/newsfirstlive-kannada/media/post_attachments/wp-content/uploads/2025/07/BANK_STUDENTS.jpg)
ಹೆಚ್ಚಿನ ವ್ಯಾಸಂಗಕ್ಕೆ ವಿದ್ಯಾರ್ಥಿಗಳಿಗೆ ಸಾಲದ ರೂಪದಲ್ಲಿ ನೀಡುವ ಹಣ ಸಹಾಯವನ್ನು Education loan ಎಂದು ಕರೆಯುತ್ತೇವೆ. ಇಂಟರ್, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ಮೆಡಿಸಿನ್, ಪಿಜಿ ಡಿಪ್ಲೋಮಾ, ಸಿಎ, ವೃತ್ತಿಪರ ಕೋರ್ಸ್‌ಗಳು, ಐಐಎಂ, ಮ್ಯಾನೇಜ್‌ಮೆಂಟ್, ಐಐಟಿ, ವೃತ್ತಿಪರ ಶಿಕ್ಷಣ ಕೋರ್ಸ್ ಮಾಡುವ ಎಲ್ಲರಿಗೂ ಎಜುಕೇಷನ್ ಲೋನ್ ಸಿಗುತ್ತದೆ. ಸಾಮಾನ್ಯವಾಗಿ ಭಾರತದ ಎಲ್ಲಾ ಪ್ರಮುಖ ಬ್ಯಾಂಕುಗಳಲ್ಲಿ ಈ ರೀತಿಯ ಸೇವೆ ಲಭ್ಯವಿದೆ. ಈ ರೀತಿಯ ಸಾಲದ ಮೇಲಿನ ಬಡ್ಡಿ 8.1 ಪ್ರತಿಶತದಿಂದ ಶುರುವಾಗಿ 16 ಪ್ರತಿಶತದವೆರೆಗೂ ಹೋಗುತ್ತದೆ.
ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಬಯಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವುದು ದುಬಾರಿ ಆಗಿದೆ. ಎಲ್‌ಕೆಜಿಯಿಂದ ಹಿಡಿದು ಮಾಸ್ಟರ್ ಡಿಗ್ರಿಯವರಗೆ ಖರ್ಚು ದಿನದಿಂದ ದಿನಕ್ಕೆ ದುಬಾರಿಯಾಗುತ್ತಲೇ ಇದೆ. ಪೋಷಕರಿಗೆ ಇದು ಹೊರೆಯಾದ್ರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲೇಬೇಕು ಎಂದು ಮುಂದಾಗುತ್ತಾರೆ. ಅದಕ್ಕಾಗಿ ಹಲವು ಹಣಕಾಸಿನ ತೊಂದರೆಗಳನ್ನು ಪೋಷಕರು ಮತ್ತು ವಿದ್ಯಾರ್ಥಿಗಳು ಅನುಭವಿಸುತ್ತಿದ್ದಾರೆ.
