newsfirstkannada.com

ಅಮಿತ್ ಶಾ ಆಗಮನದಿಂದ ಕಮಲಪಡೆಯಲ್ಲಿ ಹೊಸ ಹುರುಪು.. ಹೇಗಿದೆ ಗೊತ್ತಾ ‘ಚಾಣಕ್ಯ’ನ ಚುನಾವಣಾ ತಂತ್ರ..?

Share :

Published February 11, 2024 at 9:17am

    ಎರಡೆರಡು ಸಭೆಗಳ ಮೂಲಕ ಚುನಾವಣಾ ಚಿಂತನಾ-ಮಂಥನ

    ಅಮಿತ್ ಶಾರನ್ನ ಸ್ವಾಗತಿಸಿದ ಬಿ.ವೈ ವಿಜಯೇಂದ್ರ ಮತ್ತು ಸಿ.ಟಿ.ರವಿ

    ಮಂಡ್ಯ ಮತ್ತು ಹಾಸನ ಟಿಕೆಟ್ ಬಿಜೆಪಿಗೆ ನೀಡಬೇಕು-ಪ್ರೀತಂಗೌಡ

ಲೋಕಸಭಾ ಚುನಾವಣೆಗೆ ಕಮಲ ಪಾಳಯ ಸಿದ್ಧವಾಗ್ತಿದೆ. 3ನೇ ಬಾರಿ ಮೋದಿ ಅನ್ನೋ ಟಾರ್ಗೆಟ್​ನಡಿ ಎಲೆಕ್ಷನ್ ತಂತ್ರಗಳು ಶುರುವಾಗಿದೆ. ಕರುನಾಡಲ್ಲೂ ಕೇಸರಿ ಪಡೆಯ ಲೆಕ್ಕಾಚಾರ ಜೋರಿದೆ. ಇದರ ಭಾಗವಾಗಿ ರಾಜ್ಯಕ್ಕೆ ಬಿಜೆಪಿ ಚಾಣಕ್ಯ, ಅಮಿತ್ ಶಾ ಎಂಟ್ರಿಯಾಗಿದೆ.

ಲೋಕಸಭೆ ಸಿದ್ಧತೆ ನಡುವೆ ಕರುನಾಡಿಗೆ ಅಮಿತ್ ಶಾ ಆಗಮನ

ಲೋಕಸಭಾ ಎಲೆಕ್ಷನ್​ಗೆ ಸಿದ್ಧತೆ ನಡೀತಿರೋ ನಡುವೆಯೇ ಕರುನಾಡಿಗೆ ಅಮಿತ್ ಶಾ ಆಗಮನವಾಗಿದೆ. ಚುನಾವಣಾ ತಂತ್ರಗಾರನ ಆಟ ರಾಜ್ಯದಲ್ಲಿ ಇಂದು ನಡೆಯಲಿದೆ. ಅರ್ಥಾತ್ ಸಭೆಗಳ ಮೂಲಕ ಸಿದ್ಧತೆ ನಡೆಸಲಿದ್ದಾರೆ. ಕಮಲಕಲಿಗಳನ್ನ ಸಿದ್ಧಗೊಳಿಸಲಿದ್ದಾರೆ. ತಡರಾತ್ರಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾರನ್ನ ಬಿ.ವೈ ವಿಜಯೇಂದ್ರ ಹಾಗೂ ಸಿ.ಟಿ.ರವಿ ಸ್ವಾಗತಿಸಿದ್ರು. ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿರೋ ಚಾಣಕ್ಯ ಇಂದು ರಾಜ್ಯದಲ್ಲಿ ಸಂಚರಿಸಲಿದ್ದಾರೆ.

ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲಿರುವ ಅಮಿತ್ ಶಾ, ಬಳಿಕ ಹೆಲಿಕಾಪ್ಟರ್ ಮೂಲಕ ಸುತ್ತೂರು ಮಠಕ್ಕೆ ತೆರಳಲಿದ್ದಾರೆ. ಅಲ್ಲಿನ ಕಾರ್ಯಕ್ರಮ ಮುಗಿಸಿ, 2 ಪ್ರಮುಖ ಸಭೆಗಳಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಮೊದಲನೆಯ ಸಭೆಯ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ, ಎರಡನೆಯದು ಲೋಕಸಭಾ ಚುನಾವಣೆಯ ಹಿನ್ನೆಲೆ ರಚನೆಯಾಗಿರುವ ಕ್ಲಸ್ಟರ್ ಮೀಟಿಂಗ್​.. ಈ ಎರಡೂ ಸಭೆಯಲ್ಲಿ ಚರ್ಚೆಯಾಗೋದು ಎಲೆಕ್ಷನ್ ತಂತ್ರಗಾರಿಕೆ.

