/newsfirstlive-kannada/media/post_attachments/wp-content/uploads/2025/06/AC-Use-new-Rules.jpg)
ನವದೆಹಲಿ: ದೇಶದಲ್ಲಿ ಏರ್ ಕಂಡೀಷನ್ (AC) ಮೆಷಿನ್‌ಗಳಿಗೆ ಹೊಸ ರೂಲ್ಸ್ ಜಾರಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಈ ಹೊಸ ನಿಯಮದಲ್ಲಿ ಏರ್ ಕಂಡೀಷನ್ ಮೆಷಿನ್‌ಗಳಿಗೆ ಸ್ಟಾಂಡರ್ಡ್ ಟೆಂಪರೆಚರ್ ನಿಗದಿಪಡಿಸಲಾಗುತ್ತದೆ. ಹೊಸ AC ಹಾಗೂ ಹಾಲಿ ಇರುವ ACಗಳಿಗೂ ಈ ಹೊಸ ನಿಯಮ ಅನ್ವಯ ಆಗುತ್ತಿದೆ.
ದೇಶದಲ್ಲಿ ಸದ್ಯ ಬಳಕೆಯಲ್ಲಿರುವ ACಗಳಲ್ಲಿ 18 ಡಿಗ್ರಿ ಸೆಲ್ಸಿಯಸ್‌ನಿಂದ 30 ಡಿಗ್ರಿ ಸೆಲ್ಸಿಯಸ್‌ವರೆಗೂ ಉಷ್ಣಾಂಶ ಏರಿಳಿತ ಮಾಡಬಹುದಾಗಿದೆ. ಇನ್ಮುಂದೆ 20 ಡಿಗ್ರಿ ಸೆಲ್ಸಿಯಸ್‌ನಿಂದ 28 ಡಿಗ್ರಿ ಸೆಲ್ಸಿಯಸ್‌ವರೆಗೂ ಮಾತ್ರ ಉಷ್ಣಾಂಶ ಬಳಕೆ ಮಾಡಬೇಕು.
/newsfirstlive-kannada/media/post_attachments/wp-content/uploads/2025/06/Indian-AC-use-rules.jpg)
ಸದ್ಯದಲ್ಲೇ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಅನ್ವಯವಾಗುವಂತೆ ಈ ಹೊಸ ನಿಯಮವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹೊಸ ರೂಲ್ಸ್‌ನಲ್ಲಿ ಮನೆ ಅಥವಾ ವಾಣಿಜ್ಯ ಕಟ್ಟಡಗಳಲ್ಲಿ ಬಳಸುವ ಏರ್ ಕಂಡೀಷನ್ ಮೆಷಿನ್‌ಗಳು 20 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಕೂಲ್ ಮಾಡಲ್ಲ. 28 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣಾಂಶ ಇರದಂತೆ ಮಾಡಲಾಗುತ್ತದೆ.
/newsfirstlive-kannada/media/post_attachments/wp-content/uploads/2024/03/Manohar-lal-Khattar.jpg)
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. AC ಗಳಲ್ಲಿ ಉಷ್ಣಾಂಶವನ್ನು ತೀರಾ ಕಡಿಮೆ ಮಾಡಿದ್ರೆ ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತೆ. ದೇಶದಲ್ಲಿ ವಿದ್ಯುತ್ ಬಳಕೆಯ ಮೇಲೆ ನಿಯಂತ್ರಣ ಹಾಗೂ ಎನರ್ಜಿ ಡಿಮ್ಯಾಂಡ್ ಅನ್ನು ನಿರ್ವಹಣೆ ಮಾಡುವ ಉದ್ದೇಶದಿಂದ ACಗಳಿಗೆ ಸ್ಟಾಂಡರ್ಡ್ ಟೆಂಪರೆಚರ್ ನಿಗದಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಬೇಸಿಗೆಯ ಕಾಲದಲ್ಲಿ ಬಹಳಷ್ಟು ಮಂದಿ ಕಡಿಮೆ ಉಷ್ಣಾಂಶವನ್ನು ಎಸಿಯಲ್ಲಿ ಫಿಕ್ಸ್ ಮಾಡುತ್ತಾರೆ. ಇದರಿಂದ ಹೆಚ್ಚಿನ ವಿದ್ಯುತ್ ಬಳಕೆ ಆಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇಂಧನ, ಹೌಸಿಂಗ್ ಇಲಾಖೆಯ ಹಿರಿಯ ಅಧಿಕಾರಿ ಪಂಕಜ್ ಅಗರವಾಲ್ ಅವರು ದೇಶದಲ್ಲಿ ಈಗ ಏರ್ ಕಂಡೀಷನ್‌ಗಳು 50 ಗೀಗಾ ವ್ಯಾಟ್ ವಿದ್ಯುತ್ ಬಳಸುತ್ತಿವೆ. ಅಂದರೆ ದೇಶದ ವಿದ್ಯುತ್ ಬೇಡಿಕೆಯ ಶೇ. 20ರಷ್ಟು ವಿದ್ಯುತ್ ಅನ್ನು ಏರ್ ಕಂಡೀಷನ್‌ಗೆ ಬಳಕೆ ಮಾಡಲಾಗುತ್ತಿದೆ. ಏರ್ ಕಂಡೀಷನ್ ಒಂದು ಪರ್ಸೆಂಟ್ ಉಷ್ಣಾಂಶ ಜಾಸ್ತಿ ಮಾಡಿದ್ರೆ ಶೇ.6ರಷ್ಟು ವಿದ್ಯುತ್ ಉಳಿತಾಯ ಆಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜಾ ರಘುವಂಶಿ ಮದ್ವೆಗೂ ಮೊದಲೇ ಅಪ್ಪ-ಅಮ್ಮನಿಗೆ ಎಚ್ಚರಿಕೆ ಕೊಟ್ಟಿದ್ದ ಹನಿಮೂನ್​ ಸೋನಂ..!
AC ಹೊಸ ರೂಲ್ಸ್‌ನಿಂದ ಲಾಭವೇನು?
ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಎಸಿ ಬಳಕೆ ಹೆಚ್ಚಾಗುತ್ತಿದೆ. ಮಾಲಿನ್ಯ ತಡೆಗಟ್ಟುವುದು, ಸುಸ್ಥಿರ ಇಂಧನಕ್ಕಾಗಿ ಈ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ದೇಶದಲ್ಲಿ ACಯ ಹೊಸ ರೂಲ್ಸ್ ಜಾರಿಯಿಂದ ಪವರ್ ಗ್ರಿಡ್ ಮೇಲಿನ ಪ್ರೆಷರ್ ಕೂಡ ಕಡಿಮೆಯಾಗುತ್ತೆ.
ಮನೆ, ವಾಣಿಜ್ಯ ಕಟ್ಟಡಗಳಿಗೆ ಸದ್ಯದಲ್ಲೇ ಹೊಸ ನಿಯಮ ಜಾರಿಗೊಳಿಸಲಾಗುತ್ತಿದೆ. ಎಸಿ ಉತ್ಪಾದಿಸುವವರೆ ಹೊಸ ನಿಯಮಕ್ಕೆ ಅನುಗುಣವಾಗಿ ಎಸಿ ತಯಾರಿಸಬೇಕು. ಹೊಸ ರೂಲ್ಸ್ ಜಾರಿಯನ್ನು ಕೇಂದ್ರ ಸರ್ಕಾರವೇ ಮಾನಿಟರ್ ಮಾಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us