ಪೋಷಕರ ಮೇಲಿರುವ ಹೊರೆಯನ್ನು ಕಡಿಮೆ ಮಾಡಲು ಬ್ಯಾಂಕ್‌ಗಳು ಎಜುಕೇಷನ್ ಲೋನ್ ನೀಡುತ್ತವೆ. ಫಾರಿನ್ನಲ್ಲಿ ಓದೋಕೆ ಮಾತ್ರವಲ್ಲದೆ ಭಾರತದಲ್ಲೂ ಓದಲು ಎಜುಕೇಷನ್ ಲೋನ್ ಸಿಗುತ್ತೆ. ಪ್ರವೇಶ ಶುಲ್ಕ, ಹಾಸ್ಟೆಲ್ ಸೌಕರ್ಯ, ಸಮವಸ್ತ್ರ, ಗ್ರಂಥಾಲಯ ಮತ್ತು ಪ್ರಯೋಗಾಲಯಗಳಿಗೆ ಪ್ರವೇಶ, ಪುಸ್ತಕಗಳು ಮತ್ತು ಲ್ಯಾಪ್‌ಟಾಪ್, ಪಠ್ಯ ಸಾಮಗ್ರಿಗಳು, ಸಾರಿಗೆ ವೆಚ್ಚ ಸೇರಿದಂತೆ ಕೋರ್ಸ್‌ಗೆ ಸಂಬಂಧಿಸಿದ ವಿವಿಧ ವೆಚ್ಚಗಳಿಗೆ ಸಾಲ ನೀಡಲಾಗುತ್ತದೆ. ಇದಕ್ಕೆ ಸರ್ಟೈನ್ ರೂಲ್ಸ್ ಇದೆ. ಕೆಲವೊಮ್ಮೆ ಎಜುಕೇಷನಲ್ ಲೋನ್ ಸಿಗೋದು ಅಷ್ಟು ಸುಲಭವಲ್ಲ. ಹಲವು ಬಾರಿ ಬ್ಯಾಂಕ್‌ಗಳು ವಿದ್ಯಾರ್ಥಿಗಳಿಗೆ ಎಜುಕೇಷನಲ್ ಲೋನ್ ನೀಡಲು ಆಟ ಆಡಿಸುತ್ತವೆ. ಇದರಿಂದ ವಿದ್ಯಾರ್ಥಿಗಳು ತೊಂದರೆಗೆ ಒಳಗಾಗುತ್ತಾರೆ. ಇಂಥವರಿಗೆ ಕೇಂದ್ರ ಸರ್ಕಾರ ಗುಡ್ನ್ಯೂಸ್ ನೀಡಿದೆ.
ಕೇಂದ್ರ ಸರ್ಕಾರ ಕೊಟ್ಟ ಗುಡ್ನ್ಯೂಸ್ ಏನು..?
ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ನೀಡಲು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ವಿಳಂಬ ಮಾಡುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರೋ ಕೇಂದ್ರ ಸರ್ಕಾರ ಅರ್ಹ ಅರ್ಜಿದಾರರಿಗೆ 15 ದಿನಗಳಲ್ಲಿ ಸಾಲ ಮಂಜೂರು ಮಾಡಬೇಕು ಎಂದು ಸೂಚನೆ ನೀಡಿದೆ.
ಯಾವುದೇ ಕಾರಣಕ್ಕೂ ಮನಸೋಇಚ್ಛೆ ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ. ಅರ್ಜಿ ತಿರಸ್ಕರಿಸೋ ಮುನ್ನ ಸಂಬಂಧಿಸಿದ ಉನ್ನತ ಪ್ರಾಧಿಕಾರದ ಅನುಮೋದನೆ ಪಡೆಯಬೇಕು. ಯಾವ ಕಾರಣದಿಂದ ಅರ್ಜಿ ಮಾನ್ಯ ಮಾಡಲಾಗುತ್ತಿಲ್ಲ ಎಂಬುದರ ಕುರಿತು ಅರ್ಜಿದಾರ ವಿದ್ಯಾರ್ಥಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದು ಬ್ಯಾಂಕ್ಗಳಿಗೆ ಕೇಂದ್ರ ಹೇಳಿದೆ.
ವಿದ್ಯಾರ್ಥಿಗಳು ಸಾಲಕ್ಕೆ ಅರ್ಜಿ ಸಲ್ಲಿಸೋದು ಹೇಗೆ?
