ನಿಮ್ಮ ಮೊಬೈಲ್​​ನಲ್ಲಿ ಈ App ಇದ್ರೆ ಕೂಡಲೇ Uninstall ಮಾಡಿ; ಕೇಂದ್ರ ಸರ್ಕಾರದಿಂದ ಖಡಕ್​ ಎಚ್ಚರಿಕೆ

author-image
Ganesh Nachikethu
Updated On
ನಿಮ್ಮ ಫೋನ್​​ನಲ್ಲಿ ಇವರ ನಂಬರ್ ಇದೆಯಾ? ಇಲ್ಲದಿದ್ರೆ ಈಗಲೇ ಸೇವ್ ಮಾಡಿಕೊಳ್ಳಿ..
Advertisment
  • ಸರ್ಕಾರಿ ಏಜೆನ್ಸಿಯಿಂದ ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆ
  • ಕೆಲವು ಮೊಬೈಲ್ ಅಪ್ಲಿಕೇಷನ್​ಗಳಿಂದ ದೂರ ಇರಲು ಸೂಚನೆ
  • ಈ ಆ್ಯಪ್​​ ಅನ್​ ಇನ್​ಸ್ಟಾಲ್ ಮಾಡದಿದ್ರೆ ಆಪತ್ತು ಗ್ಯಾರಂಟಿ

ದೆಹಲಿ: ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಕೆಲವು ಮೊಬೈಲ್ ಅಪ್ಲಿಕೇಷನ್​​ಗಳಿಂದ ದೂರ ಇರಿ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಏಜೆನ್ಸಿ ಸೈಬರ್​ ದೋಸ್ತ್​ ಎಚ್ಚರಿಕೆ ಕೊಟ್ಟಿದೆ.

ಇತ್ತೀಚೆಗೆ ಸೈಬರ್ ಪ್ರಕರಣಗಳು ಹೆಚ್ಚುತ್ತಿವೆ. ಆನ್​ಲೈನ್​ ಮೂಲಕ ವಂಚಿಸಿ ಯಾಮಾರಿಸ್ತಿದ್ದು, ಜಾಗೃತರಾಗಿರಿ ಎಂದು ಹೇಳಿದೆ. CashExpand-U ಫೈನಾನ್ಸ್ ಅಸಿಸ್ಟೆಂಟ್ ಲೋನ್ ಅಪ್ಲಿಕೇಷನ್​ ಬಗ್ಗೆ ಜಾಗರೂಕರಾಗಿರಿ. ಇದು ವಿದೇಶಿ ಶತ್ರುಗಳಿಗೆ ಸಂಬಂಧಿಸಿರಬಹುದು ಎಂದು ಹೇಳಿದೆ.

ಇನ್ನು ಈ ಅಪ್ಲಿಕೇಷನ್​​ನನ್ನು ಗೂಗಲ್ ಪ್ಲೇ ಸ್ಟೋರ್​ನಿಂದ ತೆಗೆದು ಹಾಕಲಾಗಿದೆ. ಆದರೆ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಡೌನ್​ಲೋಡ್​ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಅಪ್ಲಿಕೇಷನ್ 4.4 ರೇಟ್ ಪಡೆದುಕೊಂಡಿದೆ. ಇದರ ಬಗ್ಗೆ 7.19 ಸಾವಿರ ಮಂದಿ ವಿಶ್ಲೇಷಣೆ ಮಾಡಿದ್ದಾರೆ. ಈ ಅಪ್ಲಿಕೇಷನ್ ಸಾಲ ಸೌಲಭ್ಯ ಒದಗಿಸುತ್ತಿತ್ತು, ಅದರ ಬಗ್ಗೆ ಹುಷಾರಾಗಿರಿ ಎಂದು ಎಚ್ಚರಿಕೆ ನೀಡಲಾಗಿದೆ.

ಒಂದು ವೇಳೆ ನಿಮ್ಮ ಮೊಬೈಲ್​​ನಲ್ಲಿ ಈ ಅಪ್ಲಿಕೇಷನ್​ ಇದ್ದರೆ ಕೂಡಲೇ ಅನ್​ ಇನ್​ಸ್ಟಾಲ್ ಮಾಡಿ. ಇಲ್ಲದಿದ್ರೆ ನಿಮ್ಮ ಮೊಬೈಲ್​ನಲ್ಲಿರುವ ದಾಖಲೆಗಳಿಗೆ ಹಾನಿ ಮಾಡಬಹುದು. ಜೊತೆಗೆ ಆರ್ಥಿಕವಾಗಿ ಪೆಟ್ಟು ನೀಡಬಹುದು.

ಇದನ್ನೂ ಓದಿ:ಸ್ಟಾರ್​ ಆಟಗಾರನಿಗೆ ದಿಢೀರ್​ ಹಾರ್ಟ್​ ಅಟ್ಯಾಕ್​​; ಅಸಲಿಗೆ ಆಗಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment