ಪ್ಯಾರೆಸಿಟಮಾಲ್, ಪ್ಯಾರೆಸಿಟಮಾಲ್ + ಕ್ಲೋರ್‌ಫೆನಿರಮೈನ್ ಮಲೇಟ್ + ಫೆನೈಲ್ ಪ್ರೊಪನೊಲಮೈನ್ ಮತ್ತು ಕ್ಯಾಮಿಲೋಫಿನ್ ಡೈಹೈಡ್ರೋಕ್ಲೋರೈಡ್ 25 ಮಿಗ್ರಾಂ ಮಾತ್ರೆಗಳನ್ನು ನಿಷೇಧಿಸಿದೆ.

ಇದನ್ನೂ ಓದಿ: ದೆಹಲಿ ಪೊಲೀಸರ ವಿರುದ್ಧ ಗಂಭೀರ ಆರೋಪ.. ಇಂದು ಜಡ್ಜ್​ ಮುಂದೆ ನಿಂತು ಸಾಕ್ಷಿ ಹೇಳಲಿದ್ದಾರೆ ವಿನೇಶ್ ಫೋಗಟ್

ಎಫ್​ಡಿಸಿ ಔಷಧಿಗಳು ಮಾನವನಿಗೆ ಭಾರೀ ಅಪಾಯವನ್ನು ತಂದೊಡಡ್ಡುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿ ಕೇಂದ್ರವು ಸರಿಯಾಗಿ ಪರಿಗಣಿಸಿ ಅವುಗಳ ಮೇಲೆ ನಿಷೇಧ ಹೇರಿವೆ. ಇದರ ಜೊತೆಗೆ ಪ್ಯಾರೆಸಿಟಮಾಲ್​​, ಟ್ರಮಾಡಾಕ್​​​, ಟೌರಿನ್​ ಮತ್ತು ಕೆಫೀನ್​ ಜೊತೆಗೂಡಿ ತಯಾರಿಸುವ ಮಾತ್ರೆಗಳನ್ನು ಕೇಂದ್ರ ನಿಷೇಧಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

156 FDC ಔಷಧಿಗಳನ್ನು ಬ್ಯಾನ್​ ಮಾಡಿದ ಕೇಂದ್ರ ಸರ್ಕಾರ! ಹಾಗಿದ್ರೆ ಪ್ಯಾರೆಸಿಟಮಾಲ್ ಇನ್ಮುಂದೆ ಬರಲ್ವಾ?

https://newsfirstlive.com/wp-content/uploads/2024/08/Tablet.jpg

Load More