ಶಿಕ್ಷಣ ಸಾಲ ಬೇಕಿರೋ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿದ್ಯಾಲಕ್ಷ್ಮಿ ಪೋರ್ಟಲ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಯಾವ ಬ್ಯಾಂಕ್‌ನಿಂದ ಸಾಲ ಪಡೆಯಲು ಇಚ್ಛಿಸಿದ್ದಾರೆ ಅನ್ನೋದನ್ನು ನಮೂದಿಸಬೇಕು. ಅರ್ಜಿ ಸಲ್ಲಿಸಲು ಅಡ್ಮಿಶನ್ ಲೆಟರ್, ಶುಲ್ಕ ವಿವರ, ಆದಾಯ ಪ್ರಮಾಣಪತ್ರ, ಅಂಕಪಟ್ಟಿ ಕಡ್ಡಾಯವಾಗಿದೆ. 15 ದಿನಗಳಿಂದ ಸಾಲ ನೀಡದೇ ಇದ್ದರೆ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರಿಗೆ ದೂರು ಸಲ್ಲಿಸಬಹುದು. ಬ್ಯಾಂಕ್‌ನ ಶಿಕ್ಷಣ ಸಾಲ ಕೋಶಕ್ಕೆ ದೂರು, ಬ್ಯಾಂಕಿಂಗ್ ಒಬಡ್ಸ್‌ಮನ್‌ಗೆ ತಿಳಿಸಬಹುದು. ಹಣಕಾಸು ಸಚಿವಾಲಯದ ದೂರು ಪೋರ್ಟಲ್ ದಾಖಲಿಸಬಹುದಾಗಿದೆ. ಯಾವುದೇ ಕಾರಣಕ್ಕೂ ದಾಖಲೆಗಳ ಪರಿಶೀಲನೆ, ಸಾಲ ನೀಡಿಕೆ ಪ್ರಕ್ರಿಯೆಯಲ್ಲಿ ವಿಳಂಬ ಮಾಡಬಾರದು ಎಂದು ಕೇಂದ್ರ ಹಣಕಾಸು ಸಚಿವಾಲಯ ಬ್ಯಾಂಕ್ಗಳಿಗೆ ಸ್ಪಷ್ಟವಾಗಿ ಹೇಳಿದೆ.
ಇದನ್ನೂ ಓದಿ:IIIT ಬೆಂಗಳೂರು ವಿದ್ಯಾರ್ಥಿಗೆ ಲಕ್.. ಪ್ರತಿಷ್ಠಿತ ಕಂಪನಿಯಲ್ಲಿ 1.45 ಕೋಟಿ ರೂಪಾಯಿ ಸಂಬಳದ ಉದ್ಯೋಗ!
ಸಾಲದ ಬೇಡಿಕೆ ಅನುಸಾರ ಬ್ಯಾಂಕ್‌ಗಳು ನೇರ ಶಿಕ್ಷಣ ಸಂಸ್ಥೆಗಳಿಗೆ ಮೊತ್ತ ಪಾವತಿಸಲಾಗುತ್ತದೆ. ಸಾಮಾನ್ಯವಾಗಿ ಇದಕ್ಕೆ 1 ತಿಂಗಳ ಕಾಲಾವಕಾಶ ಇರುತ್ತದೆ. ಆದರೆ ನಮಗೆ ಹಲವು ರಾಜ್ಯಗಳಿಂದ ದೂರುಗಳು ಬಂದಿದ್ದು, ಬ್ಯಾಂಕ್‌ಗಳು ಬೇಕಂತಲೇ 3-4 ತಿಂಗಳು ಕಾಲ ಕಳೆಯುತ್ತಾ ವಿಳಂಬ ಮಾಡುತ್ತಿವೆ. ಸಾಲ ಮಂಜೂರು ಮಾಡಿ ಅಂದ್ರೆ ದಾಖಲೆಗಳು ಸರಿಯಿಲ್ಲ ಅನ್ನೋದು ಬ್ಯಾಂಕ್‌ಗಳ ಸಮಜಾಯಿಷಿ. ಈಗ ವ್ಯವಸ್ಥೆಯ ಲೋಪಗಳನ್ನು ಸರಿಪಡಿಸಿ ತ್ವರಿತ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ. ಮೇ ತಿಂಗಳವರೆಗೆ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕು. ಈ ಕುರಿತು ವರದಿಯನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಿದ್ದೇವೆ ಅಂತಾ ಹಣಕಾಸು ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
ವಿದ್ಯಾಲಕ್ಷ್ಮಿ ಅಥವಾ ಡಾ ಅಂಬೇಡ್ಕರ್ ಶಿಕ್ಷಣ ಸಾಲ ಯೋಜನೆ ಅಡಿಯಲ್ಲಿ ನೀಡೋ ಎಜುಕೇಷನಲ್ ಲೋನ್ಗೆ ದೊಡ್ಡ ಮಟ್ಟದ ಸಬ್ಸಿಡಿ ಸಿಗುತ್ತದೆ. ಇದಕ್ಕೂ ಹೆಚ್ಚು ಆದ್ಯತೆ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