/newsfirstlive-kannada/media/post_attachments/wp-content/uploads/2024/09/JOB_SBI-1.jpg)
ಭಾರತದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. 1955ರಲ್ಲಿ ಸ್ಥಾಪಿತವಾದ SBI ಇಡೀ ದೇಶಾದ್ಯಂತ ಅನೇಕ ಶಾಖೆಗಳನ್ನು ಹೊಂದಿದೆ. ಎಲ್ಲಾ ಬ್ಯಾಂಕುಗಳಂತೆಯೇ ಎಸ್‌ಬಿಐ ಕೂಡ ಪರ್ಸನಲ್, ಬ್ಯುಸಿನೆಸ್ ಮತ್ತು ಕಾರ್ಪೊರೇಟ್ ಬ್ಯಾಂಕಿಂಗ್ ಸೇವೆಯನ್ನು ಒದಗಿಸುತ್ತದೆ. ಅದರಲ್ಲೂ ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಸುರಕ್ಷಿತ ಹಣಕಾಸು ಸೇವೆ ಒದಗಿಸಲು SBI ಹೆಸರುವಾಸಿ.
ಕೇಂದ್ರ ಸರ್ಕಾರ ಈಗ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ಹಣಕಾಸು ವರ್ಷದಲ್ಲಿ ಎಸ್‌ಬಿಐ 500 ಹೊಸ ಶಾಖೆಗಳನ್ನು ತೆರೆಯಲಿದೆ ಎಂದು ಕೇಂದ್ರ ಹಣಕಾಸಿನ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.
ಮುಂದಿನ ವರ್ಷಾಂತ್ಯಕ್ಕೆ ಎಸ್‌ಬಿಐ ನೆಟ್ವರ್ಕ್ ವಿಸ್ತರಿಸೋ ಪ್ಲಾನ್ ಕೇಂದ್ರ ಸರ್ಕಾರದ್ದು. ನಾವು ಒಟ್ಟು ಇನ್ನೂ 500 ಹೊಸ ಶಾಖೆಗಳನ್ನು ತೆರೆಯಲಿದೆ. ಬಳಿಕ ಇವು ಒಟ್ಟು 23,000 ಶಾಖೆಗಳು ಆಗಲಿವೆ. ಜತೆಗೆ ಇನ್ನೂ ಎಟಿಎಂಗಳನ್ನು ಹೆಚ್ಚು ಮಾಡಲಿದ್ದೇವೆ. ಸದ್ಯ ಇಡೀ ದೇಶಾದ್ಯಂತ ಎಸ್‌ಬಿಐ 63,580 ಎಟಿಎಂ ಹೊಂದಿದೆ ಎಂದರು.
ಗ್ರಾಹಕರಿಗೆ ಭರ್ಜರಿ ಗುಡ್ನ್ಯೂಸ್
ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದ ಹಿಂದಿನ ಉದ್ದೇಶ ಜನರಿಗೆ ಸುಲಭವಾಗಿ ಹಣಕಾಸು ಸೇವೆಗಳನ್ನು ಒದಗಿಸುವುದು. ಜತೆಗೆ ದೇಶದ ಆರ್ಥಿಕತೆಗೆ ಸಹಾಯ ಮಾಡುವುದು. ದೇಶದ ಠೇವಣಿಗಳಲ್ಲಿ ಶೇ.22.4 ರಷ್ಟು ಪಾಲನ್ನು ಎಸ್‌ಬಿಐ ಹೊಂದಿದೆ. ಇದು ಸುಮಾರು 50 ಕೋಟಿ ಬಳಕೆದಾರರಿಗೆ ಸೇವೆ ನೀಡುತ್ತದೆ. ಒಂದು ರೋಡಿಗೆ ಒಂದು ಎಟಿಎಂ ತೆರೆಯೋ ಪ್ಲಾನ್ ಎಸ್‌ಬಿಐ ಬ್ಯಾಂಕಿನದ್ದು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮಲ್ಯ, ನೀರವ್ ಮೋದಿ ಬಗ್ಗೆ ಬಿಗ್ ಅಪ್ಡೇಟ್ಸ್; G20 ಶೃಂಗಸಭೆಯಲ್ಲಿ ನಡೆದಿದ್ದೇನು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್