‘ಚಾಣಕ್ಯ’ನ ಚುನಾವಣಾ ತಂತ್ರ

  • 2023 ರಾಜ್ಯ ಚುನಾವಣೆಯ ಬಳಿಕ ಮೊದಲ ಬಾರಿಗೆ ಶಾ ಭೇಟಿ
  • ಸಂಘಟನೆ, ನೂತನ ರಾಜ್ಯಾಧ್ಯಕ್ಷರ ಕಾರ್ಯವೈಖರಿ ಬಗ್ಗೆ ಚರ್ಚೆ
  • ಲೋಕಸಭಾ ಚುನಾವಣೆಯ ಸಂಘಟನೆ ಹೇಗೆ ನಡೆಯುತ್ತಿದೆ?
  • ಹಾಲಿ ಸಂಸದರುಗಳ ಕಾರ್ಯವೈಖರಿ ಹೇಗಿದೆ? ಎಂಬ ಪರಾಮರ್ಶೆ
  • ಅಭ್ಯರ್ಥಿಗಳು ಬದಲಾವಣೆಯಾಗುವ ಕ್ಷೇತ್ರಗಳ ಬಗ್ಗೆಯೂ ಚರ್ಚೆ
  • ಮೈತ್ರಿಯಾಗಿರೋ ಕಾರಣ ಹಳೆಯ ಮೈಸೂರು ಭಾಗದ ಬಗ್ಗೆ ಚರ್ಚೆ
  • ಎಲ್ಲೆಲ್ಲಿ ಅಭ್ಯರ್ಥಿ ಕಣಕ್ಕಿಳಿಸಬೇಕು? ಯಾವ ಕ್ಷೇತ್ರ ಯಾರ ಪಾಲು?
  • 30 ನಿಮಿಷಗಳ ಕೋರ್ ಕಮಿಟಿ ಸಭೆಯಲ್ಲಿ ಹಲವು ವಿಚಾರ ಚರ್ಚೆ

ಇನ್ನು, ಅಮಿತ್ ಶಾ ಬಂದಿರೋದ್ರ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರಲ್ಲಿ ಲೆಕ್ಕಾಚಾರಗಳೂ ಶುರುವಾಗಿದೆ.

ಅಮಿತ್ ಶಾ ಜೊತೆ ಮಾತುಕತೆಗೆ ಪ್ರೀತಂಗೌಡ ಸಜ್ಜು

ಮೈತ್ರಿಯಾಗಿದ್ದರೂ, ಮಂಡ್ಯ ಮತ್ತು ಹಾಸನ ಟಿಕೆಟ್ ಬಿಜೆಪಿಗೆ ನೀಡಬೇಕು ಅಂತಾ ಪಟ್ಟು ಹಿಡಿದಿರೋ ಪ್ರೀತಂಗೌಡ ಇದನ್ನೇ ಅಮಿತ್ ಶಾ ಮುಂದೆ ಪ್ರಸ್ತಾಪಿಸಲು ಸಜ್ಜಾಗಿದ್ದಾರೆ. ಶಕ್ತಿಮೀರಿ ಪ್ರಯತ್ನಿಸಿ ಗೆಲ್ಲುತ್ತೇವೆ ಅಂತಾ ಮನದಟ್ಟು ಮಾಡಿಕೊಡಲು ಪ್ಲಾನ್ ಮಾಡ್ಕೊಂಡಿದ್ದಾರೆ.

ಮಂಡ್ಯ-ಹಾಸನ ಬಿಜೆಪಿಗೆ ನೀಡಬೇಕು

ಜೆಡಿಎಸ್​​ನವರಿಗೆ ಬೇರೆ ಜಿಲ್ಲೆಗಳನ್ನ ಕೊಟ್ಟು ಬಿಜೆಪಿಗೆ ಹಾಸನ, ಮಂಡ್ಯ ಕೊಡಬೇಕು ಎನ್ನುವುದು ಕಾರ್ಯಕರ್ತರ ಅಪೇಕ್ಷೆ ಇದೆ. ಅಮಿತ್ ಶಾ ಅವರು ನಮ್ಮ ಸರ್ವೋಚ್ಚ ನಾಯಕರು. ಅವರು ಏನು ತೀರ್ಮಾನ ತೆಗೆದುಕೊಳ್ಳುವರೋ ಅದಕ್ಕೆ ನಾವು ಬದ್ಧ. ಆದರೆ ವಾಸ್ತವಿಕ ಸತ್ಯವನ್ನು ತಿಳಿಸುವಂತ ಕೆಲಸ ನಾವು ಮಾಡುತ್ತೇವೆ.

ಪ್ರೀತಂಗೌಡ, ಮಾಜಿ ಶಾಸಕ

ಅಮಿತ್ ಶಾ ರಾಜ್ಯಕ್ಕೆ ಬಂದಿರೋದು ಕಮಲಪಡೆಯಲ್ಲಿ ಹೊಸ ಹುರುಪು ತಂದಿದೆ. ಈ ವೇಳೆ ಕಾಂಗ್ರೆಸ್ ವಿರುದ್ಧದ ಹೋರಾಟಕ್ಕೆ ಒಂದಷ್ಟು ಸಲಹೆಗಳನ್ನೂ ಅಮಿತ್ ಶಾ ನೀಡಬಹುದು. ಹೀಗಾಗಿ ಚಾಣಕ್ಯನ ಈ ಭೇಟಿ ಕುತೂಹಲ ಹಾಗೂ ಮಹತ್ವ ಪಡೆದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮಿತ್ ಶಾ ಆಗಮನದಿಂದ ಕಮಲಪಡೆಯಲ್ಲಿ ಹೊಸ ಹುರುಪು.. ಹೇಗಿದೆ ಗೊತ್ತಾ ‘ಚಾಣಕ್ಯ’ನ ಚುನಾವಣಾ ತಂತ್ರ..?

https://newsfirstlive.com/wp-content/uploads/2024/02/VIJAYEDRA_SHAH_3.jpg

Load More