/newsfirstlive-kannada/media/post_attachments/wp-content/uploads/2024/05/BNG_AIRPORT.jpg)
ನವದೆಹಲಿ: ಭಾರತ, ಪಾಕ್ ಸಂಘರ್ಷದ ಮಧ್ಯೆ ಉತ್ತರ ಭಾರತದ 30ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು ಬಂದ್ ಆಗಿದ್ದವು. ಯುದ್ಧದ ಭೀತಿಯ ಹಿನ್ನೆಲೆಯಲ್ಲಿ ಜಮ್ಮು ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳನ್ನು ಮೇ 15ರವರೆಗೆ ಬಂದ್ ಮಾಡುವಂತೆ ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆ ಆದೇಶಿಸಿತ್ತು.
ಉತ್ತರ ಭಾರತದಲ್ಲಿ ಬಂದ್ ಆಗಿದ್ದ 32 ಏರ್‌ಪೋರ್ಟ್‌ಗಳನ್ನು ತಕ್ಷಣವೇ ಓಪನ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ನೀಡಿದೆ. ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆ ಈ ಬಗ್ಗೆ ಅಧಿಕೃತ ಆದೇಶ ಪ್ರಕಟಿಸಿದೆ.
ಭಾರತದ ಮೇಲೆ ಪಾಕಿಸ್ತಾನ ಕ್ಷಿಪಣಿ, ಡ್ರೋನ್ ದಾಳಿಗೆ ಪ್ರಯತ್ನಿಸುತ್ತಿದ್ದಂತೆ ಜಮ್ಮು ಕಾಶ್ಮೀರ, ಪಂಜಾಬ್, ಹಿಮಾಚಲ ಪ್ರದೇಶ, ರಾಜಸ್ಥಾನದ ಏರ್‌ಪೋರ್ಟ್‌ಗಳನ್ನು ಬಂದ್ ಮಾಡಲಾಗಿತ್ತು.
ಸದ್ಯ ಭಾರತ- ಪಾಕ್ ನಡುವೆ ಕದನ ವಿರಾಮದ ಒಪ್ಪಂದ ಮಾಡಿಕೊಳ್ಳಲಾಗಿದೆ. ನಿನ್ನೆ ರಾತ್ರಿ ಗಡಿ ಭಾಗದ ಜನರು ನೆಮ್ಮದಿಯಾಗಿ ನಿದ್ದೆ ಮಾಡಿದ್ದಾರೆ. ಗಡಿಯಲ್ಲಿ ವಾತಾವರಣ ತಿಳಿಯಾಗುತ್ತಿದ್ದಂತೆ ಮುಚ್ಚಿದ್ದ ಎಲ್ಲಾ ಏರ್‌ಪೋರ್ಟ್‌ಗಳನ್ನು ಓಪನ್ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ ಸಕ್ಸಸ್ ಹಿಂದೆ ಇಸ್ರೋ ಪ್ರಮುಖ ಪಾತ್ರ; ವಿಜ್ಞಾನಿಗಳು ನೆರವಾಗಿದ್ದು ಹೇಗೆ?
ಉತ್ತರ ಭಾರತದಲ್ಲಿ ಕ್ಲೋಸ್ ಆಗಿದ್ದ ಎಲ್ಲಾ ಏರ್‌ಪೋರ್ಟ್‌ಗಳನ್ನು ತಕ್ಷಣದಿಂದಲೇ ಓಪನ್ ಮಾಡಲು ಕೇಂದ್ರ ಸರ್ಕಾರ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