Advertisment

BREAKING: ಪೆಟ್ರೋಲ್, ಡಿಸೇಲ್ ಲೀಟರ್‌ಗೆ ₹2 ಏರಿಕೆ ಆಗಲ್ಲ! ಕೇಂದ್ರ ಸರ್ಕಾರ ಹೇಳಿದ್ದೇನು?

author-image
Bheemappa
Updated On
BREAKING: ಪೆಟ್ರೋಲ್, ಡಿಸೇಲ್ ಲೀಟರ್‌ಗೆ ₹2 ಏರಿಕೆ ಆಗಲ್ಲ! ಕೇಂದ್ರ ಸರ್ಕಾರ ಹೇಳಿದ್ದೇನು?
Advertisment
  • ಪೆಟ್ರೋಲ್, ಡಿಸೇಲ್​ ದರ ಹೆಚ್ಚಳ ಮಾಡಿ ಸರ್ಕಾರ ಆದೇಶ
  • ತೈಲ ಮೇಲಿನ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಹೇಳುವುದೇನು?
  • ಇತ್ತೀಚೆಗೆ ರಾಜ್ಯ ಸರ್ಕಾರ 2 ರೂಪಾಯಿ ಡಿಸೇಲ್ ಬೆಲೆ ಹೆಚ್ಚಿಸಿತ್ತು

ನವದೆಹಲಿ: ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಪ್ರತಿ ಲೀಟರ್​ಗೆ 2 ರೂಪಾಯಿ ಡೀಸೆಲ್ ದರ ಏರಿಕೆ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಕೂಡ ಪ್ರತಿ ಲೀಟರ್​ಗೆ 2 ರೂಪಾಯಿ ಪೆಟ್ರೋಲ್ ಹಾಗೂ ಡಿಸೇಲ್​ ಬೆಲೆ ಹೆಚ್ಚಳ ಮಾಡಿದೆ.

Advertisment

ಕೇಂದ್ರ ಸರ್ಕಾರದಿಂದ ತೈಲದ ಮೇಲೆ ಅಬಕಾರಿ ಶುಲ್ಕ ಹೆಚ್ಚಳ ಮಾಡಲಾಗಿದೆ. ಪ್ರತಿ ಲೀಟರ್​​ಗೆ 2 ರೂಪಾಯಿ ಏರಿಕೆ ಮಾಡಿದ್ದು ಇದು ಜನ ಸಾಮಾನ್ಯರಿಗೆ ಯಾವುದೇ ರೀತಿಯಿಂದಲೂ ಬರೆ ಬೀಳಲ್ಲ. ಈ ಅಬಕಾರಿ ತೆರಿಗೆಯನ್ನ ತೈಲ ಕಂಪನಿಗಳ ಮೇಲೆ ಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇದರಿಂದ ಜನ ಸಾಮಾನ್ಯರು ಆತಂಕಪಡಬೇಕಿಲ್ಲ ಎಂದು ಹೇಳಲಾಗಿದೆ.

ಕೇಂದ್ರ ಸರ್ಕಾರ ತೈಲದ ಮೇಲೆ ಅಬಕಾರಿ ಶುಲ್ಕ ಹೆಚ್ಚಳ ಮಾಡಿದ್ದು ಇಂದು ಮಧ್ಯರಾತ್ರಿಯಿಂದಲೇ ದೇಶಾದ್ಯಂತ ಜಾರಿಗೆ ಬರುತ್ತಿದೆ. ಏಪ್ರಿಲ್ 8ರಿಂದ ಕೇಂದ್ರ ಸರ್ಕಾರ 2 ರೂಪಾಯಿ ಹೆಚ್ಚುವರಿ ಅಬಕಾರಿ ತೆರಿಗೆಯನ್ನ ತೈಲ ಕಂಪನಿಗಳ ಮೇಲೆ ಹಾಕಿದೆ. ಪರಿಷ್ಕೃತ ಅಬಕಾರಿ ತೆರಿಗೆಯಿಂದಾಗಿ ಪೆಟ್ರೋಲ್ ಮೇಲೆ ಲೀಟರ್‌ 13 ರೂಪಾಯಿ. ಡಿಸೇಲ್ ಮೇಲೆ ಲೀಟರ್‌ಗೆ 10 ರೂಪಾಯಿ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಇಂದು ಪಾಂಡ್ಯ ಟೀಮ್​ಗೆ ಕಾದಿದೆ ಮಾರಿಹಬ್ಬ.. ವಿರಾಟ್ ಕೊಹ್ಲಿ ಬ್ಲಾಕ್​​ಬಸ್ಟರ್ ಇನ್ನಿಂಗ್ಸ್ ಪಕ್ಕಾ!

Advertisment

publive-image

ಪ್ರತಿ ಲೀಟರ್​ಗೆ 2 ರೂಪಾಯಿಯಂತೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮೊನ್ನೆ ಮೊನ್ನೆಯಷ್ಟೇ ಕರ್ನಾಟಕ ಸರ್ಕಾರ ಡಿಸೇಲ್ ಮೇಲೆ ಎರಡು ರೂಪಾಯಿ ಹೆಚ್ಚಳ ಮಾಡಿತ್ತು. ಇದೀಗ ಸರ್ಕಾರ ಏಪ್ರಿಲ್ 7 ರಂದು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ತಲಾ 2 ರೂಪಾಯಿ ಹೆಚ್ಚಿಸಿದೆ. ಜಾಗತಿಕ ತೈಲ ಬೆಲೆಗಳಲ್ಲಿನ ಏರಿಳಿತಗಳಿಂದ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಸಿಎಂ ಸಿದ್ದರಾಮಯ್ಯ ಸರ್ಕಾರ ಎರಡು ರೂಪಾಯಿ ಡೀಸೆಲ್ ಬೇಲೆ ಏರಿಕೆ ಮಾಡಿತ್ತು. ಈ ದರ ಏರಿಕೆಗೆ ಲಾರಿ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ದರ ಹೆಚ್ಚಳವನ್ನು ವಿರೋಧಿಸಿ ಲಾರಿ ಮಾಲೀಕರ ಸಂಘ ಇದೇ ಏಪ್ರಿಲ್​ 14 ರಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment